ಕೇಂದ್ರಿಯ ವಿದ್ಯಾಲಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಕೆಂದ್ರಿಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ

ಕೆಂದ್ರಿಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಕೇಂದ್ರೀಯ ವಿದ್ಯಾಲಯಗಳಲ್ಲಿ ದಾಖಲಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾರ್ಚ್-15, 2017,ಸಂಜೆ 4:00 ಗಂಟೆವರೆಗೆ ವಿಸ್ತರಿಸಿದೆ.

ಶಾಲಾ ದಾಖಲಾತಿಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಬರುತ್ತಿದ್ದು, ಪೋಷಕರ ಒತ್ತಾಯದ ಮೇರೆಗೆ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಈವರೆಗೂ ಒಂದನೇ ತರಗತಿಯ ಪ್ರವೇಶಕ್ಕೆ ಆರು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ನೋಂದಾಯಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ದಿನಾಂಕ 10 -03 -2017 ರಂದು (ಸಂಜೆ 4 ಗಂಟೆಯ ಒಳಗೆ) ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.

ಎರಡನೇ ತರಗತಿಯಿಂದ ಒಂಬತ್ತನೇ ತರಗತಿಗೆ ನೋಂದಾಯಿಸುವ ದಿನಾಂಕ ಕೂಡ ವ್ಯತ್ಯಾಸವಾಗಿದ್ದು ದಿನಾಂಕ 03 -04 -2017 ಬೆಳಗ್ಗೆ 8 :00 ರಿಂದ 10 -04 -2017 ಸಂಜೆ 4 :00 ಗಂಟೆಯವರೆಗೂ ನಿಗದಿಪಡಿಸಲಾಗಿದೆ.

ದಾಖಲಾತಿಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯಲಿದ್ದು ಸಂಪೂರ್ಣವಾದ ಪಾರದರ್ಶಕತೆ ಇರಲಿದೆ. ಇನ್ನು ಈ ಕುರಿತು ಕೇಂದ್ರಿಯ ವಿದ್ಯಾಲಯಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದವರ ಮೂಲಕ ಒತ್ತಡ ತರುವುದು ಮತ್ತು ಇನ್ನಿತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟೀಕರಿಸಲಾಗಿದೆ.

ಅರ್ಜಿ ಸಲ್ಲಿಸಲು http://kvsangathan.nic.in/ ಕ್ಲಿಕ್ ಮಾಡಿ

ಕೇಂದ್ರಿಯ ವಿದ್ಯಾಲಯ

1963ನೇ ಇಸವಿಯಲ್ಲಿ 'ಸೆಂಟ್ರಲ್ ಸ್ಕೂಲ್ಸ್' ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ ಎಂಬ ಹೆಸರು ಪಡೆಯಿತು. ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಯಿಂದ ಗುರುತಿಸಲ್ಪಟ್ಟಿವೆ.ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರಿಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು.

ಕೇಂದ್ರಿಯ ವಿದ್ಯಾಲಯ ಶಾಲೆಗಳು ಏಕರೂಪದ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು , ಎಲ್ಲ ಶಾಲೆಗಳು ಸಿ ಬಿ ಎಸ್ ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರಿಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ.ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರಿಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ MHRD ಸಚಿವರು ಕಾರ್ಯ ನಿರ್ವಹಿಸುತ್ತಾರೆ.

ಕೇಂದ್ರಿಯ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚು ತಿಳಿಯಲು http://kvsangathan.nic.in/ ವೆಬ್ ಸೈಟ್ ಗಮನಿಸಿ

ಇದನ್ನು ಗಮನಿಸಿ:ಕೇಂದ್ರಿಯ ವಿದ್ಯಾಲಯಗಳಲ್ಲಿ ದಾಖಲಾತಿಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
last date of online registration extended upto 15th march 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+