Tap to Read ➤

ಹಣ ಸಂಪಾದಿಸಲು ಸುಲಭ ವಿಧಾನಗಳು

ಸುಲಭವಾಗಿ ಹಣಗಳಿಸಲು ಇರುವ ಉತ್ತಮ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ : ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಕೆಲವೊಂದು ಪಾಯಿಂಟ್ ಗಳನ್ನ ನೀಡುತ್ತದೆ. ಈ ಪಾಯಿಂಟ್ ಗಳಿಂದ ನೀವು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ವಸ್ತುಗಳನ್ನ ಖರೀದಿಸಬಹುದು. ಹಾಗಾಗಿ ಸ್ಮಾರ್ಟ್ ಆಗಿ ಕ್ರೆಡಿಟ್ ಕಾರ್ಡ್ ಬಳಸಿ ಸರಿಯಾದ ಸಮಯಕ್ಕೆ ಬಿಲ್ ಪಾವತಿಸಿ ಮಾಡಿ ಪಾಯಿಂಟ್ ಗಳಿಸಿ.
ಶಾಪಿಂಗ್ ನಲ್ಲೂ ಲಾಭ ಗಳಿಸಿ : ಅನೇಕ ವೆಬ್‌ಸೈಟ್ ಗಳಲ್ಲಿ ಶಾಪಿಂಗ್ ವೇಳೆ ಗಿಫ್ಟ್ ವೋಚರ್ ಹಾಗೂ ರಿಯಾಯಿತಿಗಳನ್ನ ನೀಡುತ್ತದೆ. ಹಾಗಾಗಿ ನೀವು ವೆಬ್‌ಸೈಟ್ ಗೆ ಲಾಗಿನ್ ಆಗಿ ಉಚಿತ ಗಿಫ್ಟ್ ವೋಚರ್ ಜೊತೆ ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಿ.
ಬಡ್ಡಿ ಹಣ : ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಇದ್ದರೆ, ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತೋ ಆ ಬ್ಯಾಂಕಿನಲ್ಲಿ ಹೊಸದೊಂದು ಖಾತೆ ತೆರೆಯಿರಿ. ಇದರಿಂದ ನಿಮ್ಮ ಹಣ ಉಳಿತಾಯದ ಜತೆ ಬಡ್ಡಿಯೂ ಸಿಗುತ್ತದೆ ಹಾಗೂ ಹೆಚ್ಚು ಹಣ ಕೂಡಾ ಗಳಿಸಬಹುದು.
ಬ್ರೌಸಿಂಗ್ ನಿಂದ ಹಣ ಗಳಿಸಿ : ಹಣ ಗಳಿಸಲು ಇದು ಇತ್ತೀಚೆಗೆ ಪರಿಚಿತವಾದ ಹೊಸ ಉಪಾಯವಾಗಿದೆ. ಆನ್‌ಲೈನ್ ನಲ್ಲಿ ಕೆಲವೊಂದು ವೆಬ್‌ಸೈಟ್ ಗಳನ್ನ ಗುರುತಿಸಿ, ಬ್ರೌಸಿಂಗ್ ಮಾಡಿ ಹಣ ಗಳಿಸಿ.
ನಿಮ್ಮ ಪ್ರಾಪರ್ಟಿಯಿಂದ ಹಣ ಗಳಿಸಿ : ನಿಮ್ಮ ಬಳಿ ಕಾರು, ಬೈಕು ಏನಾದರು ಇದ್ದಲ್ಲಿ ಅದನ್ನ ಹೆಚ್ಚಾಗಿ ಬಳಸುತ್ತಿಲ್ಲ ಎಂದಾದ್ರೆ ಅದರಿಂದಲೂ ಹಣ ಸಂಪಾದಿಸಬಹುದು. ನಿಮಗೆ ಅದರ ಬಳಕೆ ಇಲ್ಲದೇ ಇದ್ದಾಗ ಅದನ್ನ ಇತರರಿಗೆ ಬಾಡಿಗೆಗೆ ನೀಡಿ ಹಣ ಸಂಪಾದಿಸಿಕೊಳ್ಳಬಹುದು.
ಗಿಡಗಳನ್ನ ಮಾರಾಟಮಾಡಿ :

ನಿಮ್ಮ ಮನೆ ಸುತ್ತ ಮುತ್ತ ಜಾಗವಿದ್ರೆಎ ನೀವು ಗಿಡಗಳನ್ನ ನೆಡುವ ಕೆಲಸ ಮಾಡಿ, ಬಳಿಕ ಅದನ್ನ ಸಿಟಿ ಗೆ ತಂದು ಮಾರಾಟ ಮಾಡಿ. ಇನ್ನು ಈ ಬಗ್ಗೆ ನೀವು ಆನ್‌ಲೈನ್ ನಲ್ಲೂ ಬ್ಯುಸಿನೆಸ್ ಪ್ರಾರಂಭಿಸಬಹುದು. ಇದರಿಂದ ನೀವು ಕೈ ತುಂಬಾ ಹಣ ಸಂಪಾದಿಸಬಹುದು.
ನಿಮ್ಮ ಕಾರನ್ನ ಜಾಹೀರಾತಿಗೆ ಬಳಸಿ : ನಿಮ್ಮ ಬಳಿ ಕಾರು ಇದೆ ಎಂದಾದ್ರೆ ಅದಕ್ಕೆ ಬೆಳಕಿನ ವ್ಯವಸ್ಥೆ ಮಾಡಿ, ಕೆಲವೊಂದು ಜಾಹೀರಾತುಗಳನ್ನ ಪ್ರಕಟಿಸುವುದರ ಮೂಲಕ ಕೂಡಾ ನೀವು ಹಣ ಗಳಿಸಬಹುದು.
ಹೊಸ ಪ್ರಾಪರ್ಟಿ : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದೆ ಎಂದಾದ್ರೆ ಅದನ್ನ ಅಲ್ಲೇ ಇಡುವುದಕ್ಕಿಂತ ಯಾವುದಾದ್ರೂ ಹೊಸ ಉದ್ಯಮಕ್ಕೆ ಬಂಡವಾಳ ಹೂಡಿ. ಇದರಿಂದ ಕೂಡಾ ನೀವು ಹೆಚ್ಚು ಹಣ ಸಂಪಾದಿಸಬಹುದು.
ಹೆಚ್ಚಿನ ಸಲಹೆ ಮತ್ತು ಮಾಹಿತಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text