ಕರ್ನಾಟಕ ಲೋಕೋಪಯೋಗಿ ಇಲಾಖೆ 870 ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಇಂದಿನಿಂದಲೇ ಅರ್ಜಿ ಹಾಕಿ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ ಖಾಲಿ ಇರುವ 570 ಗ್ರೂಪ್-Bದರ್ಜೆಯ ಸಹಾಯಕ ಇಂಜಿನಿಯರ್ ಗ್ರೇಡ್-1 ಮತ್ತು ಗ್ರೂಪ್ -C ದರ್ಜೆಯ ಕಿರಿಯ ಇಂಜಿನಿಯರ್ ಹುದ್ದೆಗಳ ಪೈಕಿ 300 ಹುದ್ದೆಗಳು ಖಾಲಿ ಇದ್ದು ಒಟ್ಟು 870 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿದೆ.

ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ, ಹುದ್ದೆಗಳಿಗೆ ಕೇಳಲಾದ ಅರ್ಹತೆಯನ್ನು ಹೊಂದಿದ್ದಲ್ಲಿ ಆನ್‌ಲೈನ್ ಮೂಲಕ ಏಪ್ರಿಲ್ 10,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕೆಪಿಡಬ್ಲ್ಯೂಡಿ ನೇಮಕಾತಿಗೆ ಇಂದೇ ಅರ್ಜಿ ಹಾಕಿ

CRITERIA DETAILS
Name Of The Posts ಸಹಾಯಕ ಇಂಜಿನಿಯರ್ (ಸಿವಿಲ್) & ಕಿರಿಯ ಇಂಜಿನಿಯರ್ (ಸಿವಿಲ್)
Organisation ಕರ್ನಾಟಕ ಲೋಕೋಪಯೋಗಿ ಇಲಾಖೆ
Educational Qualification ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ
Job Location ಕರ್ನಾಟಕ
Salary Scale ಸಹಾಯಕ ಇಂಜಿನಿಯರ್ ಗ್ರೇಡ್-1 -43,100/- ರಿಂದ 83,900/-ರೂ, ಕಿರಿಯ ಇಂಜಿನಿಯರ್ - 33,450/- ರಿಂದ 62,600/-ರೂ
Application Start Date March 11, 2019
Application End Date April 10, 2019

ಶೈಕ್ಷಣಿಕ ವಿದ್ಯಾರ್ಹತೆ:

ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಸಮನಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕಿರಿಯ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ಇಂಜಿನಿಯರ್ (ಸಿವಿಲ್)570
ಕಿರಿಯ ಇಂಜಿನಿಯರ್ (ಸಿವಿಲ್)300
ಒಟ್ಟು870

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡಂತೆ ವಯೋಮಿತಿ ಹೊಂದಿರತಕ್ಕದ್ದು.

ವರ್ಗಕನಿಷ್ಟ ವಯೋಮಿತಿಗರಿಷ್ಟ ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ18ವರ್ಷಗಳು35 ವರ್ಷಗಳು
ಪ್ರವರ್ಗ-2A,2B,3A ಮತ್ತು 3B ಅಭ್ಯರ್ಥಿಗಳಿಗೆ18ವರ್ಷಗಳು38 ವರ್ಷಗಳು
ಪ.ಜಾ,ಪ.ಪಂ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ18ವರ್ಷಗಳು40 ವರ್ಷಗಳು

ವೇತನದ ವಿವರ:

ಸಹಾಯಕ ಇಂಜಿನಿಯರ್ ಗ್ರೇಡ್-1 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 43,100/- ರಿಂದ 83,900/-ರೂ ಮತ್ತು ಕಿರಿಯ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450/- ರಿಂದ 62,600/-ರೂ ವೇತನವನ್ನು ನೀಡಲಾಗುವುದು.

ನೇಮಕಾತಿ ವಿಧಾನ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ ಹಾಗೂ ಪಾವತಿಸುವ ವಿಧಾನ:

ವಿವರಸಹಾಯಕ ಇಂಜಿನಿಯರ್ ಗ್ರೇಡ್ -1ಕಿರಿಯ ಇಂಜಿನಿಯರ್ ಹುದ್ದೆಗೆ
ಸಾಮಾನ್ಯ ವರ್ಗ, ಪ್ರವರ್ಗ-2A,2B,3A,3B ಗೆ ಸೇರಿದ ಅಭ್ಯರ್ಥಿಗಳಿಗೆರೂ.500/-ರೂ.300/-

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಹಾಗೂ ಇತರೆ ವರ್ಗದ ಮಾಜಿ ಸೈನಿಕ / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಏಪ್ರಿಲ್ 11,2019ರೊಳಗೆ ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ ಪಾವತಿಸಬೇಕು.

ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸಬೇಕು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂತಿರುಗಿಸಲಾಗುವುದಿಲ್ಲ. ಅಥವಾ ಅದನ್ನು ಇಲಾಖೆಯು ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. (ಶುಲ್ಕ ವಿನಾಯಿತಿ ನೀಡಿರುವ ಮೀಸಲಾತಿಗಳನ್ನು ಹೊರತುಪಡಿಸಿ)

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯ ವೆಬ್‌ಸೈಟ್ http://kpwd.co.in/ ಮುಖಾಂತರ ನಿಗದಿತ ನಮೂನೆಯಲ್ಲಿ ಆನ್‌ಲೈನ್ ಮೂಲಕ ಏಪ್ರಿಲ್ 10,2019 ರೊಳಗೆ ಮಾತ್ರವೇ ಅರ್ಜಿಗಳನ್ನು ಸಲ್ಲಿತಕ್ಕದ್ದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KPWD Recruitment 2019-20Notification Apply Online for 870 Assistant Engineer and Junior Engineer Vacancies. Govt jobsKPWD Karnataka Public Works Departmentrecently invited Online applications from eligible students to fill up vacant posts through Karnataka PWD official notification 2019. Job Seekers who are looking forcareer inKarnataka Government can make use of this opportunity. KPWD Apply Online for Assistant engineers, Junior Engineer jobs before 30-April-2019. Also, go through KPWD official website http://www.kpwd.co.in/ Recruitment or Official Notification, therefore, you can understand about the recruitment.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X