ಗೃಹಿಣಿಯರು ಮನೆಯಲ್ಲಿ ಕುಳಿತು ಈ ಎಲ್ಲಾ ಕೆಲಸ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು

ಗೃಹಿಣಿಯರು ಮನೆಯ ಕೆಲಸದ ಜತೆಗೆ ಈ ಎಲ್ಲಾ ಬ್ಯುಸಿನೆಸ್ ಕೂಡಾ ಮನೆಯಲ್ಲೇ ಕುಳಿತು ಮಾಡಬಹುದು ಅಷ್ಟೇ ಅಲ್ಲ ಕೈ ತುಂಬಾ ಸಂಪಾದನೆ ಕೂಡಾ ಮಾಡಬಹುದು.

By Kavya

ಮನೆಯಲ್ಲಿ ಕುಳಿತು ಸಂಪಾದನೆ ಮಾಡುವುದು ಇತ್ತೀಚೆಗಿನ ದಿನಗಳಲ್ಲಿ ತುಂಬಾ ಕಾಮನ್ ಆಗಿದೆ. ವಿವಾಹದ ಬಳಿಕ ಗೃಹಿಣಿಯರು ಹೆಚ್ಚಾಗಿ ಈ ಆಯ್ಕೆಯನ್ನ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಇತ್ತ ಮನೆಯ ಜವಬ್ದಾರಿ ಕೂಡಾ ನೋಡಿಕೊಳ್ಳಬಹುದು ಹಾಗೆಯೇ ಮತ್ತೊಂದೆಡೆ ತನ್ನ ಕಾಲ ಮೇಲೆ ತಾನೇ ನಿಂತು ಕೊಳ್ಳಬಹುದು.

ಗೃಹಿಣಿಯರು ಮನೆಯಲ್ಲಿ ಕುಳಿತು ಈ ಎಲ್ಲಾ ಕೆಲಸ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು

ಒಮ್ಮೆ ಮದುವೆ ಆದ ಬಳಿಕ ಮತ್ತೆ ನಮ್ಮ ಹೊರಗಡೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹಿಂದೆಲ್ಲಾ ಹೇಳುತ್ತಿದ್ದರು. ಆದ್ರೆ ಆ ಮಾತು ಶುದ್ಧ ಸುಳ್ಳು. ಆ ಕಾಲ ಇದೀಗ ಇಲ್ಲ. ಮಲ್ಟಿ ಟಾಸ್ಕ್ ಮಾಡುವ ಟ್ಯಾಲೆಂಟ್ ಮಹಿಳೆಯರಲ್ಲಿ ಇದ್ದರೆ ಅವರು ಕೂಲ್ ಆಗಿ ಮದುವೆ ಆದ ಬಳಿಕವೂ ಕೆಲಸ ಮಾಡಬಹುದು.ಇದೆಲ್ಲಾ ಸಾಧ್ಯವಾದುದು ಟೆಕ್ನಾಜಿಯಿಂದಾಗಿ. ಹಾಗಾಗಿ ಮೊದಲಿಗೆ ಮಹಿಳೆಯರು ಟೆಕ್ನಾಲಾಜಿಗೆ ಥ್ಯಾಂಕ್ಸ್ ಹೇಳಲೇ ಬೇಕು. ಇದೀಗ ಮಹಿಳೆಯರು ಟೆಕ್ನಾಲಾಜಿಯಿಂದಾಗಿ ಮನೆಯ ಕೆಲಸದ ಜತೆ ಜತೆಗೆ ಸಂಪಾದನೆ ಕೂಡಾ ಮಾಡಬಹುದು.

<strong>More Read: ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?</strong>More Read: ಬಿಎ ಪದವಿ ಕಂಪ್ಲೀಟ್ ಹಾಗಿದ್ರೆ ಮುಂದೆ ಕೆರಿಯರ್?

ಫುಡ್ ಆಂಡ್ ಕ್ಯಾಟರಿಂಗ್

ಫುಡ್ ಆಂಡ್ ಕ್ಯಾಟರಿಂಗ್

ಇದೀಗ ನಗರದ ಜನತೆಗೆ ಹೋಟೆಲ್ ಆಹಾರ ಸೇವಿಸಿ ಸಾಕಾಗಿ ಹೋಗಿದೆ. ಹಾಗಾಗಿ ಮನೆಯ ಫುಡ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದರೆ ನೀವು ಡಾಬಾ ಸರ್ವೀಸ್ ಅಥವಾ ಸಣ್ಣ ಕ್ಯಾಟರಿಂಗ್ ಸರ್ವೀಸ್ ಪ್ರಾರಂಭಿಸಬಹುದು. ಇನ್ನು ಈ ವೃತ್ತಿ ಪ್ರಾರಂಭಿಸಲು ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಇದು ಮಹಿಳೆಯರಿಗೆ ಬೆಸ್ಟ್ ಜಾಬ್ ಕೂಡಾ.

ಫ್ರೀಲಾಂಸರ್

ಫ್ರೀಲಾಂಸರ್

ಮನೆಯಿಂದ ದುಡಿಯುವ ಕೆಲಸಗಳಲ್ಲಿ ಫ್ರೀಲಾಂಸರ್ ಜಾಬ್ ಬೆಸ್ಟ್ ಜಾಬ್ ಆಗಿದೆ. ಬರವಣಿಗೆ, ಫೋಟೋಗ್ರಾಫಿ, ಸ್ಕ್ರಿಪ್ಟ್ ರೈಟಿಂಗ್, ಆನಿಮೇಟೆಡ್ ವಿಡಿಯೋ ಪ್ರೊಡಕ್ಷನ್ ಹೀಗೆ ನಿಮಗೆ ಯಾವ ಫೀಲ್ಡ್ ಇಂಟ್ರಸ್ಟ್ ಇದೆಯೋ ಆ ಫೀಲ್ಡ್‌ನಲ್ಲಿ ಫ್ರೀಲಾಂಸರ್ ಆಗಿ ವೃತ್ತಿ ಆರಂಭಿಸಬಹುದು. ಈ ಹುದ್ದೆ ಹೆಚ್ಚು ಲಾಭದಾಯಕ ಹುದ್ದೆ ಕೂಡಾ ಆಗಿದೆ.

ಡಾಟಾ ಎಂಟ್ರಿ ಜಾಬ್ಸ್
 

ಡಾಟಾ ಎಂಟ್ರಿ ಜಾಬ್ಸ್

ನೀವು ಹೆಚ್ಚು ವಿದ್ಯಾರ್ಹತೆ ಹೊಂದಿಲ್ಲ ಎಂದಾದ್ರೆ ಇಲ್ಲ ನಿಮಗೆ ಯಾವುದೇ ಕೆಲಸದ ಅನುಭವ ಇಲ್ಲ ಎಂದಾದ್ರೆ ನಿಮಗೆ ಡಾಟಾ ಎಂಟ್ರಿ ಜಾಬ್ಸ್ ಬೆಸ್ಟ್. ಇದು ಬೆಸ್ಟ್ ಆಪ್ಷನ್ ಕೂಡಾ. ಕೆಲವರು ಡಾಟಾ ಎಂಟ್ರಿ ಜಾಬ್ ಅಂದ್ರೆ ಸ್ವಲ್ಪ ಕೀಳಾಗಿ ನೋಡುತ್ತಾರೆ. ಕೇವಲ ಚಿನ್ನದ ವ್ಯಾಪಾರಿಗೆ ಮಾತ್ರ ಚಿನ್ನದ ನಿಜವಾದ ಬೆಲೆ ತಿಳಿದಿರುತ್ತದೆ ಹಾಗೆಯೇ ಈ ಹುದ್ದೆಯ ಬೆಲೆಯೂ ಕೂಡಾ ಕೇವಲ ಡಾಟಾ ಎಂಟ್ರಿ ಆಫರೇಟರ್ಸ್ ಮಾತ್ರ ತಿಳಿಯಲು ಸಾಧ್ಯ.ಈ ಹುದ್ದೆಯ ಮುಖ್ಯ ಟಾಸ್ಕ್ ಏನೆಂದ್ರೆ ಡಾಟಾ ಟ್ರಾಂಸ್ಕ್ರಿಪ್ಷನ್ ಮತ್ತು ಎನ್‌ಕೋಡಿಂಗ್.

ಕಂಸಲ್ಟೆಂಸಿ ಸರ್ವೀಸ್ ಪ್ರಾರಂಭಿಸಿ

ಕಂಸಲ್ಟೆಂಸಿ ಸರ್ವೀಸ್ ಪ್ರಾರಂಭಿಸಿ

ನೀವು ಐಟಿ ಬ್ಯಾಕ್‌ಗ್ರೌಂಡ್ ಅವರಾಗಿದ್ದರೆ ನಿಮಗೆ ನಿಮ್ಮ ಜಾಬ್ ರೆಸ್ಪಾಂಸಿಬಿಲಿಟೀಸ್ ಬಗ್ಗೆ ತಿಳಿದಿರುತ್ತದೆ. ಪ್ರತಿಯೊಂದು ಸಂಸ್ಥೆಯು ಉದ್ಯಮ ಅಭಿವೃದ್ದಿಗೆ ಯಾವುದಾದ್ರೂ ಮೂಲಗಳನ್ನ ಹುಡುಕುತ್ತಿರುತ್ತದೆ. ಕಂಸಲ್ಟೆಂಸಿ ಟ್ಯಾಲೆಂಟ್ ನಿಮ್ಮಲ್ಲಿ ಇದ್ದರೆ ನೀವು ಇಂತಹ ಕಂಪನಿಗಳ ಜತೆ ಫ್ರೀಲಾಂಸ್ ಆಗಿ ಕೆಲಸ ಮಾಡಬಹುದು.

ಮನೆಯಲ್ಲಿ ಉತ್ಪನ್ನ ತಯಾರಿಸಿ ಮಾರಾಟ

ಮನೆಯಲ್ಲಿ ಉತ್ಪನ್ನ ತಯಾರಿಸಿ ಮಾರಾಟ

ಮನೆಯಲ್ಲಿ ಕುಳಿತು ಸಂಪಾದನೆ ಮಾಡುವ ಕೆಲಸಗಳಲ್ಲಿ ಇದು ಟಾಪ್ ಹಾಗೂ ಪಾಪ್ಯುಲರ್ ಜಾಬ್ ಆಗಿದೆ. ಈ ಕೆಲಸ ಭಾರತ ಹಾಗೂ ವಿದೇಶದಲ್ಲೂ ಕಾಮನ್ ಆಗಿದೆ. ಮನೆಯಲ್ಲೇ ಸೋಪು, ಕ್ಯಾಂಡಲ್, ಪೇಸ್ಟ್ರೀಸ್ ಸೇರಿದಂತೆ ನಿಮಗೆ ಇಂಟ್ರಸ್ಟ್ ಇರುವ ಸಬ್‌ಜೆಕ್ಟ್ ಮೇಲೆ ಉತ್ಪನ್ನ ಗಳನ್ನ ತಯಾರಿಸಿ ಮಾರಾಟ ಮಾಡಿ ಕೈ ತುಂಬಾ ಸಂಪಾದನೆ ಮಾಡಬಹುದಾಗಿದೆ.

More Read: ಟ್ರಾವೆಲ್ ಪ್ರಿಯರಿಗೆ ಯಾವುದು ಬೆಸ್ಟ್ ಜಾಬ್ ಗೊತ್ತಾ?

 

 

For Quick Alerts
ALLOW NOTIFICATIONS  
For Daily Alerts

English summary
The jobs that allow you to work from home has made it possible for housewives to earn. We take a look at the work from home opportunities for housewives in India. Here some easy ideas for work from option.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X