ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿ

Posted By:

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಗೌರವಧನದ ಆಧಾರದ ಮೇಲೆ ಸಂದರ್ಶನದ ಮೂಲಕ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 10 ರೊಳಗೆ ಅರ್ಜಿಗಳನ್ನ ಸಲ್ಲಿಸಲು ಸೂಚಿಸಲಾಗಿದೆ.

ವಿವಿಧ ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಕೆ

ಹುದ್ದೆ ಮತ್ತು ವಿದ್ಯಾರ್ಹತೆಗನುಗುಣವಾಗಿ ಸ್ವವಿವರದೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ತಯಾರಿಸಿ, ಮೊಬೈಲ್ ಸಂಖ್ಯೆಯನ್ನು ಬರೆದು ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು/ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರವಿ ಕಿರ್ಲೋಸರ್ಕರ್ ಮೆಮೋರಿಯಲ್ ಆಸ್ಪತ್ರೆ ಆವರಣ, ಪೀಣ್ಯ ಬೆಂಗಳೂರು-560058 ಇವರಿಗೆ ಅಂಚೆ ಮೂಲಕ ತಲುಪಿಸಬೇಕು.

ದಿನಾಂಕ: 03-10-2017 ರಿಂದ 10-10-2017 ರ ಸಂಜೆ 4:00 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಹುದ್ದೆಗಳ ವಿವರ

ಹುದ್ದೆ ಹೆಸರುವಿದ್ಯಾರ್ಹತೆಹುದ್ದೆ ಸಂಖ್ಯೆಗೌರವಧನ
ಅಕೌಂಟೆಂಟ್ ಕಂ ಕ್ಲರ್ಕ್ಬಿ.ಕಾಂ112000/-
ಕಂಪ್ಯೂಟರ್ ಆಪರೇಟರ್ಪಿಯುಸಿ + ಕಂಪ್ಯೂಟರ್ ಜ್ಞಾನ19000/-
ಕಚೇರಿ ಸೇವಕರುಎಸ್ ಎಸ್ ಎಲ್ ಸಿ17000/-
ಕೃತಕಾಂಗ ಜೋಡಣೆ ಅಭಿಯಂತಕರುಪಿ&ಓ ಎಂಜಿನಿಯರಿಂಗ್/ ಡಿಪ್ಲೊಮಾ ಜೊತೆಗೆ ಎರಡು ವರ್ಷಗಳ ಸೇವಾ ಅನುಭವ125000/-
ಲೆದರ್ ವರ್ಕರ್/ ಶೂ ಮೇಕರ್ಲೆದರ್  ವರ್ಕ್ ಮತ್ತು ಶೂ ಮೇಕಿಂಗ್ ನಲ್ಲಿ ಸರ್ಟಿಫಿಕೆಟ್ ಮತ್ತು ಎರಡು ವರ್ಷಗಳ ಅನುಭವ18000/-
ಕ್ಲಿನಿಕಲ್ ಸೈಕಾಲಜಿಸ್ಟ್ಎಂ.ಎ (ಕ್ಲಿನಿಕಲ್ ಸೈಕಾಲಜಿ)125000/-
ಸ್ಪೀಚ್ ಥೆರಾಪಿಸ್ಟ್ಬಿ.ಎಸ್ಸಿ (ಸ್ಪೀಚ್)125000/-
ಫಿಜಿಯೋಥೆರಪಿಸ್ಟ್/ಆಕ್ಯುಪೇಶನಲ್ ಥೆರಾಪಿಸ್ಟ್ ಪೂರ್ಣಾವಧಿಫಿಜಿಯೋ ಥೆರಪಿ/ ಅಕ್ಯುಪೇಶನಲ್ ಥೆರಪಿಯಲ್ಲಿ ಪದವಿ ಅಥವಾ ಡಿಪ್ಲೊಮಾ125000/-
ಮೊಬಿಲಿಟಿ ಇನ್ಸಟ್ರಕ್ಟರ್ಒ & ಎಂ ನಲ್ಲಿ ಸರ್ಟಿಫಿಕೆಟ್ ಕೋರ್ಸ್18000/-
ಇಯರ್ ಮೋಲ್ಡ್ ಟೆಕ್ನಿಷಿಯನ್ಇಯರ್ ಮೋಲ್ಡ್ ಟೆಕ್ನಾಲಜಿಯಲ್ಲಿ ಸರ್ಟಿಫಿಕೇಟ್ ಕೋರ್ಸ್112000/-
ಕೀಲು ಮತ್ತು ಮೂಳೆ ತಜ್ಞರು (ಪ್ರತಿ ಭೇಟಿಗೆ ರೂ.1000 ದಂತೆ) ವಾರಕ್ಕೆ 2 ಭೇಟಿಆರ್ಥೋಪೆಡಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೊಮಾ18000/-
ಆಪ್ತಾಲ್ಮೋಲಜಿಸ್ಟ್ (ಪ್ರತಿ ಭೇಟಿಗೆ ರೂ.1000 ದಂತೆ) ವಾರಕ್ಕೆ 2 ಭೇಟಿಆಪ್ತಾಲ್ಮೋಲಜಿಯಲ್ಲಿ ಸ್ನಾತಕೋತ್ತರ ಪದವಿ/ ಡಿಪ್ಲೊಮಾ1
8000/-
ಇ.ಎನ್.ಟಿ  (ಪ್ರತಿ ಭೇಟಿಗೆ ರೂ.1000 ದಂತೆ) ವಾರಕ್ಕೆ 2 ಭೇಟಿ
ಇ.ಎನ್.ಟಿ ಯಲ್ಲಿ  ಸ್ನಾತಕೋತ್ತರ ಪದವಿ/ ಡಿಪ್ಲೊಮಾ
1
8000/-
ಸೈಕಿಯಾಟ್ರಿಸ್ಟ್ (ಪ್ರತಿ ಭೇಟಿಗೆ ರೂ.1000 ದಂತೆ) ವಾರಕ್ಕೆ 2 ಭೇಟಿ
ಸೈಕ್ಯಾಟ್ರಿ ಮೆಡಿಸಿನ್ ನಲ್ಲಿ ಸ್ನಾತಕೋತ್ತರ ಪದವಿ
1
8000/-

ಆಯ್ಕೆಗೆ ಅರ್ಹರಾದ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ತಿಳಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

English summary
department for the empowerment of differently abled and senior citizens is recruiting various posts on honororium basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia