ಪಾರ್ಟ್ ಟೈಂ ಪಿಎಚ್.ಡಿ : ಬಗೆಹರಿದ ಗೊಂದಲ

ಪಿಎಚ್.ಡಿ ಪದವಿಯು ಪಾರ್ಟ್ ಟೈಂ ಆಗಲಿ ಫುಲ್ ಟೈಂ ಆಗಲಿ ಅದನ್ನು ರೆಗ್ಯುಲರ್ ಮೋಡ್ ಎಂದೇ ಪರಿಗಣಿಸಬೇಕು ಎಂಬುದನ್ನು ಯುಜಿಸಿ ಸ್ಪಷ್ಟಪಡಿಸಿದೆ.

ಇನ್ನು ಮುಂದೆ ಪಾರ್ಟ್ ಟೈಂ ಪಿಎಚ್.ಡಿ ಗೂ ಫುಲ್ ಮಾರ್ಕ್ಸ್ ಸಿಗಲಿದೆ. ಅನೇಕ ದಿನಗಳಿಂದ ಪಿಎಚ್.ಡಿ ವಿದ್ಯಾರ್ಥಿಗಳಲ್ಲಿ ಮತ್ತು ಪದವೀಧರರಿಗೆ ಇದ್ದ ಗೊಂದಲಕ್ಕೆ ಯುಜಿಸಿ ತೆರೆ ಎಳೆದಿದೆ.

ಪಿಎಚ್.ಡಿ ಪದವಿಯು ಪಾರ್ಟ್ ಟೈಂ ಆಗಲಿ ಫುಲ್ ಟೈಂ ಆಗಲಿ ಅದನ್ನು ರೆಗ್ಯುಲರ್ ಮೋಡ್ ಎಂದೇ ಪರಿಗಣಿಸಬೇಕು ಎಂಬುದನ್ನು ಯುಜಿಸಿ ಸ್ಪಷ್ಟಪಡಿಸಿದೆ.

ದೂರ ಶಿಕ್ಷಣ ಹೊರತುಪಡಿಸಿ ರೆಗ್ಯುಲರ್ ಮೋಡ್ ಮೂಲಕ ಪಿಎಚ್.ಡಿ ಪೂರ್ಣಗೊಳಿಸುವ ಎಲ್ಲಾ ಪಿಎಚ್.ಡಿ ಪದವೀದರರಿಗೆ ಸಮಾನ ಮಾನ್ಯತೆ ನೀಡುವುದಾಗಿ ಯುಜಿಸಿ ಹೇಳಿದೆ. ಇದರಿಂದಾಗಿ ಇಷ್ಟು ದಿನ ಪಾರ್ಟ್ ಟೈಂ ಪಿಎಚ್.ಡಿ ಮಾಡಿದವರ ಮೊಗದಲ್ಲಿ ನಗು ಮೂಡಿದೆ. ಅಲ್ಲದೇ ಫುಲ್ ಟೈಂ ಹಾಗೂ ಪಾರ್ಟ್ ಟೈಂ ಎಂಬ ಆತಂಕವನ್ನು ದೂರ ಮಾಡಿದೆ.

ಬಗೆಹರಿದ ಗೊಂದಲ

ಗೊಂದಲಕ್ಕೆ ಕಾರಣ

ಬೋಧಕ ಸಿಬ್ಬಂದಿ ಹುದ್ದೆಗೆ ನೇಮಕ ಮಾಡುವಾಗ ರೆಗ್ಯುಲರ್ ಮೋಡ್ ನಲ್ಲಿ ಪಿಎಚ್.ಡಿ ಪದವಿ ಪಡೆದವರನ್ನು ಮಾತ್ರ ಪರಿಗಣಿಸುವಂತೆ ಯುಜಿಸಿ ಕಳೆದ ವರ್ಷ ಜುಲೈನಲ್ಲಿ ಎಲ್ಲಾ ವಿವಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಸುತ್ತೋಲೆ ಕಳುಹಿಸಿತ್ತು ಆದರೆ ಆ ಸುತ್ತೋಲೆಯಲ್ಲಿ ಪಾರ್ಟ್ ಟೈಂ ಅಥವಾ ಫುಲ್ ಟೈಂ ಆಗಿ ಪಿಎಚ್.ಡಿ ಮಾಡಿದವರ ಕುರಿತು ಯಾವುದೇ ವಿವರಗಳು ಇರಲಿಲ್ಲ. ಇದರಿಂದಾಗಿ ಪಾರ್ಟ್ ಟೈಂ ಪಿಎಚ್.ಡಿ ಮಾಡಿದ ವಿದ್ಯಾರ್ಥಿಗಳಿಗೆ ಮನ್ನಣೆ ಇಲ್ಲ ಎಂದೇ ಅನೇಕರು ಭಾವಿಸಿದ್ದರು.

ಪೂರ್ಣಕಾಲಿಕ (ರೆಗ್ಯುಲರ್ ಮೋಡ್)
ರೆಗ್ಯುಲರ್ ಮೋಡ್ ಎಂದರೆ ನಿತ್ಯ ತರಗತಿಗೆ ತೆರಳಿ ಹಾಜರಾತಿ ಪಡೆದು ಸಂಶೋಧನೆಗಾಗಿಯೇ ಪೂರ್ಣ ಸಮಯವನ್ನು ಮೀಸಲಿಟ್ಟು ಪಡೆಯುವ ಪದವಿ.

ಅರೆಕಾಲಿಕ (ಪಾರ್ಟ್ ಟೈಂ)
ಪಾರ್ಟ್ ಟೈಂ ಎಂದರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಮಾಡಿಕೊಂಡು ವಾರದಲ್ಲಿ ಒಂದೆರೆಡು ತರಗತಿಗಳಿಗೆ ಹಾಜರಾಗಿ ಸಂಶೋಧನೆ ಮಾಡುವುದು.

ಪಾರ್ಟ್ ಟೈಂ ಹಾಗೂ ಫುಲ್ ಟೈಂ ಮೂಲಕ ಪಡೆದ ಯಾವುದೇ ಪಿಎಚ್.ಡಿ ಪದವಿ ರೆಗ್ಯುಲರ್ ಮೋಡ್ ಎನಿಸಿಕೊಳ್ಳುತ್ತದೆ. ಎರಡೂ ಪಿಎಚ್.ಡಿ ಗಳನ್ನು ಪ್ರಸ್ತುತ ಶಾಸನಬದ್ಧ ನಿಯಮ ಅನುಸರಿಸಿ ನೀಡಲಾಗುವ ಪದವಿಗಳೆಂದೇ ಪರಿಗಣಿಸಲಾಗುತ್ತದೆ.

ದೂರ ಶಿಕ್ಷಣಕ್ಕೆ ಅನ್ವಯಿಸುವುದಿಲ್ಲ

ರೆಗ್ಯುಲರ್ ಮೋಡ್ ಪದಕ್ಕೆ ಸ್ಪಷ್ಟನೆ ನೀಡಿರುವ ಯುಜಿಸಿ ತನ್ನ ಸುತ್ತೋಲೆಯಲ್ಲಿ ದೂರ ಶಿಕ್ಷಣದ ಪಿಎಚ್.ಡಿ ಬಗ್ಗೆಯು ತಿಳಿಸಿದೆ. ದೂರ ಶಿಕ್ಷಣದ ಮೂಲಕ ಪಡೆಯುವ ಪಿಎಚ್.ಡಿ ಮಾತ್ರ ರೆಗ್ಯುಲರ್ ಮೋಡ್ ಎನಿಸಿಕೊಳ್ಳುವುದಿಲ್ಲ ಎಂಬುದನ್ನು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಕೋರ್ಸ್ ವರ್ಕ್ ಕಡ್ಡಾಯ

ಪಾರ್ಟ್ ಟೈಂ ಅಥವಾ ಫುಲ್ ಟೈಂ ಯಾವುದರ ಮೂಲಕ ಪಿಎಚ್.ಡಿ ಕೋರ್ಸ್ ಆಯ್ಕೆ ಮಾಡಿಕೊಂಡರು ಇಬ್ಬರೂ ಯುಜಿಸಿ ನಿಯಮದಂತೆ ಕೋರ್ಸ್ ವರ್ಕ್ ಮಾಡಬೇಕು ಅದು ಅಸ್ತಿತ್ವದಲ್ಲಿರುವ ನಿಯಮ. ಹೀಗಾಗಿ ಈ ಎರಡೂ ಕೂಡ ರೆಗ್ಯೂಲರ್ ಮೋಡ್ ಎನಿಸಿಕೊಳ್ಳುತ್ತಿವೆ.

ಹೆಚ್ಚಿನ ಮಾಹಿತಿಗಾಗಿ ಯುಜಿಸಿ ವೆಬ್ಸೈಟ್ ವಿಳಾಸ www.ugc.ac.in ಗಮನಿಸಿ

ಇದನ್ನು ಗಮನಿಸಿ: ಯುಜಿಸಿ ಎಚ್ಚರಿಕೆ: ದೇಶದಲ್ಲಿವೆ 23 ನಕಲಿ ಶಿಕ್ಷಣ ಸಂಸ್ಥೆಗಳು

More News  

For Quick Alerts
ALLOW NOTIFICATIONS  
For Daily Alerts

English summary
Ph.D. degrees which are pursued either full time or paft time will betreated as degrees awarded through Regular Mode provided these arein conformity with the existing Statutes/Byelaws/Ordinances etc. of thedegree awarding University
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+