ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಯಲಿವೆ. ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ
- ನೀಟ್ ಎಗ್ಸಾಮ್ ಬರೆದಿರುವವರ ಪ್ರಕಾರ ನಿಗದಿತ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ನಿಜವಾಗಿಯೂ ಸವಾಲಾಗಿರುತ್ತದೆ. ಸರಿಯಾಗಿ ಸಮಯ ನಿರ್ವಹಣೆ ಮಾಡುವ ಮೂಲಕ ಈ ಸವಾಲನ್ನು ಎದುರಿಸಬಹುದಾಗಿದ್ದು, ಈ ಬಗ್ಗೆ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳಿ.
- ಪರೀಕ್ಷೆ ಹತ್ತಿರವಾದಂತೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದ ಸಹಜ, ಆದರೆ ಆ ಭಯ ಬೇಡ. ನೀವು ಎಷ್ಟು ಸಮಾಧಾನದಿಂದ ಇರುತ್ತೀರೋ ಅಷ್ಟೇ ಸುಲಭವಾಗಿ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ. ಪರೀಕ್ಷೆಗೆ ಹೋಗುವ ಹಿಂದಿನ ದಿನ ಮತ್ತು ಪರೀಕ್ಷೆ ದಿನ ನಿಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಿ. ಧ್ಯಾನ ಮಾಡುವ ಅಭ್ಯಾಸವಿದ್ದರೆ ಇನ್ನು ಸುಲಭ. ಪರೀಕ್ಷೆಗೂ ಮುನ್ನ ಕಣ್ಣು ಮುಚ್ಚಿ ದೀರ್ಘವಾಘಿ ಉಸಿರಾಡಿ, ಮನಸ್ಸಿನಲ್ಲಿ ನಾನು ಎಲ್ಲವನ್ನು ಓದಿದ್ದೇನೆ ಎಂಬ ಭಾವನೆ ಇರಲಿ ಆಗ ಮಾನಸಿಕವಾಗಿ ಸದೃಢರಾಗುತ್ತಿರ. ಶಾಂತಚಿತ್ತರಾಗಿ ಪರೀಕ್ಷೆ ಕೊಠಡಿ ಪ್ರವೇಶಿಸಿದರೆ ಪ್ರವೇಶ ಪರೀಕ್ಷೆಯಲ್ಲಿ ಅರ್ಧ ಗೆದ್ದಂತೆ.

- ಪರೀಕ್ಷೆಯ ಹಿಂದಿನ ದಿನ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಪರೀಕ್ಷೆಗೆ ತೆರಳುವ ದಿನ ನಿಮ್ಮಿಷ್ಟದ ಬಟ್ಟೆಯನ್ನು ಧರಿಸಿ. ಖಾಲಿ ಹೊಟ್ಟೆಯಲ್ಲಿ ಪರೀಕ್ಷೆ ಬರೆಯಬೇಡಿ, ನಿಯಮಿತ ಆಹಾರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಹೋದರೆ ಪರೀಕ್ಷಾ ಒತ್ತಡದ ನಡುವೆ ಹೆಚ್ಚು ಆಯಾಸವಾಗುವುದು.
- ಉಡುಪುಗಳು ಸರಳವಾಗಿರಲಿ, ಶೂಗಳನ್ನು ಹಾಕಿ ಪರೀಕ್ಷೆಗೆ ಹೋಗಬೇಡಿ.
- ಸಮಯಕ್ಕೆ ಸರಿಯಾಗಿ ಪರೀಕಾ ಕೇಂದ್ರಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳಿ. ಏಕೆಂದರೆ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಹೋದರೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಈ ಬಗ್ಗೆ ಎಚ್ಚರವಿರಲಿ.
- ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಪ್ರವೇಶ ಪತ್ರವಿಲ್ಲದೇ ಇದ್ದರೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. ಪ್ರವೇಶ ಪತ್ರದೊಂದಿಗೆ ಫೋಟೋ ಇರುವ ಮೂಲ ಗುರುತಿನ ಚೀಟಿ ತೆಗೆದುಕೊಂಡು ಹೋಗಲು ಮರೆಯಬೇಡಿ.[ನೀಟ್ ಪರೀಕ್ಷೆ 2017: ಪರೀಕ್ಷಾರ್ಥಿಗಳಿಗೆ ಸೂಚನೆ]
- ಬಹುಮುಖ್ಯವಾಗಿ ವಿದ್ಯಾರ್ಥಿ 5 ನಿಮಿಷಗಳ ಕಾಲ ಕಣ್ಣು ಮುಚ್ಚಿ ದೀರ್ಘ ಶ್ವಾಸ ತೆಗೆದುಕೊಳ್ಳಬೇಕು ಇದರಿಂದ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಮರಳಿ ದೇಹದ ಎಲ್ಲಾ ಭಾಗಗಳಿಗೆ ಮೆದುಳಿಗೆ ರಕ್ತ ಪೂರೈಕೆ ಆಗಿ ಮನಸ್ಸು ನಿರಾಳವಾಗುತ್ತದೆ. ಈಗ ಕಣ್ಣನ್ನು ನಿಧಾನವಾಗಿ ತೆರೆಯಬೇಕು ಪ್ರಶ್ನೆ ಪತ್ರಿಕೆ ನೀಡಿದಾಗ ಸಾವಧಾನವಾಗಿ ಪ್ರಶ್ನೆಗಳನ್ನು ಓದಿ ನೂರಕ್ಕೆ ನೂರರಷ್ಟು ಸರಿ ಉತ್ತರ ಎಂದು ಕಂಡು ಬಂದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಬೇಕು.
- ಪರೀಕ್ಷೆ ಬರೆಯುವ ಮೊದಲು ಯಾವೆಲ್ಲಾ ಸೂಚನೆಗಳನ್ನು ನೀಡಲಾಗಿದೆ ಎಂಬುದನ್ನು ಸರಿಯಾಗಿ ಓದಿಕೊಳ್ಳಿ.
- ಪ್ರಶ್ನೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗಮನವಿಟ್ಟು ಓದಿ. ಬಹುಆಯ್ಕೆಯ ಉತ್ತರಗಳನ್ನು ಸೂಕ್ಷ್ಮವಾಗಿ ಗಮನಿಸಿ
- ನೀಟ್ ಪರೀಕ್ಷೆಯಲ್ಲಿಯೂ ಮೌಲ್ಯಮಾಪನ ಮಾಡುವಾಗ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತ ಮಾಡಲಾಗುವುದು. ಹಾಗಾಗಿ ಯಾವುದೇ ಉತ್ತರದ ಬಗ್ಗೆ ಅನುಮಾನವಿದ್ದರೆ ಅದನ್ನು ಬರೆಯಬೇಡಿ.
- ಸರಿಯುತ್ತರದ ಸರ್ಕಲ್ಲನ್ನು ಸರಿಯಾಗಿ ಫಿಲ್ ಮಾಡಿ. ಈ ಬಗ್ಗೆ ನೀಡಲಾಗಿರುವ ಸೂಚನೆಗಳನ್ನು ಗಮನಿಸಿ.
- ಒಎಂಆರ್ ಶೀಟ್‌ನಲ್ಲಿ ಒಮ್ಮೆ ಭರ್ತಿ ಮಾಡಿದ ಮೇಲೆ ಮತ್ತೆ ಉತ್ತರವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಉತ್ತರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡೇ ಒಎಂಆರ್ ಶೀಟ್ ಭರ್ತಿ ಮಾಡಿ.
ಪರೀಕ್ಷೆಗೆ ಹೋಗುವ ಮುನ್ನ ಮೇಲಿನ ಸೂಚನೆಗಳನ್ನು ಪಾಲಿಸಿದರೆ ನೀವು ಯಾವ ಪರೀಕ್ಷೆಯನ್ನಾದರು ಸುಲಭವಾಗಿ ಆತಂಕವಿಲ್ಲದೆ ಬರೆಯಬಹುದು. ನಮ್ಮ ಕಡೆಯಿಂದ ನಿಮಗೆ ಆಲ್ ದಿ ಬೆಸ್ಟ್.
For Quick Alerts
For Daily Alerts


Click it and Unblock the Notifications











