ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 'ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆ'ಯು (ಎನ್‌ಐಆರ್‌ಎಫ್) 2020ರ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆಗೆ ಸೇರ್ಪಡೆಗೊಂಡಿವೆ. ಶಿಕ್ಷಣ, ಕಲಿಕೆ, ಸಂಪನ್ಮೂಲಗಳು, ಸಂಶೋಧನೆ, ವೃತ್ತಿಪರ ನೀತಿಗಳು ಮತ್ತಿತರ ಪ್ರಮುಖ ಮಾನದಂಡಗಳ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗುತ್ತದೆ. ಈ ಭಾರಿ ಡೆಂಟಲ್ ಕಾಲೇಜುಗಳನ್ನು ಪ್ರತ್ಯೇಕ ರ್ಯಾಂಕಿಂಗ್ ವಿಭಾಗದಲ್ಲಿ ತರಲಾಗಿದೆ.

ರ್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) ಎರಡನೇ ಸ್ಥಾನ ಲಭಿಸಿದ್ದರೆ, ಅಗ್ರ ಮೂರು ಶ್ರೇಷ್ಠ ವಿವಿಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಭಾರತೀಯ ನಿರ್ವಹಣಾ ಸಂಸ್ಥೆಗಳ (ಐಐಎಂ) ಪೈಕಿ ಐಐಎಂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಕಾನೂನು ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ ಮೊದಲ ಸ್ಥಾನ ಪಡೆದಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಮಣಿಪಾಲ ದಂತವೈದ್ಯಕೀಯ ಕಾಲೇಜು ಎರಡನೇ ಸ್ಥಾನದಲ್ಲಿದೆ.
ಸಮಗ್ರ ರಾರಯಂಕಿಂಗ್‌ನಲ್ಲಿ ಮದ್ರಾಸ್ ಐಐಟಿ ಮೊದಲ ಸ್ಥಾನದಲ್ಲಿದ್ದರೆ, ದಿಲ್ಲಿ ಐಐಟಿ ಮೂರನೇ ಸ್ಥಾನದಲ್ಲಿದೆ. ದೇಶದ ಮೂರು ಶ್ರೇಷ್ಠ ವಿವಿಗಳಲ್ಲಿ ಬೆಂಗಳೂರು ಐಐಎಸ್ಸಿ ಮೊದಲ ಸ್ಥಾನ ಪಡೆದಿದ್ದು, ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು) ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಸಿಕ್ಕಿವೆ. ಅತ್ಯುತ್ತಮ ಭಾರತೀಯ ನಿರ್ವಹಣಾ ಸಂಸ್ಥೆಗಳ(ಐಐಎಂ) ಪೈಕಿ ಐಐಎಂ ಅಹಮದಾಬಾದ್‌ಗೆ ಮೊದಲು, ಐಐಎಂ ಬೆಂಗಳೂರಿಗೆ ಎರಡನೇ ಹಾಗೂ ಐಐಎಂ ಕೊಲ್ಕೊತಾಗೆ ಮೂರನೇ ಸ್ಥಾನ ಲಭಿಸಿದೆ. ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಐಐಟಿ ಮದ್ರಾಸ್, ಐಐಟಿ ದಿಲ್ಲಿಮತ್ತು ಐಐಟಿ ಮುಂಬಯಿ ಟಾಪ್ 3ನೇ ಸ್ಥಾನ ಪಡೆದಿವೆ.
ಫಾರ್ಮಸಿ ಕ್ಷೇತ್ರದಲ್ಲಿ ದಿಲ್ಲಿಯ ಜಾಮಿಯಾ ಹಮ್‌ದದ್‌ರ್ ಸಂಸ್ಥೆ, ಚಂಡೀಗಢದ ಪಂಜಾಬ್ ಯೂನಿವರ್ಸಿಟಿ ಹಾಗೂ ಮೊಹಾಲಿಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಾಸುಟಿಕಲ್ ರಿಸರ್ಚ್ ಸಂಸ್ಥೆಗಳು ಮೊದಲ 3 ಸ್ಥಾನ ಪಡೆದಿವೆ. ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ದಿಲ್ಲಿಯ ಏಮ್ಸ್, ಚಂಡೀಗಢದ ಪೋಸ್ಟ್ ಗ್ರ್ಯಾಜುಯೇಟ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಹಾಗೂ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಂಸಿ) ಮೊದಲ ಮೂರು ಸ್ಥಾನ ಪಡೆದಿವೆ.


Click it and Unblock the Notifications











