Tap to Read ➤

ಹತ್ತನೇ ತರಗತಿ ವಿಜ್ಞಾನ ಪರೀಕ್ಷಾ ತಯಾರಿಗೆ ಸಲಹೆಗಳು

ಹತ್ತನೇ ತರಗತಿ ವಿಜ್ಞಾನ ಪರೀಕ್ಷೆಗೆ ತಯಾರಿ ನಡೆಸಲು ಸಲಹೆಗಳು ಇಲ್ಲಿವೆ.
kavya L
ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳು ಮೊದಲು ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಪಡೆಯಬೇಕೆಂದು ಗುರಿ ಇಟ್ಟುಕೊಳ್ಳಿ.
ನಿಮ್ಮ ಗುರಿಯ ಅನುಸಾರ ಅಧ್ಯಯನಕ್ಕೆ ವೇಳಾಪಟ್ಟಿಯನ್ನು ಹಾಕಿಕೊಳ್ಳಿ.
ಮೊದಲು ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯನ್ನು ತಿಳಿಯಿರಿ.
ವಿಜ್ಞಾನ ವಿಷಯ ಅಧ್ಯಯನಕ್ಕೆ ಅಗತ್ಯ ಪುಸ್ತಕ ಮತ್ತು ಆನ್‌ಲೈನ್ ಮಾಹಿತಿಯನ್ನು ಕಲೆ ಹಾಕಿ.
ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಕ್ಕೆ ಸಮಾನ ಪ್ರಾಮುಖ್ಯತೆ ನೀಡಿ ಅಧ್ಯಯನ ಮಾಡಿ.
ವಿಜ್ಞಾನ ವಿಷಯದಲ್ಲಿ ಬರುವ ಫಾರ್ಮುಲಾಗಳು, ಲೆಕ್ಕಗಳು, ಮೂಲಧಾತುಗಳು, ವರ್ಗೀಕರಣ ಮತ್ತು ಚಿತ್ರ ಬಿಡಿಸುವಿಕೆಗೆ ಅದ್ಯತೆ ನೀಡಿ.
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಕಿರುಪಟ್ಟಿಯನ್ನು ಮಾಡುವುದನ್ನು ಅಭ್ಯಾಸ ಮಾಡಿ.
ಓದಿದನ್ನು ಆಗಾಗ್ಗೆ ಪುನರ್ ಮನನ ಮಾಡಿ, ಇದರಿಂದ ವಿಷಯವನ್ನು ಇನ್ನಷ್ಟು ಆಳವಾಗಿ ತಿಳಿಯಲು ಮತ್ತು ನೆನಪಿಡಲು ಸಾಧ್ಯವಾಗುತ್ತದೆ.
ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಿ, ಜೊತೆಗೆ ಅಗತ್ಯ ವಿರಾಮವನ್ನು ತೆಗೆದುಕೊಳ್ಳಿ.
ಆತ್ಮವಿಶ್ವಾಸದೊಂದಿಗೆ ಸತತ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆಯಿರಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text