ರೈಲ್ವೇ ನೇಮಕಾತಿ ಬೋರ್ಡ್ ಇದೀಗ ಆರ್‌ಆರ್‌ಬಿ ಗ್ರೂಪ್ ಡಿ ಅಡ್ಮಿಟ್ ಕಾರ್ಡ್ 2018 ಡೌನ್‌ಲೋಡ್ ಆಕ್ಟಿವೇಟ್ ಮಾಡುವ ಮೂಲಕ ನೇಮಕಾತಿ ಪ್ರಕ್ರಿಯೆಯ ಮೊದಲ ಹೆಜ್ಜೆ ಇಟ್ಟಿದೆ. ಸೆಪ್ಟಂಬರ್ 17, 2018 ರಿಂದ ಆರ್ಆರ್ ಬಿ ಗ್ರೂಪ್ ಡಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ದಿ ರೈಲ್ವೇ ನೇಮಕಾತಿ ಬೋರ್ಡ್ ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಯ ಪ್ರವೇಶ ಪತ್ರ 2018 ಇತ್ತೀಚೆಗಷ್ಟೇ ಪ್ರಕಟಿಸಿತ್ತು. ಆದ್ರೆ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಟೈಂನಲ್ಲಿ ಲಾಗಿನ್ ಆಗಿದ್ದರಿಂದ ಹೆಚ್ಚಿದ ಟ್ರಾಫಿಕ್‌ನಿಂದಾಗಿ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು ಹಾಗಾಗಿ ನಿನ್ನೆ ಡೌನ್‌ಲೋಡ್ ಕಾರ್ಯವು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಡೌನ್‌ಲೋಡ್ ಕಾರ್ಯವು ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆ.17 ರಿಂದ ಈ ಪರೀಕ್ಷೆ ಪ್ರಾರಂಭವಾಗಿ ಡಿಸಂಬರ್ 14 ರವರೆಗೆ ಸುಮಾರು ಒಟ್ಟು 49 ದಿನಗಳ ಕಾಲ ಈ ಪರೀಕ್ಷೆ ನಡೆಯಲಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ. ಹಾಗಾಗಿ ನಿನ್ನೆ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಕ್ರ್ಯಾಶ್ ಆಗಿದ್ದು, ವೆಬ್‌ಸೈಟ್ ಕಾರ್ಯ ಸ್ಥಗಿತಗೊಂಡಿತ್ತು.
ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು
- ಸ್ಟೆಪ್ 1: ಆರ್‌ಆರ್‌ಬಿ ಆಫೀಶಿಯಲ್ ವೆಬ್ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಲಾಗಿನ್ ಫಾರ್ಮ್ ಮೂಡುತ್ತದೆ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 3: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
- ಸ್ಟೆಪ್ 4: ಲಾಗಿನ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 5: ಸ್ಕ್ರೀನ್ ಮೇಲೆ ಪ್ರವೇಶ ಪತ್ರ ಮೂಡುತ್ತದೆ , ಡೀಟೆಲ್ಸ್ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ
- ಸ್ಟೆಪ್ 6: ಪ್ರವೇಶ ಪತ್ರವನ್ನ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಎಲ್ಲೆಲ್ಲಿಯ ಪರೀಕ್ಷೆ ಪ್ರವೇಶ ಪತ್ರ ಲಭ್ಯ
- ಆರ್‌ಆರ್ ಬಿ ಅಹಮದಾಬಾದ್
- ಆರ್‌ಆರ್ ಬಿ ಅಜ್ಮೇರ್
- ಆರ್‌ಆರ್ ಬಿ ಅಲಹಾಬಾದ್
- ಆರ್‌ಆರ್ ಬಿ ಬೆಂಗಳೂರು
- ಆರ್‌ಆರ್ ಬಿ ಭೂಪಾಲ್
- ಆರ್‌ಆರ್ ಬಿ ಭುಬನೇಶ್ವರ್
- ಆರ್‌ಆರ್ ಬಿ ಬಿಲಾಸ್ಪುರ್
- ಆರ್‌ಆರ್ ಬಿ ಚಂಡೀಘರ್
- ಆರ್‌ಆರ್ ಬಿ ಚೆನ್ನೈ
- ಆರ್‌ಆರ್ ಬಿ ಗೋರಖ್ ಪುರ್
- ಆರ್‌ಆರ್ ಬಿ ಜಮ್ಮು
- ಆರ್‌ಆರ್ ಬಿ ಕೊಲ್ಕತ್ತಾ
- ಆರ್‌ಆರ್ ಬಿ ಮಾಲ್ಡಾ
- ಆರ್‌ಆರ್ ಬಿ ಮುಂಬಯಿ
- ಆರ್‌ಆರ್ ಬಿ ಮುಜಾಫರ್ಪುರ್
- ಆರ್‌ಆರ್ ಬಿ ಪಾಟ್ನಾ
- ಆರ್‌ಆರ್ ಬಿ ರಾಂಚಿ
- ಆರ್‌ಆರ್ ಬಿ ಸಿಕಂದರಾಬಾದ್
- ಆರ್‌ಆರ್ ಬಿ ಸಿಲಿಗುರಿ
- ಆರ್‌ಆರ್ ಬಿ ತಿರುವನಂತಪುರಂ
ಆರ್‌ಆರ್‌ಬಿ ಗ್ರೂಪ್ ಡಿ ಮತ್ತು ಎಎಲ್ ಪಿ ಎಕ್ಸಾಮ್ 2018 ಡೀಟೆಲ್ಸ್
ಅರ್ಜಿಗಳ ಸಂಖ್ಯೆ : 1.9 ಕೋಟಿ
ರಿಜಿಸ್ಟ್ರೇಶನ್ ಮಾಡಿದ ಅಭ್ಯರ್ಥಿಗಳ ಸಂಖ್ಯೆ : 2.4 ಕೋಟಿ
ಹುದ್ದೆ ಸಂಖ್ಯೆ : 63000


Click it and Unblock the Notifications











