Tap to Read ➤

ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆ

ದ್ವಿತೀಯ ಪಿಯು ಜೀವಶಾಸ್ತ್ರ ಪರೀಕ್ಷಾ ತಯಾರಿಗೆ ಸಲಹೆಗಳು
ಕರ್ನಾಟಕ ದ್ವಿತೀಯ ಪಿಯುಸಿ ಜೀವಶಾಸ್ತ್ರದ ವಿಷಯದ ಪರೀಕ್ಷೆಯು ಮೇ 4ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.
ಸಮಯ ನಿಗದಿ : ಈಗಾಗಲೇ ಪರೀಕ್ಷೆಗಳು ಆರಂಭಗೊಂಡಿದ್ದು, ಇದೀಗ ಉಳಿದಿರುವ ಸಮಯದಲ್ಲಿ ಜೀವಶಾಸ್ತ್ರ ಅಧ್ಯಯನಕ್ಕೆ ಇಂತಿಷ್ಟು ಸಮಯ ಎಂದು ನಿಗದಿಪಡಿಸಿಕೊಂಡು ಅಧ್ಯಯನ ಮಾಡಿ.
ಟಿಪ್ಪಣಿ ಅಧ್ಯಯನ : ನೀವು ಅಧ್ಯಯನ ಮಾಡುವಾಗ ನಮೂದಿಸಿಕೊಂಡ ಟಿಪ್ಪಣಿಗಳನ್ನು ಈಗ ಅಧ್ಯಯನ ಮಾಡಿ
ಸ್ನೇಹಿತರೊಂದಿಗೆ ಚರ್ಚೆ : ನೀವು ತಿಳಿದಿರುವ ವಿಷಯಗಳ ಕುರಿತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮಲ್ಲಿ ಸಂದೇಶಗಳಿದ್ದರೆ ಅವರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ.
ಪ್ರಶ್ನೆಪತ್ರಿಕೆಗಳ ಅಧ್ಯಯನ : ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಕೈಗೊಳ್ಳಿ.
ಸಮಯ ನಿರ್ವಹಣೆ : ಪರೀಕ್ಷಾ ಕೇಂದ್ರಕ್ಕೆ ಹೋಗುವ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡುವುದು ಹೇಗೆ ಎಂದು ಈಗಲೇ ತಯಾರಿ ನಡೆಸಿ.
ಚಿತ್ರಬಿಡಿಸುವ ಅಭ್ಯಾಸ : ಜೀವಶಾಸ್ತ್ರ ವಿಷಯದಲ್ಲಿ ಅಮೀಬಾ ಸೇರಿದಂತೆ ಇತರ ಜೀವಕೊಶಗಳ ಚಿತ್ರಬಿಡಿಸುವಿಕೆಯನ್ನು ಕರಗತ ಮಾಡಿಕೊಳ್ಳಿ.
ಪರೀಕ್ಷಾ ಹಿಂದಿನ ದಿನ ತಯಾರಿ : ಪರೀಕ್ಷಾ ಹಿಂದಿನ ಉತ್ತಮ ನಿದ್ದೆ ಮಾಡಿ. ಹಿತವಾದ ಮನಸ್ಸಿನಿಂದ ಪರೀಕ್ಷೆ ಬರೆಯಿರಿ
ಹೆಚ್ಚಿನ ಸಲಹೆ ಮತ್ತು ಮಾಹಿತಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text