Tap to Read ➤

5 ಲಕ್ಷ ಬಂಡವಾಳದಲ್ಲಿ ಮಾಡಬಹುದಾದ ಉದ್ಯೋಗಗಳು

ಕೈಲಿರುವ 5 ಲಕ್ಷ ಬಂಡವಾಳದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ತಿಳಿಯಿರಿ.
kavya L
ನಿಮ್ಮ ಬಳಿ 5 ಲಕ್ಷ ಹಣವಿದ್ದರೆ ಅದರಿಂದ ಯಾವೆಲ್ಲಾ ವ್ಯಾಪಾರವನ್ನು ಮಾಡಬಹುದು ಎಂದು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ ಓದಿ ತಿಳಿಯಿರಿ.
ಮದುವೆ ಸಮಾರಂಭಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಬಾಡಿಗೆ ನೀಡುವ ಅಂಗಡಿಯನ್ನು ಹಾಕುವುದು. ಒಮ್ಮೆ ಬಂಡವಾಳ ಹಾಕಿದರೆ ಸಾಕು, ಮುಂದಿನ ದಿನಗಳಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು.
ಕಾಲ ಬದಲಾದಂತೆ ಉಡುಗೆ ತೊಡುಗೆಗಳ ಅಭಿರುಚಿಯೂ ಬದಲಾಗುತ್ತದೆ. ಹಾಗಾಗಿ ಬಟ್ಟೆ ಅಂಗಡಿಯನ್ನು ಸ್ಥಾಪಿಸಿದರೆ, ಖಂಡಿತವಾಗಿಯೂ ಏಳಿಗೆಯನ್ನು ಕಾಣಬಹುದು.
ಮೊಬೈಲ್ ಬಳಕೆ ಹೆಚ್ಚುತ್ತಲೇ ಇರುವುದರಿಂದ ಮೊಬೈಲ್ ಅಂಗಡಿ ಸ್ಥಾಪಿಸುವುದು ಕೂಡ ಉತ್ತಮ ಆಲೋಚನೆ. ಆದರೆ ಇದಕ್ಕೊಂದಿಷ್ಟು ಜ್ಞಾನದ ಅವಶ್ಯಕತೆ ಇರುತ್ತದೆ.
ಸಿಸಿಟಿವಿ ಕ್ಯಾಮೇರಾ ವ್ಯಾಪಾರ ಕೂಡ ಬಹುಬೇಡಿಕೆಯ ಉದ್ಯಮ. ಈ ರೀತಿಯ ಕೆಲಸಗಳಲ್ಲಿ ವಸ್ತುಗಳ ಬಗ್ಗೆ ಮಾಹಿತಿ ಜೊತೆಗೆ ಮಾರಾಟ ಮಾಡುವ ಕೌಶಲ್ಯ ಮುಖ್ಯವಾಗಿರುತ್ತದೆ.
ಐಸ್‌ ಕ್ರೀಂ ಪಾರ್ಲರ್ ನಡೆಸುವುದು ಒಳ್ಳೆಯ ರೀತಿಯ ಆಲೋಚನೆ. ತಿನಿಸು ಪ್ರಿಯರು ಇರುವವರೆಗೂ ಐಸ್‌ ಕ್ರೀಂ ಮಾರಾಟಕ್ಕೆ ನಷ್ಟವಿಲ್ಲ.
ಬ್ಯೂಟಿ ಪಾರ್ಲರ್ ಅನ್ನು ಪ್ರಾರಂಭಿಸುವುದು ಕೂಡ ಉತ್ತಮ ಆಯ್ಕೆ. ಬಂಡವಾಳಕ್ಕೆ ತಕ್ಕಂತೆ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು.
ಮಹಿಳೆ ಅಥವಾ ಪುರುಷರಿಗಾಗಿ ಪಿಜಿ ಅನ್ನು ತೆರೆಯಬಹುದು. ನಿಮ್ಮ ಕೈಲಿರುವ ಬಂಡವಾಳಕ್ಕೆ ಇದು ಸೂಕ್ತವೆಂದರೆ ತಪ್ಪಿಲ್ಲ.
ಫೋಟೋಗ್ರಫಿ ಅಂದರೆ ಎಲ್ಲಾ ಕಾಲಕ್ಕೂ ಬೇಡಿಕೆಯಿರುವ ಒಂದು ಕೌಶಲ್ಯಯುತ ಉದ್ಯೋಗ. ಹಾಗಾಗಿ ಫೋಟೋಗ್ರಫಿಯಲ್ಲಿ ಆಸಕ್ತಿಯಿದ್ದವರು ಆಸಕ್ತಿಯನ್ನು ತೆರೆಯಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text