ಸಿಇಟಿ-2017: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ವಿದ್ಯಾರ್ಥಿಗಳು/ ಪೋಷಕರು ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲು ಕೋರಿರುವ ಹಿನ್ನಲೆಯಲ್ಲಿ ದಿನಾಂಕ 08 -03 -2017 ರವರೆಗೆ ಅರ್ಜಿ ಸಲ್ಲಿಸಲು ಮತ್ತು 10 -03 -2017 ರವರೆಗೆ ಶುಲ್ಕ ಪಾವತಿಸಲು ದಿನಾಂಕಗಳನ್ನು ವಿಸ್ತರಿಸಲಾಗಿದೆ.

ಸಿಇಟಿ -2017 ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು ಹಾಗೂ ಅರ್ಜಿ ಸಲ್ಲಿಸಲು ದಿನಾಂಕ 27-02 -2017 ರ ವರೆಗೆ ಮತ್ತು ಶುಲ್ಕ ಪಾವತಿಸಲು ದಿನಾಂಕ 02 -03 -2017 ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು.

ಅನೇಕ ವಿದ್ಯಾರ್ಥಿಗಳು/ ಪೋಷಕರು ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲು ಕೋರಿರುವ ಹಿನ್ನಲೆಯಲ್ಲಿ ದಿನಾಂಕ 08 -03 -2017 ರವರೆಗೆ ಅರ್ಜಿ ಸಲ್ಲಿಸಲು ಮತ್ತು 10 -03 -2017 ರವರೆಗೆ ಶುಲ್ಕ ಪಾವತಿಸಲು ದಿನಾಂಕಗಳನ್ನು ವಿಸ್ತರಿಸಲಾಗಿದೆ. ಇಲ್ಲಿಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ದಿನಾಂಕ 08 -03 -2017 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ದಿನಾಂಕ 10 -03 -2017 ವರೆಗೆ ಶುಲ್ಕವನ್ನು ಪಾವತಿಸಬಹುದಾಗಿದೆ.

 ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ದಿನಾಂಕ ವಿಸ್ತರಣೆ

ಅರ್ಜಿ ಸಲ್ಲಿಸಲು ಕೊನೆಯ ದಿನ: 08-03-2017

ಶುಲ್ಕ ಪಾವತಿಸಲು ಕೊನೆಯ ದಿನ: 10-03-2017

ಮೇ 02 ಮತ್ತು 03 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕೆಇಎ ತಿಳಿಸಿದೆ. ಈ ಬಾರಿ ಸಿಬಿಎಸ್ಇ ನೀಟ್-2017 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಯ ಜವಾಬ್ದಾರಿ ಹೊತ್ತಿರುವುದರಿಂದ ವೈದ್ಯಕೀಯ ಸೀಟು ಹೊರತುಪಡಿಸಿ ಎಂಜಿನಿಯರಿಂಗ್ ಹಾಗೂ ಕೃಷಿ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ.

ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ, ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪರೀಕ್ಷೆಗಳು ನಡೆಯುವ ಸಮಯ

ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ, ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ.

ಹೊರನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.

ಕೆ ಸಿ ಇ ಟಿ ಎಂದರೇನು ?
ಪಿ ಯು ಸಿ ನಂತರದ ವೃತ್ತಿಪರ ಕೋರ್ಸ್ಗೆ ಸೇರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೇ ಕೆಸಿಇಟಿ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ -2017 ಅನ್ನು, 2017 -18 ನೇ ಶೈಕ್ಷಣಿಕ ವರ್ಷಕ್ಕೆ ಸಂಭಂದಿಸಿದಂತೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ/ ವಿಶ್ವವಿದ್ಯಾಲಯ/ ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಸಂಭಂದಿಸಿದಂತೆ ಅರ್ಹತೆ/ ಮೆರಿಟ್ ಅನ್ನು ನಿರ್ಧರಿಸುವ ಉದ್ದೇಶದಿಂದ ನಡೆಸಲಾಗುತ್ತದೆ.

ಸೂಚನೆ

1 . ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಸಿ.ಬಿ.ಎಸ್.ಇ ನವರು ನಡೆಸುವ ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (NEET)-2017 ರಲ್ಲಿ ಅರ್ಹತೆಯನ್ನು ಹೊಂದಿರಬೇಕು. ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (NEET)-2017 ರ
ಹಾಗು ಸರ್ಕಾರವು ನಿಗದಿಪಡಿಸುವ ಅರ್ಹತಾ ಮಾನದಂಡಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅನ್ವಯಿಸುತ್ತದೆ.

2 ಆರ್ಕಿಟೆಕ್ಚರ್ ಕೋರ್ಸ್ನ ಪ್ರವೇಶಕ್ಕಾಗಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ನಡೆಸುವ NATA (National Aptitude Test in Architecture) ಪರೀಕ್ಷೆಗೆ ಹಾಜರಾಗಬೇಕು. NATA ಪರೀಕ್ಷೆಯು ದಿನಾಂಕ 16 -04 -2017 ರಂದು ನಡೆಯುತ್ತದೆ ಎಂದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ತಮ್ಮ ವೆಬ್ ಸೈಟ್ http://www.nata.in/ ನಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ನೋಡಬಹುದಾಗಿದೆ. ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ / ಸರ್ಕಾರವು ನಿಗದಿಪಡಿಸುವ ಅರ್ಹತಾ ಮಾನದಂಡಗಳು ಆರ್ಕಿಟೆಕ್ಚರ್ ಕೋರ್ಸ್‍ನ ಪ್ರವೇಶಕ್ಕೆ ಅನ್ವಯಿಸುತ್ತದೆ.

ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆ

  1. ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು
  2. ವಿಟಿಯು ವೆಬ್ಸೈಟಿನಲ್ಲಿ ಪ್ರಚುರ ಪಡಿಸಿರುವ ಪಟ್ಟಿಯಲ್ಲಿರುವ ಅರ್ಹತೆ ಪರೀಕ್ಷೆಯನ್ನು ಯಾವುದೇ ಮುಕ್ತ ವಿಶ್ವವಿದ್ಯಾಲ/ಬೋರ್ಡ್ ಗಳಲ್ಲಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಕೆಇಎ ಮೂಲಕ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅರ್ಹರಾಗಿರುವುದಿಲ್ಲ.
  3. ಕೆಎಸ್ಒಯು (ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ) ದಿಂದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಕೆಇಎ ಮೂಲಕ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅರ್ಹರಾಗಿರುವುದಿಲ್ಲ.
  4. 2017 ರಲ್ಲಿ ಅರ್ಹತಾ ಪರೀಕ್ಷೆಯನ್ನು ಅಂದರೆ ದ್ವಿತೀಯ ಪಿಯುಸಿ / 12 ನೇ ತರಗತಿ ಪರೀಕ್ಷೆ ಬರೆಯುತಿದ್ದು ಅದರ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಯು 2017 ನೇ ಸಿಇಟಿ ಪರೀಕ್ಷೆಯನ್ನು ಬರೆಯಬಹುದು. ಆದರೆ ಅಂತಹ ಅಭ್ಯರ್ಥಿಯು ಅರ್ಹತಾ ಪರೀಕ್ಷೆಯನ್ನು ಅಗತ್ಯ ಶೇಕಡಾವಾರು ಅಂಕಗಳೊಂದಿಗೆ ತೇರ್ಗಡೆ ಹೊಂದದಿದ್ದಲ್ಲಿ ಅವರು ಈ ಹಿಂದೆ ತಿಳಿಸಿರುವ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುವುದಿಲ್ಲ.
  5. ಅರ್ಹತೆಯನ್ನು ನಿರ್ಧರಿಸುವ ಶೈಕ್ಷಣಿಕ ವಿದ್ಯಾರ್ಹತೆ / ಅರ್ಹತಾ ಮಾನದಂಡವು ಸಕ್ಷಮ ಪ್ರಾಧಿಕಾರವು ಕಾಲಕಾಲಕ್ಕೆ ನಿಗಧಿಪಡಿಸುವ ನಿಭಂದನೆಗೆ / ಮಾರ್ಗಸೂಚಿ ಒಳಪಟ್ಟಿರುತ್ತದೆ.
  6. ಪ್ರಾಧಿಕಾರವು ಕಾಲೇಜುಗಳಿಗೆ ನಿಗದಿಪಡಿಸುವ ಅರ್ಹತೆ/ಪ್ರವೇಶ/ ಹಂಚಿಕೆ ಮಾಡುವಿಕೆ ಇತ್ಯಾದಿಗಳು ಎಂಸಿ/ಡಿಸಿಐ / ಎಐಸಿಟಿಇ / ಸಿಓಎ/ ಸಿಸಿಐಎಮ್/ ಸರ್ಕಾರ / ಸಂಭಂದಿಸಿದ ವಿಶ್ವವಿದ್ಯಾಲಯ / ಅಪೆಕ್ಸ್ ಸಂಸ್ಥೆಗಳ ಅನುಮೋದನೆಗೆ ಒಳಪಟ್ಟಿರುತ್ತದೆ.
  7. ಅರ್ಹತಾ ಮಾನದಂಡ / ನಿಯಮಗಳು ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರದಿಂದ ನಿಗದಿ ಪಡಿಸಲಾಗುತ್ತಿದ್ದು, ಅವುಗಳನ್ನು ಪೂರೈಸದಿದ್ದ ಸಂಧರ್ಭದಲ್ಲಿ ಮಾಡಲಾಗಿರುವ ಯಾವುದೇ ಪ್ರವೇಶಗಳನ್ನು ವಿದ್ಯಾಭ್ಯಾಸದ ಅವಧಿಯ ಯಾವುದೇ ಹಂತದಲ್ಲಿ ಹಿಂತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಕರ್ನಾಟಕ ಪರೀಕ್ಷಾ ಪ್ರದಿಕಾರದಾಗಿರುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಅಭ್ಯರ್ಥಿಗಳು ಕೆಇಎ ನಡೆಸುವ ಸಿಇಟಿ ಮೂಲಕ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ತಮ್ಮ ಅರ್ಜಿ ವಿವರಗಳನ್ನು ಆನ್‍ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು.

ವೆಬ್ಸೈಟ್ ವಿಳಾಸ: http://kea.kar.nic.in/index.html

ಇದನ್ನು ಗಮನಿಸಿ:ಕೆಸಿಇಟಿ ಪರೀಕ್ಷಾ ವಿಧಾನ, ವೇಳಾಪಟ್ಟಿ ಮತ್ತು ಪಠ್ಯಕ್ರಮ

More News  

For Quick Alerts
ALLOW NOTIFICATIONS  
For Daily Alerts

English summary
date extended to apply online for cet-217
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+