Teachers Day 2022 Gifts : ಶಿಕ್ಷಕರ ದಿನದಂದು ನೆಚ್ಚಿನ ಗುರುಗಳಿಗೆ ಏನನ್ನು ಉಡುಗೊರೆ ನೀಡಬಹುದು ? ಇಲ್ಲಿದೆ ಸಲಹೆ

By Kavya L

ಶಿಕ್ಷಕರ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ನಮ್ಮ ನೆಚ್ಚಿನ ಗುರುಗಳಿಗೆ ಗೌರವ ಸಲ್ಲಿಸುವ ಮತ್ತು ಕೃತಜ್ಞತೆ ಸಲ್ಲಿಸಲು ಸೂಕ್ತವಾದ ದಿನವಿದಾಗಿದ್ದು, ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಈ ದಿನದಂದು ಏನೆಲ್ಲಾ ಉಡುಗೊರೆಗಳನ್ನು ನೀಡಬಹುದು ಎಂದು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಇನ್ಯಾಕೆ ತಡ ಈ ಲೇಖನದಲ್ಲಿ, ಶಿಕ್ಷಕರ ದಿನಾಚರಣೆಗಾಗಿ ನಾವು ಕೆಲವು ಉಡುಗೊರೆ ಕಲ್ಪನೆಗಳನ್ನು ನಿಮಗೆ ನೀಡುತ್ತಿದ್ದೇವೆ ಅದನ್ನು ಓದಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಸೂಕ್ತ ಉಡುಗೊರೆಯನ್ನು ನೀಡಿ.

ಶಿಕ್ಷಕರ ದಿನದ ಪ್ರಯುಕ್ತ ನೆಚ್ಚಿನ ಶಿಕ್ಷಕರಿಗೆ ನೀಡಬಹುದಾದ ಉಡುಗೊರೆಗಳ ಪಟ್ಟಿ

ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಕರಿಗೆ ನೀಡಬಹುದಾದ ಉಡುಗೊರೆಗಳು

1. ಪುಸ್ತಕಗಳು

ಬಹಳಷ್ಟು ಶಿಕ್ಷಕರು ಓದುವುದನ್ನು ಆನಂದಿಸುತ್ತಾರೆ. ಈ ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ನಿಮ್ಮ ಶಿಕ್ಷಕರಿಗೆ ಅವರು ಹೆಚ್ಚು ಮೆಚ್ಚುವ ಲೇಖಕರ ಪುಸ್ತಕವನ್ನು ಉಡುಗೊರೆಯಾಗಿ ನೀಡಿ.

2. ಚಾಕೊಲೇಟ್ ಪ್ಯಾಕ್

ಪ್ರತಿಯೊಬ್ಬರೂ ಚಾಕೊಲೇಟ್‌ಗಳನ್ನು ಇಷ್ಟಪಡುತ್ತಾರೆ ಮತ್ತು ನಿಮ್ಮ ಶಿಕ್ಷಕರೂ ಅದನ್ನು ಆನಂದಿಸುತ್ತಾರೆ. ಶಿಕ್ಷಕರ ದಿನದ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ನೀವು ಚಾಕೊಲೇಟ್ ಪ್ಯಾಕ್ ಅನ್ನು ಉಡುಗೊರೆಯಾಗಿ ನೀಡಬಹುದು.

3. ಗಡಿಯಾರ

ಗಡಿಯಾರ ಎಲ್ಲರಿಗೂ ಬೇಕಾಗಿರುವ ವಸ್ತು. ಇದು ಯೋಗ್ಯ ಮತ್ತು ಅತ್ಯಂತ ಉಪಯುಕ್ತ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಗಡಿಯಾರ ಅಥವಾ ವಾಚ್ ಅನ್ನು ಉಡುಗೊರೆಯಾಗಿ ನೀಡಬಹುದು.

4. ಡೈರಿ

ಶಿಕ್ಷಕರಿಗೆ ಯಾವಾಗಲೂ ಡೈರಿಯ ಅವಶ್ಯಕತೆ ಇರುತ್ತದೆ. ಉಡುಗೊರೆಯಾಗಿ ಉತ್ತಮವಾದ ಡೈರಿ ಕೊಡುವುದರಿಂದ ಅವರಿಗೆ ಸಾಕಷ್ಟು ಉಪಯುಕ್ತವಾಗಲಿದೆ ಮತ್ತು ಅವರು ಬಹುಶಃ ಅದನ್ನು ಇಷ್ಟಪಡುತ್ತಾರೆ.

5. ಪೆನ್ ಸ್ಟ್ಯಾಂಡ್

ಅನೇಕ ವಿದ್ಯಾರ್ಥಿಗಳು ಪೆನ್ನು ಖರೀದಿಸಲು ಮತ್ತು ಅದನ್ನು ತಮ್ಮ ಶಿಕ್ಷಕರಿಗೆ ಪ್ರಸ್ತುತಪಡಿಸಲು ಆಯ್ಕೆ ಮಾಡುತ್ತಾರೆ. ಆದಾಗ್ಯೂ ನೀವು ಅವರಿಗೆ ಉತ್ತಮವಾದ ಪೆನ್ ಸ್ಟ್ಯಾಂಡ್ ಅನ್ನು ಉಡುಗೊರೆಯಾಗಿ ನೀಡಿದರೆ, ನಿಮ್ಮ ಉಡುಗೊರೆ ವಿಶೇಷವಾಗಿರುತ್ತದೆ.

6. ಶುಭಾಶಯ ಪತ್ರಗಳು

ಗ್ರೀಟಿಂಗ್ ಕಾರ್ಡ್‌ಗಳು ನಿಜವಾಗಿಯೂ ಸಿಹಿ ಮತ್ತು ಸರಳ ಉಡುಗೊರೆಗಳಲ್ಲಿ ಒಂದಾಗಿದೆ. ಶಿಕ್ಷಕರ ದಿನದ ಈ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ಶುಭಾಶಯ ಪತ್ರವನ್ನು ಉಡುಗೊರೆಯಾಗಿ ನೀಡಿ. ಶುಭಾಶಯ ಪತ್ರವನ್ನು ಮನೆಯಲ್ಲಿ ತಯಾರಿಸಬಹುದು ಅಥವಾ ನಿಮ್ಮ ಸ್ಥಳೀಯ ಉಡುಗೊರೆ ಅಂಗಡಿಯಲ್ಲಿ ಖರೀದಿಸಬಹುದು.

7. ಟೀ ಅಥವಾ ಕಾಫಿ ಮಗ್

ಯೋಗ್ಯವಾದ ಉಡುಗೊರೆ ಆಯ್ಕೆಗಳಲ್ಲಿ ಚಹಾ ಅಥವಾ ಕಾಫಿ ಮಗ್ ಕೂಡ ಒಂದು. ಶಿಕ್ಷಕರ ದಿನದ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ನೀವು ಕಾಫಿ ಮಗ್ ಅನ್ನು ಉಡುಗೊರೆಯಾಗಿ ನೀಡಬಹುದು.

8. ಒಂದು ಸಣ್ಣ ಸಸ್ಯ ನೀಡಿ

ಅನೇಕ ಜನರು ಸಸ್ಯಗಳನ್ನು ನೋಡಿಕೊಳ್ಳಲು ಇಷ್ಟಪಡುತ್ತಾರೆ. ನಿಮ್ಮ ಶಿಕ್ಷಕರು ಕೂಡ ಅವರಲ್ಲಿ ಒಬ್ಬರಾಗಿದ್ದರೆ, ಶಿಕ್ಷಕರ ದಿನದ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ಒಂದು ಸಣ್ಣ ಗಿಡವನ್ನು ಉಡುಗೊರೆಯಾಗಿ ನೀಡಿ.

9. ಫೋಟೋ ಫ್ರೇಮ್

ಈ ಶಿಕ್ಷಕರ ದಿನದಂದು ನಿಮ್ಮ ಶಿಕ್ಷಕರಿಗೆ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿ ಅವರೊಂದಿಗೆ ಉತ್ತಮ ಚಿತ್ರ ತೆಗೆಸಿಕೊಳ್ಳುವ ಪ್ರಯುತ್ನ ಮಾಡಿ.

10. ಫೋಟೋ ಕೊಲಾಜ್

ನಿಮ್ಮ ಶಿಕ್ಷಕರೊಂದಿಗೆ ಕೆಲವು ಸುಂದರವಾದ ಶಾಲೆಯ ನೆನಪುಗಳುಳ್ಳ ಫೋಟೋಗಳನ್ನು ಕಲೆ ಹಾಕಿ ಮತ್ತು ನಿಮ್ಮ ಶಿಕ್ಷಕರಿಗೆ ಅದನ್ನು ಕೊಲಾಜ್ ಮಾಡಿ ನೀಡಿ. ಅವರು ಖಂಡಿತವಾಗಿಯೂ ಅದನ್ನು ಪ್ರೀತಿಸುತ್ತಾರೆ.

11. ಪೆನ್ ಸೆಟ್

ಪೆನ್ನು ಎಲ್ಲರೂ ಬಳಸುವ ವಸ್ತು. ಇದಲ್ಲದೆ ಶಿಕ್ಷಕರಿಗೆ ಯಾವಾಗಲೂ ಉಪಯುಕ್ತವಾಗುವ ವಸ್ತುವೂ ಕೂಡ. ನಿಮ್ಮ ಶಿಕ್ಷಕರಿಗೆ ನೀವು ಒಂದು ಅಲಂಕಾರಿಕ ಅಥವಾ ಸರಳ ಪೆನ್ ಸೆಟ್ ಅನ್ನು ನೀಡಬಹುದು.

12. ಕಸ್ಟಮೈಸ್ ಮಾಡಿದ ಗಿಫ್ಟ್ ಪ್ಯಾಕ್

ನೀವು ಹಲವಾರು ವಿಷಯಗಳನ್ನು ಸಂಗ್ರಹಿಸಬಹುದು ಮತ್ತು ನಿಮ್ಮ ಶಿಕ್ಷಕರಿಗೆ ಉಡುಗೊರೆಯಾಗಿ ಒಟ್ಟಿಗೆ ಪ್ಯಾಕ್ ಮಾಡಬಹುದು. ಉದಾಹರಣೆಗೆ ಶಿಕ್ಷಕರ ದಿನಕ್ಕಾಗಿ ಉತ್ತಮ ಉಡುಗೊರೆ ಪ್ಯಾಕ್ ಮಾಡಲು ವಾಲೆಟ್, ಸುಂದರವಾದ ಪೆನ್ ಮತ್ತು ಪಾಕೆಟ್ ಡೈರಿಯನ್ನು ಒಟ್ಟಿಗೆ ಜೋಡಿಸಬಹುದು.

13. ಕೈ ಬರಹದ ಟಿಪ್ಪಣಿ

ಕೈಬರಹದ ಟಿಪ್ಪಣಿಯು ಯಾರಿಗಾದರೂ ನೀಡಬಹುದಾದ ಅತ್ಯಂತ ಸಿಹಿಯಾದ ವಸ್ತುವಾಗಿದೆ. ನಿಮ್ಮ ಶಿಕ್ಷಕರು ನಿಮ್ಮಿಂದ ಉತ್ತಮವಾದ ಕೈ ಬರಹದ ಟಿಪ್ಪಣಿಯನ್ನು ಇಷ್ಟಪಡುತ್ತಾರೆ.

14. ಕೇಕ್

ಶಿಕ್ಷಕರ ದಿನದ ವಿಶೇಷ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ನೀವು ಸುಂದರವಾದ ಮತ್ತು ರುಚಿಕರವಾದ ಕೇಕ್ ಅನ್ನು ತೆಗೆದುಕೊಳ್ಳಬಹುದು.

15. ಸುಗಂಧ ದ್ರವ್

ಉತ್ತಮ ಸುಗಂಧ ದ್ರವ್ಯವು ಯಾರನ್ನಾದರೂ ಹುರಿದುಂಬಿಸಬಹುದು. ಶಿಕ್ಷಕರ ದಿನದ ಸಂದರ್ಭದಲ್ಲಿ ನಿಮ್ಮ ಶಿಕ್ಷಕರಿಗೆ ನೀವು ಒಂದು ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಬಹುದು.

For Quick Alerts
ALLOW NOTIFICATIONS  
For Daily Alerts

English summary
Teachers day is celebrated on September 5. Here is the list of gift ideas for students to give to favourite teachers on teachers day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X