Tap to Read ➤

ಕೇವಲ 2 ಲಕ್ಷ ಬಂಡವಾಳದಲ್ಲಿ ಮಾಡಬಹುದಾದ ಸಣ್ಣ ವ್ಯಾಪಾರಗಳು

2 ಲಕ್ಷ ಬಂಡವಾಳದಲ್ಲಿ ಯಾವೆಲ್ಲಾ ವ್ಯಾಪಾರಗಳನ್ನು ಮಾಡಬಹುದು ಗೊತ್ತಾ ?
kavya L
ಕೈತುಂಬಾ ಹಣ ಎಲ್ಲರ ಹತ್ತಿರವೂ ಇರುವುದಿಲ್ಲ. ಆದರೆ ಕೈಲಿರುವ 2 ಲಕ್ಷದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.
ಡ್ರೈವಿಂಗ್ ತರಬೇತಿ ನೀಡಲು ಆಸಕ್ತಿಯಿದ್ದರೆ ವಾಹನ ಚಾಲನಾ ಶಾಲೆಯನ್ನು ಪ್ರಾರಂಭಿಸಬಹುದು. ಕಡಿಮೆ ಬಂಡವಾಳ ಜೊತೆಗೆ ಉನ್ನತಿಯನ್ನು ಕೂಡ ಕಾಣಬಹುದು.
ಈಗೆಲ್ಲಾ ಮದುವೆ ಯೋಜನೆಯ ಕೆಲಸಕ್ಕೆ ಹೆಚ್ಚು ಬೇಡಿಕೆ. ಹಾಗಾಗಿ ನೀವು ಕ್ರೀಯಾತ್ಮಕವಾಗಿ ಮದುವೆಗಳನ್ನು ಆಯೋಜಿಸುವ ವ್ಯಾಪಾರ ಕ್ಷೇತ್ರದಲ್ಲಿ ಹೆಜ್ಜೆ ಇಡಬಹುದು.
ಮೊಬೈಲ್ ಬಳಕೆ ಎಂದಿಗೂ ನಿಲ್ಲದ ವಸ್ತುವಿನ ಅಗತ್ಯತೆ ಎಂದರೆ ತಪ್ಪಿಲ್ಲ. ಹಾಗಾಗಿ ಮೊಬೈಲ್ ಸಂಬಂಧಿತ ಸಲಕರಣೆಗಳನ್ನು ಮಾರಾಟ ಮಾಡುವ ಉದ್ಯಮಕ್ಕೆ ಕೈಹಾಕಬಹುದು.
ತಿನಿಸು ನೀಡುವ ಬೇಕರಿಯನ್ನು ಕೂಡ ತೆರೆಯಬಹುದು. ಗ್ರಾಹಕರ ಮೆಚ್ಚುಗೆ ಜೊತೆಗೆ ಇಷ್ಟದ ಬದುಕನ್ನು ಕೂಡ ಕಟ್ಟಿಕೊಳ್ಳಬಹುದು.
ಬೋಧನೆಯಲ್ಲಿ ಆಸಕ್ತಿ ಹೊಂದಿದ್ದರೆ ತರಬೇತಿ ಶಾಲೆಗಳನ್ನು ನಡೆಸಬಹುದು. ಇಲ್ಲಿ ಬಂಡವಾಳದಷ್ಟೇ ಲಾಭವನ್ನು ಪಡೆಯಬಹುದು.
ಕಸದಿಂದ ರಸ ತೆಗೆಯುವ ಕೆಲಸ, ಇದೊಂದು ಉತ್ತಮ ಬಂಡವಾಳದ ವ್ಯಾಪಾರ. ಇಲ್ಲಿ ಖರ್ಚು ಕಡಿಮೆಗೊಳಿಸಿದಷ್ಟು ಆದಾಯವನ್ನು ತೆಗೆಯಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text