ದ್ವಿತೀಯ ಪಿಯುಸಿ ಪರೀಕ್ಷೆ: ಇತಿಹಾಸ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ವಿಜ್ಞಾನ ವಿಭಾಗದ ಪತ್ರಿಕೆಯಂತೆ ಕಲಾ ವಿಭಾಗದ ಇತಿಹಾಸ ಪ್ರಶ್ನೆಪತ್ರಿಕೆ ಕೂಡ ವಿದ್ಯಾರ್ಥಿಗಳಿಗೆ ಹರ್ಷವನ್ನುಂಟುಮಾಡಿದೆ. ಈ ಮೂಲಕ ಮೊದಲ ದಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಕೊಂಚ ಕಡಿಮೆಯಾಗಿದೆ ಎನ್ನಬಹುದು.

ಇಲ್ಲಿನ ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 64 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ತುಂಬಿತ್ತು.

ಇತಿಹಾಸ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಈ ಬಾರಿಯ ಪರೀಕ್ಷೆಗಳು 10:15 ಕ್ಕೆ ಶುರುವಾಗಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಸೂಕ್ತ ಸಮಯಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುಕೂಲವಾಗಿದೆ. ಯಾವೊಬ್ಬ ವಿದ್ಯಾರ್ಥಿಗಳು ತಡವಾಗಿ ಅಥವಾ ಗೈರು ಹಾಜರಾದ ಮಾಹಿತಿ ಸಿಕ್ಕಿಲ್ಲ.

ವಿದ್ಯಾರ್ಥಿಗಳು ಮೊದಲ ದಿನ ನಿರಾಯಾಸವಾಗಿ ಪರೀಕ್ಷೆ ಬರೆದಿರುವುದರ ಬಗ್ಗೆ ಪೋಷಕರಲ್ಲಿ ಕೇಳಿದಾಗ " ಇಂದಿನ ಜನರೇಷನ್ ಮಕ್ಕಳು ಪರೀಕ್ಷೆಗಳನ್ನು ಸುಲಭವಾಗಿ ಪರಿಗಣಿಸುತ್ತಾರೆ, ನಮ್ಮ ಕಾಲದ ರೀತಿ ಅಲ್ಲ " ಎಂಬ ಉತ್ತರ ನೀಡಿದ್ದಾರೆ.

ಇತಿಹಾಸ ಪ್ರಶ್ನೆಪತ್ರಿಕೆ ವಿಶ್ಲೇಷಣೆ
ಇತಿಹಾಸ ಪತ್ರಿಕೆಯು ನೂರು ಅಂಕಗಳಾಗಿದ್ದು ಒಟ್ಟು ಆರು ಭಾಗಗಳನ್ನು ಒಳಗೊಂಡಿದೆ. ಈ ಪತ್ರಿಕೆಯನ್ನು ಉತ್ತರಿಸಲು ಮೂರು ಗಂಟೆ ಅವಧಿ ನಿಗದಿಪಡಿಸಲಾಗಿದೆ.
ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಭಾಗ-ಬಿ
20 ಅಂಕಗಳ ಈ ಭಾಗವು ಒಟ್ಟು ಹನ್ನೆರಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.
ಭಾಗ-ಸಿ
30 ಅಂಕಗಳ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಆರು ಪ್ರಶ್ನೆಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಐದು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.
ಭಾಗ-ಡಿ
ಡಿ ಭಾಗವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಎ ವಿಭಾಗವು ಸಾಮಾನ್ಯ ವಿದ್ಯಾರ್ಥಿಗಳಿಗೆ ಮತ್ತು ಬಿ ವಿಭಾಗವು ದೃಷ್ಟಿ, ವಿಕಲಚೇತನ ವಿದ್ಯಾರ್ಥಿಗಳಿಗೆ.

ಎ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾರತದ ಭೂಪಟದಲ್ಲಿ ಯಾವುದಾದರೂ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮತ್ತು ಗುರುತಿಸಿದ ಪ್ರತಿಯೊಂದು ಸ್ಥಳದ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಬೇಕಾಗುತ್ತದೆ. ಇದು ಒಟ್ಟು ಹತ್ತು ಅಂಕಗಳನ್ನು ಒಳಗೊಂಡಿರುತ್ತದೆ.

ಬಿ ವಿಭಾಗದಲ್ಲಿ ದೃಷ್ಟಿ, ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಎರಡು ಪ್ರಶ್ನೆಗಳಿದ್ದು , ಅವುಗಳಲ್ಲಿ ವಿದ್ಯಾರ್ಥಿಯು ಯಾವುದಾದರೂ ಒಂದಕ್ಕೆ ಉತ್ತರಿಸಬೇಕು. ಇದಕ್ಕೆ ಹತ್ತು ಹತ್ತು ಅಂಕಗಳನ್ನು ನಿಗದಿಪಡಿಸಿದ್ದು ವಿದ್ಯಾರ್ಥಿಯು 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಬೇಕಾಗುತ್ತದೆ.

ಭಾಗ-ಇ
ಇಲ್ಲಿ ನಾಲ್ಕು ಪ್ರಶ್ನೆಗಳಿದ್ದು ವಿದ್ಯಾರ್ಥಿಯು ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿಯೊಂದಕ್ಕೂ 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಬೇಕಾಗಿದ್ದು ಪ್ರತಿ ಪ್ರಶ್ನೆಯ ಉತ್ತರಕ್ಕೆ ಹತ್ತು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಭಾಗ-ಎಫ್
ಇದು ಪ್ರಶ್ನೆ ಪತ್ರಿಕೆಯ ಕೊನೆಯ ಭಾಗ. ಇಲ್ಲಿ ಐದು ಅಂಕಗಳ ಹೊಂದಿಸಿ ಬರೆಯಿರಿ ಮತ್ತು ಐದು ಅಂಕಗಳ ಘಟನೆಗಳ ಕಾಲಾನುಕ್ರಮ ಬರೆಯಿರಿ ಎಂಬ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಯು ಕೇಳಿರುವ ಎರಡೂ ಪ್ರಶ್ನೆಗಳನ್ನು ಉತ್ತರಿಸಬೇಕು.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ ಫುಲ್ ಖುಷ್

English summary
Just like their science counterparts, the arts students of Karnataka II PUC too took their cake walk with an easy History paper

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia