Tap to Read ➤

ಎಸ್‌ಎಸ್‌ಎಲ್‌ಸಿ ಶಿಕ್ಷಣ ನಂತರ ಕಾಲೇಜು ಆಯ್ಕೆಗೆ ಸಲಹೆ

ಎಸ್‌ಎಸ್‌ಎಲ್‌ಸಿ ಶಿಕ್ಷಣದ ನಂತರ ಕಾಲೇಜು ಆಯ್ಕೆ ಮಾಡುವ ಮುನ್ನ ನೆನಪಿಡಬೇಕಾದ ಅಂಶಗಳು
ವಿದ್ಯಾರ್ಥಿಯು ತನ್ನ ಫಲಿತಾಂಶ ಮತ್ತು ವೈಯಕ್ತಿಕ ಇಚ್ಚೆಗಳಿಗೆ ತಕ್ಕಂತೆ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಇಲ್ಲಿ ಆಲೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳಿ.
ಓದುವ ವಿದ್ಯಾರ್ಥಿ ಎಲ್ಲಿದ್ದರೂ ಓದುತ್ತಾನೆ ಎನ್ನುವುದು ಸತ್ಯ ಆದರೆ ಓದುವ ಮನಸ್ಸಿಗೆ ವಾತಾವರಣ ಪೂರಕವಾಗಿರಬೇಕು ಎಂಬುದೂ ಅಷ್ಟೇ ಸತ್ಯ. ಹಾಗಾಗಿ ವಿದ್ಯಾರ್ಥಿಗೆ ಸೂಕ್ತವಾದ ವಾತಾವರಣವುಳ್ಳ ಕಾಲೇಜು ಆಯ್ಕೆ ಮಾಡಿ.
ವಿದ್ಯಾರ್ಥಿಯು ತನ್ನ ಓದಿಗೆ ಅಗತ್ಯವಾದ ಸೌಕರ್ಯ ಮತ್ತು ಸೌಲಭ್ಯಗಳು ಕಾಲೇಜಿನಲ್ಲಿ ಲಭ್ಯವಿದೆಯೇ ಎಂದು ಸ್ಪಷ್ಟಪಡಿಸಿಕೊಳ್ಳಿ. ನಂತರ ನಿಮ್ಮ ವೈಯಕ್ತಿಕ ಆಸಕ್ತಿಗಳ ಅನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಕಾಲೇಜು ಆಯ್ಕೆ ಮಾಡುವಾಗ ಅನೇಕ ಅಂಶಗಳಲ್ಲಿ ಈ ಪ್ರಯಾಣ ವ್ಯವಸ್ಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮನೆಯಿಂದ ಕಾಲೇಜಿಗೆ ತಲುಪಿಗೆ ಸಮಯ ಮತ್ತು ಅಂತರ ಎಷ್ಟಿದೆ ? ಅದಕ್ಕೆ ಸೂಕ್ತ ವ್ಯವಸ್ಥೆ ಏನಿದೆ ಎಂಬುದನ್ನು ತಿಳಿಯಿರಿ.
ವಿದ್ಯಾರ್ಥಿಯು ತನ್ನ ಜೀವನದ ಬಹುದೊಡ್ಡ ಗುರಿಗಳನ್ನು ತಲುಪಲು ಈ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗೆ ಬೇಕಾದ ಕೋಚಿಂಗ್ ಸೌಲಭ್ಯವಿದೆಯೇ ಅಥವಾ ಇಲ್ಲವಾದಲ್ಲಿ ಬೇರೆ ಪರ್ಯಾಯ ಮಾರ್ಗ ಏನಿದೆ ಎನ್ನುವುದನ್ನು ಕಂಡುಕೊಳ್ಳಿ.
ಒಟ್ಟಾರೆ ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ನೆರವಾಗುವ ಸೂಕ್ತ ಕಾಲೇಜು ಆಯ್ಕೆ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡುವುದು ಒಳಿತು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text