ಕರ್ನಾಟಕದ ವೈದ್ಯಕೀಯ ಸೀಟುಗಳು ಕನ್ನಡಿಗರಿಗಲ್ಲ!

ಶೇ 30ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂಬ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲಿ ಎಂಬಿಬಿಎಸ್‌ ಮುಗಿಸಿದ ಎಲ್ಲ ವಿದ್ಯಾರ್ಥಿಗಳೂ ಈ ಸೀಟುಗಳನ್ನು ಪಡೆಯಲು ಅರ್ಹರು.

ಖಾಸಗಿ, ಅಲ್ಪಸಂಖ್ಯಾತ ಕಾಲೇಜುಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಕರ್ನಾಟಕದವರಿಗೆ ಮೀಸಲಿಡುವ ಶೇ 30ರಷ್ಟು ವೈದ್ಯಕೀಯ ಸೀಟುಗಳನ್ನು ಬರೀ ಕನ್ನಡಿಗರಿಗೆ ಕೊಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ಎನ್‌ಇಇಟಿ) ರ್ಯಾಂಕಿಂಗ್‌ ಆಧಾರದ ಮೇಲೆ ಶೇ 30ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂಬ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲಿ ಎಂಬಿಬಿಎಸ್‌ ಮುಗಿಸಿದ ಎಲ್ಲ ವಿದ್ಯಾರ್ಥಿಗಳೂ ಈ ಸೀಟುಗಳನ್ನು ಪಡೆಯಲು ಅರ್ಹರಿದ್ದು ಕೇವಲ ಕನ್ನಡಿಗರಿಗೆ ಅನ್ವಯ ಆಗಲಿದೆ ಎಂದು ಅರ್ಥೈಸಬಾರದು ಎಂದು ಸಚಿವರು ಹೇಳಿದ್ದಾರೆ.

ಹಳೇ ನಿಯಮ ಪಾಲಿಸಲು ಸುಪ್ರೀಂ ಸೂಚನೆ

ಸ್ಥಳೀಯರಿಗೇ ಈ ಸೀಟುಗಳನ್ನು ಒದಗಿಸಬೇಕು ಎಂಬ ದೃಷ್ಟಿಯಿಂದ ರಾಜ್ಯದಲ್ಲಿ ಕಡ್ಡಾಯವಾಗಿ ನೆಲೆಸಿರಬೇಕಾದ ಅವಧಿಯನ್ನು 5 ವರ್ಷದ ಬದಲು 7 ವರ್ಷಕ್ಕೆ ಹೆಚ್ಚಿಸಿ ತಿದ್ದುಪಡಿ ತರಲಾಗಿತ್ತು. ಇದನ್ನು ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಕೋರ್ಟ್‌ ಹಳೆಯ ನಿಯಮವನ್ನೇ ಪಾಲಿಸುವಂತೆ ತೀರ್ಪು ನೀಡಿದೆ ಎನ್ನುವುದನ್ನು ಸ್ಪಷ್ಟಪಡಿಸಿದರು.

ಶೇ 30ರಷ್ಟು ಸೀಟುಗಳನ್ನು ಸ್ಥಳೀಯರಿಗೇ ಕೊಡುವ ಸಂಬಂಧ ನಿಯಮಾವಳಿಗಳಿಗೆ ಯಾವ ರೀತಿ ತಿದ್ದುಪಡಿ ತರಬೇಕೆಂಬ ಬಗ್ಗೆ ಚರ್ಚಿಸಿ ಮುಂದಿನ ವರ್ಷದಿಂದ ಜಾರಿಗೊಳಿಸಲಾಗುವುದು ಎಂದೂ ಸಚಿವರು ಹೇಳಿದ್ದಾರೆ.

ಕರ್ನಾಟಕದ ವೈದ್ಯಕೀಯ ಸೀಟು

ಸರ್ಕಾರದಿಂದ ಕೇಂದ್ರೀಕೃತ ಕೌನ್ಸೆಲಿಂಗ್‌

ಸರ್ಕಾರಿ, ಖಾಸಗಿ, ಅಲ್ಪಸಂಖ್ಯಾತ ಮತ್ತು ಡೀಮ್ಡ್‌ ಕಾಲೇಜುಗಳಲ್ಲಿ ಲಭ್ಯ ಇರುವ ಎಲ್ಲ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಸರ್ಕಾರದಿಂದಲೇ ಕೇಂದ್ರೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು.

ಡೀಮ್ಡ್‌ ವಿಶ್ವವಿದ್ಯಾಲಯಗಳ ಅನಿವಾಸಿ ಭಾರತೀಯ ಕೋಟಾ (ಎನ್‌ಆರ್‌ಐ) ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದ ಶೇ 25ರಷ್ಟು ಸೀಟುಗಳಿಗೂ ಸರ್ಕಾರವೇ ಕೌನ್ಸೆಲಿಂಗ್‌ ನಡೆಸುತ್ತದೆ. ಆದರೆ, ಈ ವಿಭಾಗದಡಿ ಪ್ರವೇಶ ಪಡೆಯುವವರ ಶುಲ್ಕವನ್ನು ಆಯಾ ಡೀಮ್ಡ್‌ ವಿವಿಗಳು ನಿರ್ಧರಿಸಲಿವೆ. ಈ ಸಂಬಂಧ ವಿದ್ಯಾರ್ಥಿಗಳು ಆಯ್ಕೆಗಳನ್ನು ದಾಖಲಿಸಲು (ಆಪ್ಷನ್‌ ಎಂಟ್ರಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶೀಘ್ರವೇ ಅವಕಾಶ ಒದಗಿಸಲಿದೆ.

ಶುಲ್ಕ ಬದಲಾವಣೆ ಇಲ್ಲ

ಸರ್ಕಾರಿ ಸೀಟುಗಳ ಶುಲ್ಕದಲ್ಲಿ ಬದಲಾವಣೆ ಮಾಡಿಲ್ಲ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಶೇ 10ರಷ್ಟು ಮಾತ್ರ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಇದಲ್ಲದೆ, ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡುವ ಶೇ 30ರಷ್ಟು ಸೀಟುಗಳನ್ನು ಸರ್ಕಾರ ನಿಗದಿ ಮಾಡಿದ ಶುಲ್ಕದಲ್ಲಿಯೇ ನೀಡಬೇಕು ಸಚಿವರು ಹೇಳಿದ್ದಾರೆ.

ಇದನ್ನು ಗಮನಿಸಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ದುಬಾರಿ

ಹೆಚ್ಚಾಗಲಿದೆ ಎಂಬಿಬಿಎಸ್‌ ಸೀಟುಗಳು

'ರಾಜ್ಯದಲ್ಲಿ 2017- 18ನೇ ಸಾಲಿಗೆ 350 ಎಂಬಿಬಿಎಸ್‌ ಸೀಟುಗಳು ಹೆಚ್ಚಳ ಆಗಿವೆ' ಎಂದು ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೆಳಗಾವಿ ಮತ್ತು ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಮಿತಿಯನ್ನು 100ರಿಂದ 150 ಸೀಟುಗಳಿಗೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಕಾಲೇಜಿನ ಪ್ರವೇಶ ಮಿತಿಯನ್ನು 150ರಿಂದ 200ಕ್ಕೆ ಏರಿಸಲು ಒಪ್ಪಿಗೆ ದೊರೆತಿದೆ ತಿಳಿಸಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
'30 percent reserved medical seats for karnataka is not only for kannadiga's, people who studied here can also eligible to get the medical seats' minister sharana prakash said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+