SSC CHSL Recruitment 2020: 6000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (ಸಿಚೆಚ್‌ಎಸ್‌ಎಲ್‌) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಸಿ ಯು 6,000 ಕೆಳ ದರ್ಜೆಯ ಗುಮಾಸ್ತ/ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಪೋಸ್ಟಲ್ ಅಸಿಸ್ಟೆಂಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 15,2020 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ:

ಕೆಳ ದರ್ಜೆಯ ಗುಮಾಸ್ತ/ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್
ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್
ಡಾಟಾ ಎಂಟ್ರಿ ಆಪರೇಟರ್ (ಡಿಇಓ)
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್-ಎ

ವಿದ್ಯಾರ್ಹತೆ:

ಪಿಯುಸಿ ವಿದ್ಯಾರ್ಹತೆ ಮತ್ತು ಪಿಯುಸಿ ಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ವಯೋಮಿತಿ:

ನೇಮಕಾತಿ ನಿಯಮಾನುಸಾರ ಜನವರಿ 1,2021ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 13 ವರ್ಷ, ಅಂಗವಿಕಲ (ಪ.ಜಾ/ಪ.ಪಂ) ಅಭ್ಯರ್ಥಿಗಳಿಗೆ 15 ವರ್ಷಗಳ ವಯೊಮಿತಿ ಸಡಿಲಿಕೆಯನ್ನು
ನೀಡಲಾಗಿರುತ್ತದೆ.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ವೇತನದ ವಿವರ:

ಕೆಳ ದರ್ಜೆಯ ಗುಮಾಸ್ತ/ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 19,900/- ರಿಂದ 63,200/-ರೂ, ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500/- ರಿಂದ 81,100/-ರೂ ಮತ್ತು ಡಾಟಾ ಎಂಟ್ರಿ ಆಪರೇಟರ್ (ಡಿಇಓ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 29,200/- ರಿಂದ 92,300/-ರೂ ವೇತನವನ್ನು ನೀಡಲಾಗುವುದು.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಟಯರ್-I, ಟಯರ್-II, ಟಯರ್-III (ಕೌಶಲ್ಯ ಪರೀಕ್ಷೆ/ಟೈಪಿಂಗ್ ಪರೀಕ್ಷೆ), ದಾಖಲೆ ಪರಿಶೀಲನೆ ಹಾಗೂ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ಶುಲ್ಕ:

ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂ.100/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಪ.ಜಾ/ಪ.ಪಂ/ಮಹಿಳೆ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ಚಲನ್ ಮೂಲಕ ಪಾವತಿಸಬಹುದು.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ಆನ್-ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 15,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ....ಡಿ.15ರೊಳಗೆ ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-11-2020
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2020ರ ರಾತ್ರಿ 11:30ರೊಳಗೆ
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ಕೊನೆಯ ದಿನಾಂಕ: 17-12-2020ರ ರಾತ್ರಿ 11:30ರೊಳಗೆ
ಅರ್ಜಿ ಶುಲ್ಕವನ್ನು ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ: 21-12-2020
ಕಂಪ್ಯೂಟರ್ ಆಧಾರಿತ ಪರೀಕ್ಷೆಯ (ಟಯರ್-1) ದಿನಾಂಕ: ಏಪ್ರಿಲ್ 12-2021 ರಿಂದ ಏಪ್ರಿಲ್ 27,2021ರ ವರೆಗೆ
ಟಯರ್-2 ಪರೀಕ್ಷೆಯ (ವಿವರಣಾತ್ಮಕ) ದಿನಾಂಕ: ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
SSC recruitment 2020 notification has been released for 6000 LDC/JSA, PA/SA & DEO Posts through CHSL exam. Interested candidates can apply through online before December 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+