ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ದಿನವಾದ ಇಂದು ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳ ಪರೀಕ್ಷೆ ನಡೆದಿವೆ. ಇಂದು ನಡೆದ ಎರಡೂ ಪತ್ರಿಕೆಗಳು ವಿಜ್ಞಾನಕ್ಕೆ ಸಂಬಂಧಿಸಿದ್ದವು.
ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವಾದ ನಿನ್ನೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳ ಕೇಳಿ ಬಂದಿದ್ದವು, ಆದರೆ ಇಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆಯಂತೆ ಇಂದು ಕೂಡ ಎಲ್ಲೆಡೆ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆದಿವೆ. ಇಂದು ನಡೆದ ಕಂಪ್ಯೂಟರ್ ಸೈನ್ಸ್ ಪರೀಕ್ಷೆಗೆ ವಿಜಯ ಕಾಲೇಜು ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಾನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಪರೀಕ್ಷೆ ಬರೆದಿದ್ದಾರೆ. ಸುರಾನ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರನ್ನು ಮಾತನಾಡಿಸಿದಾಗ " ನಾವು ಏನನ್ನು ನಿರೀಕ್ಷಿಸಿದ್ದೆವೋ ಅದರಲ್ಲಿ ಕೆಲವೇ ಕೆಲವು ಪ್ರಶ್ನೆಗಳು ಬಂದಿದ್ದವು, ಎಲ್ಲವನ್ನು ಓದಿದ್ದರಿಂದ ಪ್ರಶ್ನೆ ಪತ್ರಿಕೆ ಅಷ್ಟು ಕಷ್ಟ ಎನಿಸಲಿಲ್ಲ. ನಮ್ಮ ಪೂರ್ವ ತಯಾರಿ ಮತ್ತು ಪ್ರಿಪರೇಟರಿ ಪರೀಕ್ಷೆಗಳು ನಮಗೆ ತುಂಬಾ ಸಹಾಯ ಮಾಡಿವೆ. ಪರೀಕ್ಷೆ 10 :15 ಕ್ಕೆ ಪ್ರಾರಂಭವಾಗುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲದೆ ನಿಗದಿತ ಸಮಯಕ್ಕೂ ಮುಂಚೆಯೇ ಪರೀಕ್ಷಾ ಕೆಂದ್ರ ತಲುಪಿದ್ದು ಕೂಡ ಪರೀಕ್ಷೆಯನ್ನು ಆರಾಮಾಗಿ ಬರೆಯಲು ಕಾರಣವಾಯಿತು " ಎಂದು ತಿಳಿಸಿದರು.
ವಿಜಯ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಬರುವುದನ್ನೇ ಕಾಯುತ್ತಿದ್ದ ಹಲವಾರು ಪೋಷಕರು ಕೂಡ ತುಂಬಾ ಕುತೂಹಲ ಹೊಂದಿದ್ದರು. ಅವರಲ್ಲಿ ವಿಜಯೇಂದ್ರ ಎಂಬವರನ್ನು ಮಾತನಾಡಿಸಿದಾಗ, " ನಾವು ಮಕ್ಕಳಿಗೆ ಚೆನ್ನಾಗಿ ಓದಲು ಏನೇನು ಅನುಕೂಲಗಳು ಬೇಕು ಎಲ್ಲವನ್ನು ನೀಡಿದ್ದೇವೆ. ಅವರು ಓದುವಾಗ ಅನೇಕ ಬಾರಿ ನಾವು ಅವರೊಟ್ಟಿಗೆ ಕುಳಿತು ಗಮನಿಸಿದ್ದೇವೆ. ನಮ್ಮ ಮತ್ತು ಕಾಲೇಜು ಶಿಕ್ಷಕರ ಪ್ರೋತ್ಸಾಹ ಹಾಗು ಮಕ್ಕಳ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡಲಿದೆ." ಎಂಬ ಉತ್ತರ ಸಿಕ್ಕಿತು.
ಕಂಪ್ಯೂಟರ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ
ಎಪತ್ತು ಅಂಕಗಳ ಕಂಪ್ಯೂಟರ್ ಸೈನ್ಸ್ ಪತ್ರಿಕೆಯು ಎ,ಬಿ,ಸಿ ಮತ್ತು ಡಿ ಎಂಬ ನಾಲ್ಕು ಭಾಗಗಳಲ್ಲಿ ಒಟ್ಟು 37 ಪ್ರಶ್ನೆಗಳನ್ನು ಒಳಗೊಂಡಿದೆ.
ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ಯಾವುದೇ ಆಯ್ಕೆಗಳು ಇರುವುದಿಲ್ಲ. ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಉತ್ತರಿಸಬೇಕಾಗುತ್ತದೆ ಮತ್ತು ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಭಾಗ-ಬಿ
ಇಲ್ಲಿ ಒಟ್ಟು 8 (ಎಂಟು) ಪ್ರಶ್ನೆಗಳು ಇದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.
ಭಾಗ-ಸಿ
ಬಿ ಭಾಗದಂತೆ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು . ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಮೂರು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ. ಈ ವಿಭಾಗದಲ್ಲಿ ಹದಿನೈದು ಅಂಕಗಳಿರುತ್ತದೆ.
ಭಾಗ-ಡಿ
ಡಿ ಭಾಗದಲ್ಲಿ ಒಟ್ಟು ಹನ್ನೊಂದು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಯು ಯಾವುದಾದರು ಏಳು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಐದು ಆಂಕಗಳನ್ನು ನಿಗದಿಪಡಿಸಲಾಗಿದ್ದು ಈ ಭಾಗವು ಒಟ್ಟು 35 ಅಂಕಗಳನ್ನು ಒಳಗೊಂಡಿರುತ್ತದೆ.
ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ: ಇತಿಹಾಸ ಪ್ರಶ್ನೆಪತ್ರಿಕೆ ವಿಶ್ಲೇಷಣೆ


Click it and Unblock the Notifications