ಯುಜಿಸಿ ನೆಟ್ 2018: ಅರ್ಜಿ ತಿದ್ದುಪಡಿ ಇದ್ದರೆ ಇಂದೇ ಮಾಡಿ ಅ.14 ಕೊನೆಯ ದಿನಾಂಕ

ಯುಜಿಸಿ ನೆಟ್ 2018 ಅರ್ಜಿಯ ತಿದ್ದುಪಡಿ ಮಾಡಬಹುದಾಗಿದ್ದು, ಇದೀಗ ತಿದ್ದುಪಡಿ ಲೈನ್ ತೆರೆದಿದ್ದು, ಈ ಬಾರಿ ಯಾರೆಲ್ಲಾ ಯುಜಿಸಿ ಪರೀಕ್ಷೆ ಬರೆಯಲಿದ್ದೀರೋ ಅವರೆಲ್ಲಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ

By Nishmitha Bekal

ಯುಜಿಸಿ ನೆಟ್ 2018 ಅರ್ಜಿಯ ತಿದ್ದುಪಡಿ ಮಾಡಬಹುದಾಗಿದ್ದು, ಇದೀಗ ತಿದ್ದುಪಡಿ ಲೈನ್ ತೆರೆದಿದ್ದು, ಈ ಬಾರಿ ಯಾರೆಲ್ಲಾ ಯುಜಿಸಿ ಪರೀಕ್ಷೆ ಬರೆಯಲಿದ್ದೀರೋ ಅವರೆಲ್ಲಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 14 , 2018 ರವರೆಗೆ ತಿದ್ದುಪಡಿಗೆ ಅವಕಾಶವಿದೆ.

ಯುಜಿಸಿ ನೆಟ್ 2018: ಅರ್ಜಿ ತಿದ್ದುಪಡಿ ಇದ್ದರೆ ಇಂದೇ ಮಾಡಿ ಅ.14 ಕೊನೆಯ ದಿನಾಂಕ

ಯುಜಿಸಿ ನೆಟ್ ಪರೀಕ್ಷೆಗೆ ರಿಜಿಸ್ಟ್ರರ್ ಮಾಡಿಕೊಂಡಿರುವ ಅಭ್ಯರ್ಥಿಗಳು, ತಮ್ಮ ಅರ್ಜಿಯಲ್ಲಿ ಏನಾದ್ರೂ ತಿದ್ದುಪಡಿ ಮಾಡಲಿದ್ದಲ್ಲಿ, ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಹಾಗೂ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ. ಆಗ ಈಗಾಗಲೇ ನೀವು ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿ ತೆರೆದುಕೊಳ್ಳುತ್ತದೆ. ಬೇಕಾದ ತಿದ್ದುಪಡಿ ಮಾಡಿಕೊಂಡು ಬಳಿಕ ಸಬ್‌ಮಿಟ್ ಮಾಡಿ.

Most Read: ಪರೀಕ್ಷೆ ಟೈಂನಲ್ಲಿ ಇಂತಹ ವಿದ್ಯಾರ್ಥಿಗಳನ್ನ ನೀವು ಭೇಟಿ ಮಾಡಿಯೇ ಇರುತ್ತೀರಾ ನಿಮಗೂ ಇಂತಹ ಸ್ನೇಹಿತರಿದ್ರಾ?

ಯುಜಿಸಿ ನೆಟ್ ಪರೀಕ್ಷೆಯು ಡಿಸಂಬರ್ 9 ರಿಂದ 23, 2018 ರವರೆಗೆ ನಡೆಯಲಿದೆ. 91 ನಗರಗಳಲ್ಲಿ 84 ಸಬ್‌ಜೆಕ್ಟ್ ಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಗಾಗಿ ನಡೆಸುವ ಪರೀಕ್ಷೆ ಇದಾಗಿದೆ. ಅಕ್ಟೋಬರ್ 1 ರವರೆಗೆ ಅಭ್ಯರ್ಥಿಗಳು ರಿಜಿಸ್ಟ್ರೇಶನ್ ಶುಲ್ಕ ಪಾವತಿಸಬಹುದಾಗಿದೆ. ನವಂಬರ್ 19 ರಂದು ಯುಜಿಸಿ ನೆಟ್ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾಗಿದ್ದು, ಜನವರಿ 10, 2019 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಜಿಸಿ ನೆಟ್ 2018: ನೂತನ ಪರೀಕ್ಷೆ ನಮೂನೆ:

ಈ ವರ್ಷದಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯುಜಿಸಿ ನೆಟ್ ಪರೀಕ್ಷೆಯ ಹೊಣೆ ಹೊತ್ತು ಕೊಂಡಿದೆ. ಇದುವರೆಗೆ ಪರೀಕ್ಷೆಗೆ ಮೂರು ಪೇಪರ್ ಗಳಿದ್ದು, ಈ ವರ್ಷದಿಂದ ಬರಿ ಎರಡು ಪೇಪರ್ ಗಳನ್ನ ಮಾತ್ರ ನೀಡಲಾಗುವುದು. ಅವುಗಳು ಯಾವುವು ಎಂದ್ರೆ ಪೇಪರ್ 1 ಹಾಗೂ ಪೇಪರ್ 2.

Most Read: ಈ 6 ಟಿಪ್ಸ್ ನಿಂದ ಯುಪಿಎಸ್ ಸಿ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲೇ ಪಾಸು ಮಾಡಬಹುದು

ಪೇಪರ್ 1 ರಲ್ಲಿ 100 ಅಂಕದ ಪೇಪರ್ ಇದಾಗಿದ್ದು, 50 ಆಬ್ ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳನ್ನ ನೀಡಲಾಗುವುದು. ಅಭ್ಯರ್ಥಿಗಳ ಟೀಚಿಂಗ್ ಮತ್ತು ರಿಸರ್ಚ್ ಸಾಮರ್ಥ್ಯ ಕಂಡು ಹಿಡಿಯಲು ಈ ಟೆಸ್ಟ್ ಮಾಡಲಾಗುತ್ತದೆ. ಈ ಪರೀಕ್ಷೆಯ ಅವಧಿ 1 ಗಂಟೆಯಾಗಿದ್ದು, ಬೆಳಗ್ಗೆ 9.30 ಯಿಂದ 10.30 ವರೆಗೆ ನಡೆಯಲಿದೆ. ಇನ್ನು ಪೇಪರ್ ಎರಡರಲ್ಲಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಸಬ್‌ಜೆಕ್ಟ್ ಆಧಾರದ ಮೇಲೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೂ 2 ಅಂಕಗಳನ್ನ ನೀಡಲಾಗುವುದು ಹಾಗೂ ಈ ಪರೀಕ್ಷೆಯ ಅವಧಿ 2 ಗಂಟೆಗಳಾಗಿದ್ದು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ವರೆಗೆ ನಡೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA) has released Online window to make necessary changes in the the UGC NET. The Application Form Activated from today. The candidates can make change through the official website. December 2018 exam dates and started the registration process on September 1. The National Eligibility Test (NET), which is conducted for determining the eligibility for Assistant Professor and Junior Research Fellowship (JRF) posts
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X