ಪತ್ರಿಕೋದ್ಯಮ: ಒನ್ಇಂಡಿಯಾದಲ್ಲಿ ಉದ್ಯೋಗಾವಕಾಶ

ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಯುವ ಹಾಗೂ ಅನುಭವಿ ಪತ್ರಕರ್ತರು, ಸ್ಟ್ರಿಂಜರ್ ಗಳಿಗೆ ಒನ್ಇಂಡಿಯಾ ವೆಬ್ ಪೋರ್ಟಲ್ ಉತ್ತಮ ಅವಕಾಶ ಒದಗಿಸುತ್ತಿದೆ. ಸ್ಟ್ರಿಂಜರ್ ಗಳು, ನಾಗರಿಕ ಪತ್ರಕರ್ತರು(citizen journalist) ಹಾಗೂ ಡೆಸ್ಕ್ ಗೆ ಉಪ ಸಂಪಾದಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ತಂಡ ಸೇರಲು ಯುವ ಹಾಗೂ ಅನುಭವಿ ಪತ್ರಕರ್ತರು, ಸ್ಟ್ರಿಂಜರ್ ಗಳು ಕೂಡಲೇ ಅರ್ಜಿ ಹಾಕಬಹುದು.

ಒನ್ಇಂಡಿಯಾದಲ್ಲಿ ಉದ್ಯೋಗಾವಕಾಶ

 

ಅರ್ಹತೆ

  • ಇಂಟರ್ನೆಟ್ ಬಗ್ಗೆ ಆಸಕ್ತಿ, ದೈನಂದಿನ ಆಗು ಹೋಗು, ಸುದ್ದಿ ಸಂಗ್ರಹದಲ್ಲಿ ನಿಪುಣತೆ ಹಾಗೂ ತ್ವರಿತಗತಿ ಕಾರ್ಯನಿರ್ವಹಿಸುವ ಉತ್ಸಾಹವಿರಬೇಕು.
  • ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಅನುಭವ ಉಳ್ಳವರಿಗೆ ಆದ್ಯತೆ.
  • ಸುದ್ದಿಗೆ ಸಂಬಂಧಿಸಿದ ಫೋಟೋ, ವಿಡಿಯೋ ಮಾಡುವ ಅನುಭವ ಇದ್ದರೆ ಒಳ್ಳೆಯದು.

ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿ

ಆಡಿಯೋ, ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಹೀಗಾಗಿ, ದೈನಂದಿನ ಆಗು ಹೋಗುಗಳು, ಸುದ್ದಿ ಸಮಾಚಾರಗಳ ಜತೆಗೆ ವಿಡಿಯೋ ದೃಶ್ಯಗಳನ್ನು ಸೆರೆ ಹಿಡಿದು ಕಳಿಸಬಲ್ಲವರಿಗೆ ಆದ್ಯತೆ.

ವರದಿಗಾರಿಕೆಯಲ್ಲಿ ಅನುಭವ ಹಾಗೂ ಪರಿಣಿತಿ ಇರುವವರು, ತಮ್ಮ ಜಿಲ್ಲೆಯ ಯಾವುದೇ ಭಾಗದಲ್ಲಿನ ಸುದ್ದಿ, ಪ್ರಚಲಿತ ವಿದ್ಯಮಾನ, ವಿಶೇಷ ಸುದ್ದಿ/ವರದಿ ಹಾಗೂ ಇತರ ವಿಷಯಗಳ ಬಗ್ಗೆ ಕವರೇಜ್ ಮಾಡಬೇಕಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮದೇ ಆದ ವೃತ್ತಿಪರ ವಿಡಿಯೋ ಕ್ಯಾಮರಾ ಹೊಂದಿರಬೇಕು.

ಅರ್ಜಿ ಸಲ್ಲಿಕೆ

ಬಯೋಡೇಟಾ ಹಾಗೂ ಇತ್ತೀಚಿನ ಕೆಲವು ಲೇಖನಗಳನ್ನು prasad.naik@one.in ಐಡಿಗೆ ಇಮೇಲ್ ಮಾಡಿ.

ಪತ್ರಿಕೋದ್ಯಮ ಪದವೀಧರರಿಗೆ ಬಿಇಸಿಎಲ್ ನಲ್ಲಿ ಉದ್ಯೋಗಾವಕಾಶ

ಮಂಗಳೂರು ಎಂ ಆರ್ ಪಿ ಎಲ್: 74 ಇಂಜಿನಿಯರ್ ಗಳ ನೇಮಕಾತಿ

For Quick Alerts
ALLOW NOTIFICATIONS  
For Daily Alerts

English summary
Job Openings for digital journalists in Oneindia Kannada, No.1 portals in News and Entertainment. Oneindia has invited applications by Stringers/Citizen Jourlists with experience in news gathering. Candidates with various parts of Karnataka can apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X