ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ , ಇದೀಗ ಹಲವಾರು ಪ್ರವೇಶಾತಿ ಪರೀಕ್ಷೆಯನ್ನ ಆಯೋಜಿಸಲಿದೆ. ಅಷ್ಟೇ ಅಲ್ಲ ಇದೀಗ ಎನ್‌ಇಇಟಿ ಮತ್ತು ಜೆಇಇ ಪ್ರಮುಖ ಪರೀಕ್ಷೆಗೆ ಉಚಿತವಾಗಿ ಕೋಚಿಂಗ್ ನೀಡಲು ಕೂಡಾ ಈ ಸಂಸ್ಥೆ ಮುಂದೆ ಬಂದಿದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.

ಎನ್‌ಟಿಎ ಇದೀಗ ಹೊಸತಾಗಿ ಟೆಸ್ಟ್ ಪ್ರ್ಯಾಕ್ಟೀಸ್ ಸೆಂಟರ್ ತೆರೆದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ, ಈ ಸುದ್ದಿಯಿಂದ ಈಗಾಗಲೇ ಕೋಚಿಂಗ್ ಗೆ ಲಕ್ಷಾಂತರ ದುಡ್ಡು ಖರ್ಚು ಮಾಡಬೇಕಲ್ಲ ಎಂದು ತಲೆ ಮೇಲೆ ಕೈಯಿಟ್ಟು ಕುಳಿತಿರುವ ಪೋಷಕರಿಗೆ ಬಂಪರ್ ಹೊಡೆದಂತಾಗಿದ್ದು,ಇದೀಗ ನಿರಾಳವಾಗಿದ್ದಾರೆ.
ಜೆಇಇ ಪ್ರಮುಖ 2019, ಸಿಎಂಎಟಿ 2019, ಜಿಪಿಎಟಿ 2019 ಮತ್ತು ಯುಜಿಸಿ ನೆಟ್ 2018 ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಎನ್‌ಟಿಎ ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ, ಪ್ರ್ಯಾಕ್ಟೀಸ್ ಟೆಸ್ಟ್ ಗೆ ರಿಜಿಸ್ಟ್ರೇಟ್ ಮಾಡಿಕೊಳ್ಳಬಹುದಾಗಿದೆ. ಸೆಪ್ಟಂಬರ್ 1 ರಿಂದ ಈ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.
ದೇಶದಾದ್ಯಂತ ಸುಮಾರು 2697 ಪ್ರ್ಯಾಕ್ಟೀಸ್ ಸೆಂಟರ್‌ಗಳನ್ನ ಸ್ಥಾಪಿಸಲಾಗುವುದು. ಹಾಗೂ ಕಾಂಪಿಟೇಟಿವ್ ಪರೀಕ್ಷೆಗೆ ಸಂಬಂಧಪಟ್ಟಂತೆ ಇಲ್ಲಿ ಕ್ಲಾಸ್ ಮಾಡಲಾಗುವುದು ಜತೆಗೆ ಈ ಸೆಂಟರ್‌ಗಳನ್ನ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು ಎಂದು ಹೆಚ್‌ಆರ್‌ಡಿ ಮಿನಿಸ್ಟ್ರಿ ತಿಳಿಸಿದೆ.


Click it and Unblock the Notifications











