ಪರೀಕ್ಷೆ ಟೈಂನಲ್ಲಿ ಇಂತಹ ವಿದ್ಯಾರ್ಥಿಗಳನ್ನ ನೀವು ಭೇಟಿ ಮಾಡಿಯೇ ಇರುತ್ತೀರಾ ನಿಮಗೂ ಇಂತಹ ಸ್ನೇಹಿತರಿದ್ರಾ?

ಪ್ರತೀ ತರಗತಿಯಲ್ಲೂ ಎಲ್ಲಾ ರೀತಿಯ ವಿದ್ಯಾರ್ಥಿಗಳು ಇರುತ್ತಾರೆ, ಆದ್ರೆ ಪರೀಕ್ಷೆ ಟೈಂನಲ್ಲಿ ನೀವು ಹೆಚ್ಚಾಗಿ ಈ ಟೈಪ್ ನ ವಿದ್ಯಾರ್ಥಿಗಳನ್ನ ನೋಡಿರುತ್ತೀರಾ ಅಲ್ವಾ

By Nishmitha Bekal

ಕಾಲೇಜು ಅಂದ್ರೆ ಅದೊಂದು ಬಣ್ಣ ಬಣ್ಣದ ಕಲರ್ಫುಲ್ ಜೀವನ. ಇಲ್ಲಿ ನಿಮಗೆ ಎಲ್ಲಾ ರೀತಿಯ ವಿಧದ ಸ್ನೇಹಿತರು ಸಿಗುತ್ತಾರೆ. ಇನ್ನು ತಿಂಗಳು ಪೂರ್ತಿ ಮೋಜು ಮಸ್ತಿ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಬಂತೆಂದ್ರೆ ಸಾಕು ಫುಲ್ ಸೀರಿಯಸ್ ಆಗಿ ಬಿಡುತ್ತಾರೆ. ಪ್ರತಿಯೊಂದು ಕಾಲೇಜಿನಲ್ಲೂ ಇಂತಹ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಬನ್ನಿ ಪರೀಕ್ಷೆ ವೇಳೆ ಯಾವೆಲ್ಲಾ ಕಾಮನ್ ಟೈಪ್ ನ ವಿದ್ಯಾರ್ಥಿಗಳು ಇರುತ್ತಾರೆ ಎಂದು ನಿಮಗೆ ತಿಳಿಸಿಕೊಡಲಾಗುವುದು ಮುಂದಕ್ಕೆ ಓದಿ.

ಪರೀಕ್ಷೆ ಟೈಂನಲ್ಲಿ ಇಂತಹ ವಿದ್ಯಾರ್ಥಿಗಳನ್ನ ನೀವು ಭೇಟಿ ಮಾಡಿಯೇ ಇರುತ್ತೀರಾ ನಿಮಗೂ ಇಂತಹ ಸ್ನೇಹಿತರಿದ್ರಾ?

1. ಕುಂಕುಮ ಹಚ್ಚದೇ ಮನೆಯಿಂದ ಹೊರಗೆ ಕಾಲಿಡುವುದಿಲ್ಲ

1. ಕುಂಕುಮ ಹಚ್ಚದೇ ಮನೆಯಿಂದ ಹೊರಗೆ ಕಾಲಿಡುವುದಿಲ್ಲ

ಪರೀಕ್ಷೆಗೆ ಓದಿರಲಿ, ಇಲ್ಲ ಓದದೇ ಇರಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ವೇಳೆ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚದೇ ಮನೆಯಿಂದ ಹೊರಗೆ ಕಾಲಿಡುವುದಿಲ್ಲ.ಉಳಿದ ದಿನ ದೇವರ ನೆನಪಿರದೇ ಇದ್ದರೂ ಪರೀಕ್ಷೆ ದಿನ ಮಾತ್ರ ತಪ್ಪದೆ ದೇವಸ್ಥಾನಕ್ಕೆ ವಿಸಿಟ್ ಮಾಡುತ್ತಾರೆ ಹಾಗೂ ಕುಂಕುಮ ಹಚ್ಚಿಕೊಂಡೇ ಪರೀಕ್ಷೆಗೆ ತೆರಳುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಮೊಸರಿನಿಂದ ಹಣೆ ಮೇಲೆ ಬಿಂದಿ ಹಚ್ಚಿ ಮನೆಯಿಂದ ಹೊರಗೆ ಕಾಲಿಡುತ್ತಾರೆ. ಪರೀಕ್ಷೆ ವೇಳೆ ಮೊಸರಿನ ಬಿಂದಿ ಹಚ್ಚಿ ಮನೆಯಿಂದ ಹೊರಗೆ ಕಾಲಿಟ್ಟರೆ ಅದೃಷ್ಟ ಖುಲಾಯಿಸುತ್ತದೆ ಎಂದರ್ಥ

2. ಕೊನೆಯ ಗಳಿಗೆಯಲ್ಲಿ ಸ್ಟಡಿ

2. ಕೊನೆಯ ಗಳಿಗೆಯಲ್ಲಿ ಸ್ಟಡಿ

ನಿಮಗೆ ಈ ಸ್ನೇಹಿತರೂ ಕೂಡಾ ಇರಬಹುದು. ತಿಂಗಳು ಪೂರ್ತಿ ಮೋಜು, ಮಸ್ತಿ ಎಂದು ತಿರುಗಾಡುತ್ತಾ ಇದ್ದು, ಪರೀಕ್ಷೆಗೆ ಇನ್ನೇನೋ ಕೆಲವೇ ದಿನ/ಗಂಟೆಗಳು ಬಾಕಿ ಇರುವಾಗ ಸ್ನೇಹಿತರ ನೋಟ್ ಬುಕ್ ಫುಲ್ ಜೆರಾಕ್ಸ್ ಮಾಡಿಕೊಂಡು ಓದುವ ಸ್ನೇಹಿತರು ಕೂಡಾ ನಿಮ್ಮ ಗ್ರೂಪ್‌ನಲ್ಲಿ ಇರುತ್ತಾರೆ.

3. ವಾರ್ನಿಂಗ್ ಬೆಲ್ ಆದ್ರೂ ಪುಸ್ತಕಕ್ಕೆ ಅಂಟಿರುವ ವಿದ್ಯಾರ್ಥಿಗಳು

3. ವಾರ್ನಿಂಗ್ ಬೆಲ್ ಆದ್ರೂ ಪುಸ್ತಕಕ್ಕೆ ಅಂಟಿರುವ ವಿದ್ಯಾರ್ಥಿಗಳು

ಇನ್ನು ಕೆಲವು ವಿದ್ಯಾರ್ಥಿಗಳು ಇರುತ್ತಾರೆ ಮನೆಯಲ್ಲಿ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಓದಿಕೊಂಡು ಇರುತ್ತಾರೆ. ಮನೆಯಲ್ಲೇ ಪೂರ್ತಿಯಾಗಿ ಓದಿ ಮುಗಿಸಿರುತ್ತಾರೆ. ಆದ್ರೆ ಪರೀಕ್ಷೆ ಬಂದಾಗ ವಾನಿಂಗ್ ಬೆಲ್ ಆದಾಗ ಕೂಡಾ ಇವರು ಮಾತ್ರ ಬುಕ್ ಬಿಟ್ಟು ಬರಲು ಸಿದ್ಧರಿರುವುದಿಲ್ಲ, ಎಷ್ಟೇ ಬಾರಿ ವಾರ್ನ್ ಮಾಡಿದ್ರೂ ಇವರು ಮತ್ತೆ ಮತ್ತೆ ಓದುತ್ತಾ ಹಾಳೆಗಳನ್ನ ತಿರುವುತ್ತಾ ಇರುತ್ತಾರೆ. ಕೊನೆಗೆ ಶಿಕ್ಷಕರು ಬಂದು ಗದರಿದಾಗ ಮಾತ್ರ ಪುಸ್ತಕ ಅಲ್ಲೇ ಬಿಟ್ಟು ಎಕ್ಸಾಂ ಹಾಲ್ ಗೆ ಕಾಲಿಡುತ್ತಾರೆ

4. ಪೆನ್ ಕೇಳುವ ಸ್ನೇಹಿತರು

4. ಪೆನ್ ಕೇಳುವ ಸ್ನೇಹಿತರು

ಎಷ್ಟೇ ತಯಾರಾಗಿ ಬಂದ್ರೂ ಪರೀಕ್ಷೆ ಹಾಲ್‌ನಲ್ಲಿ ಇತರರ ಜತೆ ಪೆನ್ ಕೇಳುವ ಸ್ನೇಹಿತರು ಇದ್ದೇ ಇರುತ್ತಾರೆ. ಪರೀಕ್ಷೆ ಪ್ರಾರಂಭದಲ್ಲಿ ಕೆಲವರು ಪೆನ್ ಕೇಳಿದ್ರೆ ಇನ್ನು ಕೆಲವರು ಎಷ್ಟು ಬರೆಯುತ್ತಾರೆ ಎಂದ್ರೆ ಪೆನ್ ಇಂಕೆಲ್ಲಾ ಖಾಲಿ ಯಾಗಿ ಮತ್ತೆ ಸ್ನೇಹಿತರ ಬಳಿ ಪೆನ್ ಕೇಳಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇರುತ್ತಾರೆ.

5. ಪೆನ್‌ನಿಂದ ಕುಟ್ಟೋ ಸ್ನೇಹಿತರು

5. ಪೆನ್‌ನಿಂದ ಕುಟ್ಟೋ ಸ್ನೇಹಿತರು

ಇನ್ನು ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಯಾವುದೇ ತಯಾರಿ ಮಾಡಿಕೊಳ್ಳದೇ ಬಂದಿರುತ್ತಾರೆ. ಇವರು ಪರೀಕ್ಷೆ ವೇಳೆ ತಮ್ಮ ಮುಂಭಾಗ ಕುಳಿತಿರುವವರಿಂದ ಸಹಾಯ ಬಯಸುತ್ತಾರೆ. ಅದಕ್ಕಾಗಿ ಅವರಿಗೆ ಪೆನ್ ನಿಂದ ಕುಟ್ಟುತ್ತಾ ಸಹಾಯ ಕೇಳುತ್ತಿರುತ್ತಾರೆ.

6. ಎಷ್ಟೇ ಪೇಪರ್ ತೆಗೊಂಡ್ರು ಸಾಲಲ್ಲ

6. ಎಷ್ಟೇ ಪೇಪರ್ ತೆಗೊಂಡ್ರು ಸಾಲಲ್ಲ

ನಾವು ಇಂತಹ ವಿದ್ಯಾರ್ಥಿಗಳನ್ನ ಕೂಡಾ ಪರೀಕ್ಷೆ ಹಾಲ್‌ನಲ್ಲಿ ನೋಡಿರುತ್ತಿರಿ. ಅವರು ಎಷ್ಟು ಬರೆಯುತ್ತಾರೆಂದ್ರೆ ಹಾಳೆ ಮೇಲೆ ಹಾಳೆ ಪಡೆಯುತ್ತಾ ಬರೆಯುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ ಪರೀಕ್ಷೆ ಅವಧಿ ಮುಗಿಯುವ ವೇಳೆ ಲಾಸ್ಟ್ ವಾರ್ನ್ ಬೆಲ್ ಆದ ಮೇಲೂ ಕೂಡಾ ಇವರು ಪೇಪರ್ ಪಡೆದು ಪರೀಕ್ಷೆ ಬರೆಯುತ್ತಾರೆ.

  7. ನಕಲು

7. ನಕಲು

ಜೊಮೆಟ್ರಿ ಬಾಕ್ಸ್ ಒಳಗೆ ಇಲ್ಲ ಪೆನ್ ಬಾಕ್ಸ್ ಒಳಗೆ ಒಂದು ಮೈಕ್ರೋ ನೋಟ್ಸ್ ತಯಾರು ಮಾಡಿಕೊಂಡು ಬಂದಿರುತ್ತಾರೆ. ಪರೀಕ್ಷೆ ವೇಳೆ ಈ ನೋಟ್ಸ್ ನ ಸಹಾಯದಿಂದ ಈ ವಿದ್ಯಾರ್ಥಿಗಳು ಉತ್ತರ ಬರೆಯುತ್ತಾರೆ. ಅಷ್ಟೇ ಅಲ್ಲದೇ ಈ ನೋಟ್ಸನ್ನ ಇತರ ಸ್ನೇಹಿತರಿಗೂ ಪಾಸ್ ಕೂಡಾ ಮಾಡುತ್ತಾರೆ.

 

<strong>Most Read: ಸಂದರ್ಶನಕಾರರನ್ನ ಇಂಪ್ರೇಸ್ ಮಾಡಲು ರೆಸ್ಯೂಮನ್ನ 200 ಪದಗಳಲ್ಲಿ ಹೇಗೆ ಬರೆಯಬೇಕು</strong>Most Read: ಸಂದರ್ಶನಕಾರರನ್ನ ಇಂಪ್ರೇಸ್ ಮಾಡಲು ರೆಸ್ಯೂಮನ್ನ 200 ಪದಗಳಲ್ಲಿ ಹೇಗೆ ಬರೆಯಬೇಕು

For Quick Alerts
ALLOW NOTIFICATIONS  
For Daily Alerts

English summary
In every class, there are many variety of types of students you can see. Sometime your friends in your life are overly annoying, especially when it comes to exam season. Its almost exam time, you can see all type of Students in exam hall.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X