Tap to Read ➤

ಜೆಇಇ ಅಡ್ವಾನ್ಸ್ಡ್ ಪರೀಕ್ಷೆ 2022

ಜೆಇಇ ಅಡ್ವಾನ್ಸ್ಡ್ ಪರೀಕ್ಷೆ 2022ಗೆ ತಯಾರಿ ಸಲಹೆಗಳು ಇಲ್ಲಿವೆ
kavya L
ಜಂಟಿ ಪ್ರವೇಶ ಪರೀಕ್ಷೆ, JEE ಅಡ್ವಾನ್ಸ್ಡ್ 2022 ಪರೀಕ್ಷೆಯನ್ನು ಆಗಸ್ಟ್ 28,2022 ರಂದು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಸಲಹೆಗಳು ಇಲ್ಲಿವೆ.
ಸಮಯ ನಿರ್ವಹಣೆ : JEE ಅಡ್ವಾನ್ಸ್ಡ್ 2022 ಪರೀಕ್ಷೆಯು 3 ಗಂಟೆಗಳ ಅವಧಿಯದ್ದಾಗಿರುವುದರಿಂದ ಆಕಾಂಕ್ಷಿಗಳು ಪ್ರತಿ ವಿಷಯಕ್ಕೆ ಅನುಗುಣವಾಗಿ ತಮ್ಮ ಅಧ್ಯಯನ ಮಾಡಬೇಕಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಅಣಕು ಪರೀಕ್ಷೆಗಳು ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಯೋಗಿಕ ಆವೃತ್ತಿಗಳಾಗಿದ್ದು, ಆಕಾಂಕ್ಷಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪತ್ತೆಹಚ್ಚಲು ಈ ರೀತಿಯ ಅಧ್ಯಯನ ಸಹಾಯ ಮಾಡುತ್ತದೆ.
ಆಕಾಂಕ್ಷಿಗಳು ಸಾಮಾನ್ಯವಾಗಿ ಪರೀಕ್ಷೆಯ ಸಮಯದಲ್ಲಿ ಅತಿಯಾದ ಒತ್ತಡವನ್ನು ಅನುಭವಿಸುತ್ತಾರೆ. ನೀವು ಅತಿಯಾಗಿ ಯೋಚಿಸಿದಾಗಲೆಲ್ಲಾ ನಿಮ್ಮನ್ನು ಬೇರೆ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳಿ, ಹೀಗೆ ಮಾಡುವ ಮೂಲಕ ನಿಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸುವುದು ಮುಖ್ಯ.
ಅಭ್ಯಾಸ ಮತ್ತು ಅಧ್ಯಯನ ಮುಖ್ಯ, ಆದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಕಾಂಕ್ಷಿಗಳು ತಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಯೋಜನೆಯನ್ನು ಹಾಕಿಕೊಳ್ಳುವುದು ತುಂಬಾನೆ ಮುಖ್ಯ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸಾಕಷ್ಟು ನಿದ್ರೆಯನ್ನು ಮಾಡುವುದು ಮುಖ್ಯವಾಗಿದೆ. ಆಕಾಂಕ್ಷಿಗಳು ತಯಾರಿಯ ಹಂತದಲ್ಲಿ ವಿಶೇಷವಾಗಿ ಕೊನೆಯ ತಿಂಗಳಲ್ಲಿ ಬೇಗನೆ ಏಳುವುದನ್ನು ರೂಢಿಸಿಕೊಳ್ಳಬೇಕು, ಇದರಿಂದ ಅವರು ಪರೀಕ್ಷೆಯ ಸಮಯದಲ್ಲಿ ಸಕ್ರಿಯರಾಗಿರುತ್ತಾರೆ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text