ಕೆಸಿಇಟಿ ಪರೀಕ್ಷಾ ವಿಧಾನ, ವೇಳಾಪಟ್ಟಿ ಮತ್ತು ಪಠ್ಯಕ್ರಮ

Posted By: Vinaykumar

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೋರ್ಸುಗಳ ಆಯ್ಕೆಯ ಮೇರೆಗೆ ಹಾಜರಾಗಬೇಕಿರುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆ -2017ಅನ್ನು ಕರ್ನಾಟಕದಾದ್ಯಂತ ಇರುವ 54 ಸ್ಥಳಗಳಲ್ಲಿ ನಡೆಸಲಾಗುವುದು.

ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಥವಾ ಅದನ್ನು ಬರೆದಿರುವ ವಿದ್ಯಾರ್ಥಿಗಳು, ಯಾವ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯನ್ನು ವ್ಯಾಸಂಗ ಮಾಡಿರುವರೋ, ಆ ಜಿಲ್ಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡುವ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ- 2017'ನ್ನು ಬರೆಯಬೇಕಿರುತ್ತದೆ.

ಕೆಸಿಇಟಿ ಪರೀಕ್ಷಾ ವಿಧಾನ

ಸಾಮಾನ್ಯ ಪ್ರವೇಶ ಪರೀಕ್ಷೆ 2017ರ ವೇಳಾಪಟ್ಟಿ

ದಿನಾಂಕದಿನಸಮಯವಿಷಯಅಂಕಗಳು
02-05-2017 ಮಂಗಳವಾರ ಬೆಳಿಗ್ಗೆ 10-30ರಿಂದ 11-50ರವರೆಗೆಜೀವಶಾಸ್ತ್ರ60
ಮಧ್ಯಾಹ್ನ 2-30ರಿಂದ 3-50ರವರೆಗೆಗಣಿತಶಾಸ್ತ್ರ60
03-05-2017 ಬುಧವಾರ ಬೆಳಿಗ್ಗೆ 10-30ರಿಂದ 11-50ರವರೆಗೆಭೌತಶಾಸ್ತ್ರ60
ಮಧ್ಯಾಹ್ನ 2-30ರಿಂದ 3-50ರವರೆಗೆರಸಾಯನಶಾಸ್ತ್ರ60

ಕನ್ನಡ ಭಾಷಾ ಪರೀಕ್ಷೆ - ಬೆಂಗಳೂರಿನಲ್ಲಿ ಮಾತ್ರ

ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ

04-05-2017ಗುರುವಾರ

ಬೆಳಿಗ್ಗೆ 11-30ರಿಂದ 12-30ರವರೆಗೆ

50

2017 ಮೇ 02 ಮತ್ತು 03 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕೆಇಎ ತಿಳಿಸಿದೆ. ಈ ಬಾರಿ ಸಿಬಿಎಸ್ಇ ನೀಟ್-2017 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಯ ಜವಾಬ್ದಾರಿ ಹೊತ್ತಿರುವುದರಿಂದ ವೈದ್ಯಕೀಯ ಸೀಟು ಹೊರತುಪಡಿಸಿ ಎಂಜಿನಿಯರಿಂಗ್, ಆಯುಷ್ ಹಾಗೂ ಕೃಷಿ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ.

ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ, ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗಳು ನಡೆಯುವ ಸಮಯ: ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ, ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.

ಸಿಲ್ಲಬಸ್

ಕೆಸಿಎಟಿಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಸಿಲ್ಲಬಸ್ ಇರುವುದಿಲ್ಲ. ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಕಲಿತ ವಿಷಯಗಳ ಮೇಲೆಯೇ ಪ್ರಶ್ನೆಪತ್ರಿಕೆಯನ್ನು ರೂಪಿಸಲಾಗಿರುತ್ತದೆ. ಯಾವುದೇ ವಿಷಯ ತೆಗೆದುಕೊಂಡರು ಆಳವಾದ ಅಧ್ಯಯನ ಮುಖ್ಯ. ಕರ್ನಾಟಕ ಶಿಕ್ಷಣ ಪ್ರಾಧಿಕಾರಾದ ಪಿಯುಸಿ ಸಿಲಬಸ್ ಗಾಗಿ ಈ ಕೆಳಗಿನ ಪಟ್ಟಿ ಗಮನಿಸಿ.

ಫಿಸಿಕ್ಸ್ :

ಫಿಸಿಕಲ್ ವರ್ಲ್ಡ್ ಅಂಡ್ ಮೆಸ್ಸುರೆಮೆಂಟ್, ಕೈನೆಮಾಟಿಕ್ಸ್ , ಲಾ ಆಫ್ ಮೋಶನ್, ವರ್ಕ್ ಎನರ್ಜಿ ಅಂಡ್ ಪವರ್, ಮೋಶನ್ ಆಫ್ ಸಿಸ್ಟಮ್ ಆಫ್ ಪಾರ್ಟಿಕಲ್ಸ್ ಅಂಡ್ ರಿಜಿಡ್ ಬಾಡಿ, ಗ್ರಾವಿಟೇಷನ್,  ಪ್ರಾಪರ್ಟಿ ಆಫ್ ಬಲ್ಕ್ ಮ್ಯಾಟರ್, ಥೆರ್ಮೋಡೈನಮಿಕ್ಸ್,  ಬಿಹೆವಿಯರ್ ಆಫ್ ಪರ್ಫೆಕ್ಟ್ ಗ್ಯಾಸ್ ಅಂಡ್ ಕೈನೆಟಿಕ್ ಥಿಯರಿ, ಆಸಿಲೇಷನ್ಸ್ ಅಂಡ್ ವೇವ್ಸ್

ದ್ವಿತೀಯ ಪಿಯುಸಿ ಫಿಸಿಕ್ಸ್ ಸಿಲ್ಲಬಸ್ :
ಎಲೆಕ್ಟ್ರೋಸ್ಟಾಟಿಕ್ಸ್ , ಕರೆಂಟ್ ಎಲೆಕ್ಟ್ರಿಸಿಟಿ, ಮ್ಯಾಗ್ನೆಟಿಕ್ ಎಫೆಕ್ಟ್ಸ್ ಆಫ್ ಕರೆಂಟ್ ಅಂಡ್ ಮ್ಯಾಗ್ನೆಟಿಸ್ಮ್, ಎಲೆಕ್ಟ್ರೋಮ್ಯಾಗ್ನೆಟಿಕ್ ಇಂದುಕ್ಷನ್ ಅಂಡ್ ಆಲ್ಟೆರ್ನೇಟಿಂಗ್ ಕರೆಂಟ್ಸ್, ಎಲೆಕ್ರೋಮ್ಯಾಗ್ನೆಟಿಕ್ ವೇವ್ಸ್, ಆಪ್ಟಿಕ್ಸ್, ಡುಯಲ್ ನೇಚರ್ ಆಫ್ ಮ್ಯಾಟರ್ ಅಂಡ್ ರೇಡಿಯೇಶನ್,  ಅಟೊಮ್ಸ್ ಅಂಡ್ ನ್ಯೂಕ್ಲಿಐ, ಇಲೆಕ್ಟ್ರಾನಿಕ್ ಡೆವಿಸ್ಸ್, ಕಮ್ಯುನಿಕೇಷನ್ ಸಿಸ್ಟಮ್ಸ್

ಕೆಮಿಸ್ಟ್ರಿ :
ಸಮ್ ಬೇಸಿಕ್ ಕಾನ್ಸೆಪ್ಟ್ಸ್ ಆಫ್ ಕೆಮಿಸ್ಟ್ರಿ, ಸ್ಟ್ರಕ್ಚರ್ ಆಫ್ ಆಟಂ, ಕ್ಲಾಸಿಫಿಕೇಶನ್ ಆಫ್ ಎಲಿಮೆಂಟ್ಸ್ ಅಂಡ್ ಪೀರ್ಯಾಡಿಸಿಟಿ ಇನ್ ಪ್ರಾಪರ್ಟೀಸ್,  ಕೆಮಿಕಲ್ ಬಾಂಡಿಂಗ್ ಅಂಡ್ ಮೊಲಿಕ್ಯುಲರ್ ಸ್ಟ್ರಕ್ಚರ್ , ಸ್ಟೇಟ್ಸ್ ಆಫ್ ಮ್ಯಾಟರ್; ಗ್ಯಾಸೆಸ್ ಅಂಡ್ ಲಿಖ್ವಿಡ್ಸ್, ಕೆಮಿಕಲ್ ಥೆರ್ಮೋಡೈನಮಿಕ್ಸ್, ಎಕ್ವಿಲೈಬ್ರಿಯಂ, ರೆಡೊಕ್ಸ್ ರಿಯಾಕ್ಷನ್ಸ್,  ಹೈಡ್ರೋಜನ್, ಎಸ್-ಬ್ಲಾಕ್ ಎಲಿಮೆಂಟ್ಸ್,  ಸಮ್ ಪಿ-ಬ್ಲಾಕ್ ಎಲಿಮೆಂಟ್ಸ್,  ಆರ್ಗಾನಿಕ್ ಕೆಮಿಸ್ಟ್ರಿ; ಸಮ್ ಬೇಸಿಕ್ ಪ್ರಿನ್ಸಿಪಲ್ಸ್, ಹೈಡ್ರೋಕಾರ್ಬೊನ್ಸ್,  ಎನ್ವಿರಾನ್ಮೆಂಟಲ್ ಕೆಮಿಸ್ಟ್ರಿ

ದ್ವಿತೀಯ ಪಿಯುಸಿ ಸಿಲ್ಲಬಸ್
ಸಾಲಿಡ್ ಸ್ಟೇಟ್, ಸೋಲ್ಲ್ಯೂಷನ್ಸ್,  ಎಲೆಕ್ಟ್ರೋಕೆಮಿಸ್ಟ್ರಿ,  ಕೆಮಿಕಲ್ ಕೈನೆಟಿಕ್ಸ್, ಸರ್ಫೇಸ್ ಕೆಮಿಸ್ಟ್ರಿ, ಜನರಲ್ ಪ್ರಿನ್ಸಿಪಲ್ಸ್ ಅಂಡ್ ಐಸೋಲೇಷನ್ ಆಫ್ ಎಲಿಮೆಂಟ್ಸ್, ಪಿ-ಬ್ಲಾಕ್ ಎಲಿಮೆಂಟ್ಸ್,  ಡಿ ಅಂಡ್ ಎಫ್ ಬ್ಲಾಕ್ ಎಲಿಮೆಂಟ್ಸ್,  ಕೋ-ಆರ್ಡಿನೇಷನ್ ಕಾಂಪೌಂಡ್ಸ್,  ಹಾಲೊಆಲ್ಕೇನ್ಸ್ ಅಂಡ್ ಹಾಲೋಅರೆನೆಸ್ , ಆಲ್ಕೋಹಾಲ್ಸ್,  ಫೀನಾಲ್ಸ್ ಅಂಡ್ ಈಥೇರ್ಸ್,  ಅಲ್ಡೆಹೈಡ್ಸ್ ಅಂಡ್ ಕೀಟೋನ್ಸ್ ಅಂಡ್ ಕಾರ್ಬೋಕ್ಸಿಲಿಕ್ ಆಸಿಡ್ಸ್, ಆರ್ಗಾನಿಕ್ ಕಾಂಪೌಂಡ್ಸ್ ಕಂಟೈನಿಂಗ್ ನೈಟ್ರೋಜನ್, ಬಯೊಮಾಲಿಕ್ಯೂಲ್ಸ್, ಪೊಲಿಮೆರ್ಸ್, ಕೆಮಿಸ್ಟ್ರಿ ಇನ್ ಎವೆರಿಡೇ ಲೈಫ್

ಮ್ಯಾಥೆಮ್ಯಾಟಿಕ್ಸ್ :
ಆಲ್ಜೀಬ್ರಾ, ಅನಲಿಟಿಕಲ್ ಜಾಮಿಟ್ರಿ, ಟ್ರಿಗನೋಮೆಟ್ರಿ, ಕ್ಯಾಲ್ಕುಲಸ್

English summary
KCET examination pattern and syllabus

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia