Tap to Read ➤

ಕ್ರಿಯೇಟಿವ್ ಏಜೆನ್ಸಿ ಉದ್ಯಮ

ಕ್ರಿಯೇಟಿವ್ ಏಜೆನ್ಸಿಯಲ್ಲಿರುವ ಉದ್ಯೋಗಾವಕಾಶಗಳು
ಸೃಜನಶೀಲ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಕ್ರಿಯೇಟಿವ್ ಏಜೆನ್ಸಿಯಲ್ಲಿ ಲಭ್ಯವಿರುವ ಉದ್ಯೋಗಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕಲಾ ನಿರ್ದೇಶಕ : ಕಲಾ ನಿರ್ದೇಶಕನು ತನ್ನ ತಂಡಕ್ಕೆ ತನ್ನ ಯೋಜನೆಯ ಸಂಪೂರ್ಣ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾನೆ ಮತ್ತು ಕಲ್ಪನೆಯನ್ನು ಉತ್ತಮ ರೂಪದಲ್ಲಿ ಪ್ರದರ್ಶಿಸುವ ನಕಲು, ಚಿತ್ರಣ, ಸ್ಟೋರಿಬೋರ್ಡ್‌ಗಳು ಮತ್ತು ಬಜೆಟ್‌ಗಳನ್ನು ಅನುಮೋದಿಸುತ್ತಾರೆ.
ಗ್ರಾಫಿಕ್ ಡಿಸೈನರ್ : ಯಾವುದೇ ಅಕ್ಷರ ಅಥವಾ ಚಿತ್ರವನ್ನು ಸಂಕ್ಷಿಪ್ತವಾಗಿ ಡಿಜಿಟಲ್ ಗ್ರಾಫಿಕ್ಸ್ ಆಗಿ ಪರಿವರ್ತಿಸುವುದರಿಂದ ನೋಡುಗರ ಕಣ್ಮನಸೆಳೆಯುತ್ತದೆ. ಪರಿಣಾಮಕಾರಿ ಸಂವಹನಕ್ಕಾಗಿ ದೃಶ್ಯ ಟೋನ್ ಅನ್ನು ಹೊಂದಿಸುವುದು ಜೊತೆಗೆ ಸಹಜತೆಯನ್ನು ತುಂಬುವುದು ಗ್ರಾಫಿಕ್ ಡಿಸೈನರ್ ಕೆಲಸವಾಗಿರುತ್ತದೆ.
ಕಂಟೆಂಟ್ ರೈಟರ್ : ಕಂಟೆಂಟ್ ರೈಟರ್ ಆಗಿರುವುದರಿಂದ ನೀವು ಮೊದಲು ಕಥೆಗಾರನಾಗಿರಬೇಕು. ಪ್ರೇಕ್ಷಕರು ಯಾವ ರೀತಿಯ ಮಾಹಿತಿಯನ್ನು ತಿಳಿಯಲು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬರವಣಿಗೆಯ ತಾಂತ್ರಿಕ ಅಂಶವಾಗಿದೆ. ಪ್ರತಿದಿನ ಕಥೆಗಳನ್ನು ಬರೆಯುವ ಕೌಶಲ್ಯವನ್ನು ಹೊಂದಿರಬೇಕು.
ಬ್ರಾಂಡ್ ಕಾರ್ಯನಿರ್ವಾಹಕ : ಬ್ರ್ಯಾಂಡ್ ಕಾರ್ಯನಿರ್ವಾಹಕರಾಗಿ ಕ್ಲೈಂಟ್ ಸೇವೆಯ ಜೊತೆಗೆ ಬ್ರ್ಯಾಂಡ್ ಜಾಗೃತಿಯನ್ನು ಆದ್ಯತೆಯಾಗಿ ಇಟ್ಟುಕೊಳ್ಳುವುದು ಪ್ರಮುಖ ಕಾರ್ಯವಾಗಿರುತ್ತದೆ. ಇದಲ್ಲದೆ ಕಾರ್ಯನಿರ್ವಾಹಕರು ಮಾರ್ಕೆಟಿಂಗ್ ಪ್ರವೃತ್ತಿಗಳ ಮೇಲೆ ಹೆಚ್ಚು ಗಮನಹರಿಸಬೇಕಿರುತ್ತದೆ.
ವಿಷುಯಲ್ ಎಡಿಟರ್ : ನೀವು ಕಲಾತ್ಮಕ ಕಣ್ಣನ್ನು ಮತ್ತು ಆಲೋಚನೆಯನ್ನು ಹೊಂದಿದ್ದರೆ ಉತ್ತಮ ವಿಷುಯಲ್ ಎಡಿಟರ್ ಆಗಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text