Tap to Read ➤

ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಲವಲವಿಕೆಯಿಂದಿಡಲು ಸಲಹೆಗಳು

ಬೇಸಿಗೆ ರಜೆಯಲ್ಲಿ ಪೋಷಕರು ಮಕ್ಕಳನ್ನು ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿಸಬಹುದು ಎಂಬುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಬೇಸಿಗೆ ಶಿಬಿರಗಳಿಗೆ ಸೇರಿಸಿ: ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸಿ ಇದರಿಂದ ಮಕ್ಕಳು ಹಲವು ಅಪರಿಚಿತ ಮಕ್ಕಳೊಂದಿಗೆ ಬೆರೆಯುವ ಮತ್ತು ಓದುವುದರ ಜೊತೆಗ ಇನ್ನಿತರೆ ಚಟುವಟಿಕೆಗಳಲ್ಲಿ ಕಲಿಕೆಯನ್ನು ಪ್ರಾರಂಭಿಸಲು ಸಹಾಯವಾಗುತ್ತದೆ.
ಸ್ವಿಮ್ಮಿಂಗ್ ಕ್ಲಾಸ್‌ಗಳಿಗೆ ಸೇರಿಸಿ:
 ಈ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಸ್ವಿಮ್ಮಿಂಗ್ ತರಬೇತಿಗಳಿಗೆ ಸೇರಿಸಿ ಇದರಿಂದ ಮಕ್ಕಳಿಗೂ ಖುಷಿಯಾಗುತ್ತೆ ಜೊತೆಗೆ ಮಕ್ಕಳು ಈಜನ್ನು ಕಲಿಯುತ್ತಾರೆ ಹಾಗೇ ದೈಹಿಕವಾಗಿಯೂ ಆರೋಗ್ಯವಾಗಿರಲು ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ: ಮಕ್ಕಳಿಗೆ ಏನಿಷ್ಟ ಎನ್ನುವುದನ್ನು ತಿಳಿದುಕೊಳ್ಳಿ ಚಿತ್ರಕಲೆ, ಹಾಡುಗಾರಿಕೆ ಅಥವಾ ಭರತನಾಟ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ.
ಕ್ರೀಡಾ ಚಟುವಟಿಕೆಗಳಿಗೆ ಸೇರಿಸಿ: ಮಕ್ಕಳನ್ನು ಮಾನಸಿಕವಾಗಿ ಕಲಿಕೆಗೆ ಒಡ್ಡುವುದರ ಜೊತೆಗೆ ಮಕ್ಕಳಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಡಿ ಆಗ ಕ್ರೀಡೆಯ ಮಹತ್ವದ ಜೊತೆಗೆ ಅವರ ಆಸಕ್ತಿಯ ಬಗೆಗೆ ಒಲವು ತೋರಲು ಸಹಾಯವಾಗುತ್ತದೆ. ಇದರಿಂದ ಶಾರೀರಿಕ ಆರೋಗ್ಯದ ಕಾಳಜಿಯ ಜೊತೆಗೆ ಮಕ್ಕಳ ಬೊಜ್ಜಿನ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ.
ಸಂಬಂಧಗಳ ಬಗೆಗೆ ಅರಿವು ಮೂಡಿಸಿ : ಈಗಿನ ದಿನಗಳಲ್ಲಿ ಕೂಡ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಗೆ ಮಕ್ಕಳಲ್ಲಿ ಸಂಬಂಧಗಳ ಮೌಲ್ಯದ ಅರಿವು ಕುಂಠಿತಗೊಳ್ಳುತ್ತಿದೆ. ಹಾಗಾಗಿ ಈ ರಜೆಯ ಸಂದರ್ಭದಲ್ಲಿಯಾದರೂ ಮಕ್ಕಳನ್ನು ಕುಟುಂಬದ ಜೊತೆ ಬೆರೆಯಲು ಅವಕಾಶ ನೀಡಿ.
ಮನೆಪಾಠ ಹೇಳಿಕೊಡಿ:
 ಮನೆ ಪಾಠ ಅಂದರೆ ಮಕ್ಕಳು ಹೇಗೆ ಇನ್ನೊಬರೊಡನೆ ಮಾತನಾಡಬೇಕು? ಯಾವ ರೀತಿಯಾಗಿ ಇನ್ನೊಬ್ಬರನ್ನ ಗೌರವಿಸಬೇಕು? ಅಪರಿಚಿತರೊಡನೆ ಎಷ್ಟು ಸಂವಹನ ಮಾಡುವ ಅಗತ್ಯವಿದೆ? ಅವರ ಮಾನಸಿಕ ಸ್ಥಿಮಿತಗಳು ಹೇಗಿರಬೇಕು ಎನ್ನುವುದರ ಬಗೆಗೆ ಮನೆಯಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿ.
ಕಥೆ ಹೇಳುವ ಅಭ್ಯಾಸ ಮಾಡಿ: ಎಷ್ಟೋ ಮಕ್ಕಳು ರಜೆಯಲ್ಲಿ ಟಿವಿ, ಮೊಬೈಲ್ ಮುಂದೆ ಕುಳಿತೇ ರಜೆಯನ್ನ ಕಳೆಯುವುದುಂಟು ಆದರೆ ಇದರಿಂದ ಆರೋಗ್ಯ ಇನ್ನಷ್ಟು ಹಾಳಾಗುತ್ತದೆ. ಹಾಗಾಗಿ ಅವರಿಗೆ ರಜೆಯಲ್ಲಿ ಅಜ್ಜಿ ಹೇಳುವ ಕತೆಗಳ ಪರಿಚಯ ಮಾಡಿಕೊಡಿ, ಮನೆಯಲ್ಲಿ ಒಳ್ಳೆ ನೀತಿ ಕತೆಗಳನ್ನು ಹೇಳುವ ಮೂಲಕ ಅವರಿಗೆ ಬದುಕಿನ ನೀತಿಗಳನ್ನು ತಿಳಿಸಿಕೊಡಿ.
ಹೊರ ಪ್ರಪಂಚವನ್ನು ಪರಿಚಯಿಸಿ: ಮಕ್ಕಳಿಗೆ ಮನೆ ಮತ್ತು ಶಾಲೆಯಿಂದಾಚೆ ಪ್ರಪಂಚ ಹೇಗಿದೆ ಎನ್ನುವುದರ ಅರಿವಾಗಬೇಕಿದೆ ಹಾಗಾಗಿ ಮಕ್ಕಳ ಜೊತೆಗೆ ಒಳ್ಳೆಯ ಸ್ಥಳಗಳಿಗೆ ಭೇಟಿ ಕೊಡಿ. ಮಕ್ಕಳಿಗೆ ಹೊಸ ಜಾಗಗಳ ಪರಿಚಯವಾಗುತ್ತದೆ ಅಲ್ಲಿನ ಜನರೊಡನೆ ಬೆರೆಯಲು ಅವಕಾಶ ಸಿಗುತ್ತದೆ.
ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ: ಪ್ರತಿನಿತ್ಯ ಶಾಲೆ , ಪಾಠ ಮತ್ತು ಹೋಂ ವರ್ಕ್ ಮಾಡಿದ ಮಕ್ಕಳಿಗೆ ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ ಇದ್ರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚುತ್ತದೆ ಮತ್ತು ಸಾಮಾನ್ಯ ಜ್ಞಾನ ಬೆಳೆಯುತ್ತದೆ.
ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

 ಮಕ್ಕಳಲ್ಲಿ ಪರಿಸರದ ಬಗೆಗೆ ಒಂದಷ್ಟು ಮಾಹಿತಿಯನ್ನು ನೀಡಿ. ಗಿಡ ನೆಡುವುದು ಹೇಗೆ ಪೋಷಿಸುವುದು ಹೇಗೆ ಮತ್ತು ಯಾಕೆ ನೆಡಬೇಕು ಇದರಿಂದ ಏನು ಲಾಭ ಎನ್ನುವುದರ ಮಾಹಿತಿಯ ಜೊತೆಗೆ ಆ ಚಟುವಟಿಕೆಗಳಲ್ಲಿ ತೊಡಗಿಸಿ ಇದರಿಂದ ನಾಳಿನ ದಿನಗಳನ್ನು ನಿಶ್ಚಿಂತೆಯಾಗಿ ಕಳೆಯಲು ಮಕ್ಕಳಿಗೂ ಸಹಾಯವಾದೀತು.
ಹೆಚ್ಚಿನ ಮಾಹಿತಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text