Tap to Read ➤

ಹೆಚ್ಚು ಸಮಯ ಓದಲು ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಹೇಗೆ ಗೊತ್ತಾ ?

ವಿದ್ಯಾರ್ಥಿಗಳು ಹೆಚ್ಚಿನ ಸಮಯ ಅಧ್ಯಯನವನ್ನು ಮಾಡಲು ಗಮನವನ್ನು ಕೇಂದ್ರೀಕರಿಸುವುದು ಹೇಗೆ ತಿಳಿಯಿರಿ.
kavya L
ಪರೀಕ್ಷೆಗಳಿಗೆ ಹೆಚ್ಚಿನ ಸಿದ್ಧತೆಯನ್ನು ನಡೆಸುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಅಧ್ಯಯನವನ್ನು ಕೈಗೊಳ್ಳಲು ಗಮನಸನವನ್ನು ಕೇಂದ್ರೀಕರಿಸುವುದು ಹೇಗೆ ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಅಧ್ಯಯನಕ್ಕೆ ಕೂರುವಾಗ ಒಳ್ಳೆಯ ಮನಸ್ಸಿನಿಂದ ಕುಳಿತು ಅಧ್ಯಯನ ಆರಂಭಿಸಿ.
ನೀವು ಇಂದು ಅಧ್ಯಯನ ಮಾಡಬೇಕಾದ ವಿಷಯಗಳನ್ನು ಮೊದಲು ಪಟ್ಟಿ ಮಾಡಿ.
ವಿದ್ಯಾರ್ಥಿಗಳು ನಿಮ್ಮ ನೆಚ್ಚಿನ ವಿಷಯದೊಂದಿಗೆ ಓದನ್ನು ಪ್ರಾರಂಭಿಸಿ.
ಓದಲು ಕುಳಿತಾಗ ಮನಸ್ಸನ್ನು ಯಾವುದೇ ಗೊಂದಲಗಳಿಗೆ ಒಳಗಾಗಲು ಅವಕಾಶ ನೀಡದಿರಿ.
ವಿದ್ಯಾರ್ಥಿಯು ಇಂತಿಷ್ಟು ಸಮಯದೊಳಗೆ ನಿಗದಿತ ವಿಷಯಗಳ ಅಧ್ಯಯನ ವೇಳಾಪಟ್ಟಿ ಹಾಕಿಕೊಳ್ಳಿ.
ಅಧ್ಯಯನ ಮಾಡುವಾಗ ಅಗತ್ಯ ನೀರು ಮತ್ತು ಪಾನಕ ಸೇವಿಸುವ ಮೂಲಕ ಆರೋಗ್ಯದ ಕಡೆಗೆ ಗಮನ ಕೊಡಿ.
15 ನಿಮಿಷಗಳ ಕಾಲ ಧ್ಯಾನ ಮಾಡುವ ಮೂಲಕ ವಿರಾಮವನ್ನು ತೆಗೆದುಕೊಳ್ಳಿ.
ನಂತರ ಮತ್ತೊಂದು ವಿಷಯದತ್ತ ಗಮನ ಹರಿಸುತ್ತಾ ಮುಂದಿನ ಅಧ್ಯಯನ ಕೈಗೊಳ್ಳಿ.
ಹೀಗೆ ನಿರಂತರ ಉತ್ತಮ ಅಧ್ಯಯನ ಕೈಗೊಂಡಲ್ಲಿ ಅಧ್ಯಯನದೆಡೆಗೆ ಹೆಚ್ಚು ಹೊತ್ತು ನಿಮ್ಮ ಗಮನವನ್ನು  ಕೇಂದ್ರೀಕರಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text