ನೀಟ್ ಪರೀಕ್ಷೆ 2017: ಪರೀಕ್ಷಾರ್ಥಿಗಳಿಗೆ ಸೂಚನೆ

Posted By:

ಭಾರತೀಯ ವೈದ್ಯಕೀಯ ಪರಿಷತ್ (ಎಂ.ಸಿ.ಐ) ಮತ್ತು ಭಾರತೀಯ ದಂತ ವೈದ್ಯಕೀಯ ಪರಿಷತ್ (ಡಿ.ಸಿ.ಐ) ಅನುಮೋದನೆಯೊಂದಿಗೆ ನಡೆಯುತ್ತಿರುವ ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಡೀಮ್ಡ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶ ಮೇ 07 ರಂದು ಏಕಕಾಲಕ್ಕೆ ದೇಶಾದ್ಯಂತ 103 ನಗರಗಳ 2200 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ನಡೆಯಲಿದೆ. ಒಟ್ಟು 11,35,104 ವಿದ್ಯಾರ್ಥಿಗಳು ಬರೆಯಲಿದ್ದಾರೆ.

ಪರೀಕ್ಷೆಯ ಪೂರ್ವ ತಯಾರಿಯಲ್ಲಿರುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಕೆಲ ಸೂಚನೆ ಅನುಸರಿಸಬೇಕಾಗುತ್ತದೆ.

ನೀಟ್ ಪರೀಕ್ಷಾರ್ಥಿಗಳಿಗೆ ಸೂಚನೆ

 1. ಪರೀಕ್ಷಾ ಕೊಠಡಿಯು ಪರೀಕ್ಷೆ ಆರಂಭಕ್ಕೂ ಎರಡುವರೆ ಗಂಟೆ ಮುಂಚಿತವಾಗಿ ತೆರೆಯಲ್ಪಡುತ್ತದೆ. ಪರೀಕ್ಷಾರ್ಥಿಯು ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿ ಒಳಗೆ ಸೇರಬೇಕು. ಪರೀಕ್ಷೆಗಳು 10 ಗಂಟೆಗೆ ಆರಂಭವಾಗಲಿದ್ದು ಅಭ್ಯರ್ಥಿಗಳು 9:30 ರೊಳಗೆ ಹಾಜರಾಗಲು ಸೂಚಿಸಲಾಗಿದೆ. 9:30 ರ ನಂತರ ಬಂದ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಸೇರಿಸಲಾಗುವುದಿಲ್ಲ.
 2. ಪರೀಕ್ಷಾರ್ಥಿಗಳು ಡೌನ್ಲೋಡ್ ಮಾಡಿರುವ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಪ್ರವೇಶ ಪತ್ರ ಇಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಪ್ರವೇಶ ಪತ್ರದ ಜೊತೆಗೆ ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಕೂಡ ತೆಗೆದುಕೊಂಡು ಹೋಗಬೇಕು.
 3. ಅಭ್ಯರ್ಥಿಗಳು ತಮಗೆ ನಿಗದಿಪಡಿಸಿರುವ ಜಾಗದಲ್ಲೇ ಕುಳಿತುಕೊಳ್ಳಬೇಕು. ಮತ್ತೊಬ್ಬರ ಜಾಗದಲ್ಲಿ ಕುಳಿತ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡಲಾಗುವುದಿಲ್ಲ.
 4. ಪರೀಕ್ಷೆಯ ಕೊನೆಯ ಗಂಟೆ ಬಾರಿಸುವ ಮುಂಚಿತವಾಗಿ ಯಾರನ್ನು ಹೊರಗೆ ಬಿಡುವುದಿಲ್ಲ.
 5. ಪರೀಕ್ಷಾ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ನೀರಿನ ಬಾಟಲಿ, ಕಾಫೀ, ಟೀ ಮತ್ತು ಇತರ ಕುರುಕಲು ತಿಂಡಿಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
 6. ಪರೀಕ್ಷಾ ವೇಳೆಯಲ್ಲಿ ಇತರರೊಂದಿಗೆ ಹಾಗೂ ಕೊಠಡಿಯ ಮೇಲ್ವಿಚಾರಕರೊಂದಿಗೆ ಮಾತನಾಡುವಂತಿಲ್ಲ.
 7. ಪರೀಕ್ಷೆ ಆರಂಭಕ್ಕೂ 15 ನಿಮಿಷ ಮುಂಚಿತವಾಗಿ ಆನ್ಸರ್ ಬುಕ್ಲೆಟ್ ನೀಡಲಾಗುವುದು. ಅಭ್ಯರ್ಥಿಗಳು ಬುಕ್ಲೆಟ್ ಅನ್ನು ಎಚ್ಚರಿಕೆಯಿಂದ ತಪ್ಪಿಲ್ಲದಂತೆ ತುಂಬಬೇಕು.
 8. ಪರೀಕ್ಷೆಗೆ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸತಕ್ಕದ್ದು. [ಒಎಂಆರ್ ತುಂಬಲು ಬಾಲ್ ಪೆನ್ ಬಳಸುವುದೇಕೆ?]

ಪತ್ರಿಕೆಯ ಮೊದಲ ಬದಿಯಲ್ಲಿ ತುಂಬಬೇಕಾದ ವಿವರಗಳು

 • ರೋಲ್ ನಂಬರ್
 • ಅಭ್ಯರ್ಥಿಯ ಹೆಸರು
 • ತಂದೆಯ ಹೆಸರು
 • ಪರೀಕ್ಷಾ ಕೇಂದ್ರದ ಸಂಖ್ಯೆ
 • ಪರೀಕ್ಷಾ ಕೆಂದ್ರದ ಹೆಸರು
 • ಅಭ್ಯರ್ಥಿಯ ಸಹಿ

ಎರಡನೇ ಬದಿಯಲ್ಲಿ ತುಂಬಬೇಕಾದ ವಿವರಗಳು

 • ರೋಲ್ ನಂಬರ್
 • ಪರೀಕ್ಷಾ ಕೇಂದ್ರದ ಸಂಖ್ಯೆ
 • ಟೆಸ್ಟ್ ಬುಕ್ಲೆಟ್ ನಂಬರ್
 • ಟೆಸ್ಟ್ ಬುಕ್ಲೆಟ್ ಕೋಡ್
 • ಒಂದರಿಂದ ೧೮೦ ರವರೆಗೆ ಉತ್ತರಗಳು
 • ನೀಲಿ/ ಕಪ್ಪು ಬಣ್ಣದ ಬಾಲ್ ಪೆನ್ ಬಳಸಿ

ಸೂಚನೆ

 • ಒಎಂಆರ್ ವೃತ್ತದ ಗೆರೆಯೊಳಗಿರುವ ಜಾಗದಷ್ಟನ್ನು ಮಾತ್ರ ತುಂಬಬೇಕು. ಹೆಚ್ಚು- ಕಡಿಮೆ ತುಂಬಬಾರದು. ಭಾಗಶಃ ಇಲ್ಲವೆ ಚೆಲ್ಲಾಪಿಲ್ಲಿಯಾಗಿರುವಂತೆ ಭರ್ತಿ ಮಾಡಬಾರದು.
 • ಮೊದಲಿಗೆ ಒಎಂಆರ್ ಷೀಟ್ ನಲ್ಲಿನ ಸರ್ಕಲ್ (ವೃತ್ತ) ಅಥವಾ ಬಾಕ್ಸ್ ಗಳನ್ನು ತೆಳುವಾದ ರೀತಿಯಲ್ಲಿ ಸಂಪೂರ್ಣವಾಗಿ ತುಂಬಿ. ಆನಂತರ ಅವುಗಳು ಇನ್ನೂ ಹೆಚ್ಚು ಗಾಢವಾಗಿ ಕಾಣುವಂತೆ ಮಾಡಿ.
 • ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸಲಾಗುವುದು. ಹಾಗಾಗಿ ಎಚ್ಚರಿಕೆಯಿಂದ ಉತ್ತರಿಸಿ. ನಿಮಗೆ ಗೊತ್ತಿಲ್ಲದ ಉತ್ತರಗಳನ್ನು ತುಂಬಬೇಡಿ.

English summary
NEET 2017 INSTRUCTIONS TO BE FOLLOWED BY THE STUDENTS IN THE EXAMINATION HALL

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia