ಟಾಪ್ 10 ಭಾರತದ ವಿಜ್ಞಾನ ಕಾಲೇಜುಗಳು

By Sushma

10 ತರಗತಿ ಪರೀಕ್ಷೆ ಮುಗಿದ ನಂತ್ರ ಪ್ರತಿಯೊಬ್ಬ ವಿದ್ಯಾರ್ಥಿಗೂ ಲೈಫ್ ನ ಟರ್ನಿಂಗ್ ಪಾಯಿಂಟ್. ಮುಂದೇನು ಮಾಡಬೇಕು, ಯಾವ ವಿಷಯದಲ್ಲಿ ಪದವಿ ಗಳಿಸಬೇಕು. ಯಾವ ಕಾಲೇಜಿಗೆ ಸೇರಿಕೊಳ್ಳಬೇಕು. ಯಾವ ವಿಷಯ ನನಗೆ ಹೊಂದಿಕೆಯಾಗುತ್ತೆ. ಯಾವುದರಲ್ಲಿ ನನ್ನ ಭವಿಷ್ಯವಿದೆ ಎಂದು ಆಲೋಚಿಸಬೇಕಾಗುತ್ತೆ.

ಸದ್ಯದ ಟ್ರೆಂಡ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಅವಕಾಶಗಳಿರುವುದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಸರ್ಕಾರದ ಯೋಜನೆಗಳಾದ ಮೇಕ್ ಇನ್ ಇಂಡಿಯಾ,ಡಿಜಿಟಲ್ ಇಂಡಿಯಾ ಯೋಜನೆಗಳು ಕೂಡ ಇದಕ್ಕೆ ಪೂರಕ ಸಹಕಾರ ನೀಡುವಂತೆಯೇ ಇದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆಯಲು ಇಚ್ಛಿಸುತ್ತಿದ್ದಾರೆ. ಇಂಜಿನಿಯರಿಂಗ್ ಮತ್ತು ಐಐಟಿ ಹೊರತು ಪಡಿಸಿ ಬಿಎಸ್ಸಿಗೂ ಸದವಕಾಶಗಳು ದೊರೆಯಲಾರಂಭಿಸಿದೆ.

 

ಇಂಜಿನಿಯರಿಂಗ್ ಮತ್ತು ಇತರೆ ವಿಷಯಗಳ ಕಾಲೇಜುಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಗಲಿದೆ. ಯಾವುದು ಬೆಸ್ಟ್, ಯಾವ ಗಕಾಲೇಜಿನ ಫೀಸ್ ಸ್ಟ್ರಕ್ಚರ್ ಹೇಗಿದೆ ಎಂದು ತಿಳಿಯುತ್ತೆ. ಆದ್ರೆ ಬಿಎಸ್ಸಿ ಬಗ್ಗೆ ಮಾಹಿತಿಗಳು ಕಡಿಮೆ., ಹಾಗಾಗಿ ಈ ಲೇಖನ ನಿಮಗೆ ಭಾರತದ ಅತ್ಯುತ್ತಮ ಬಿಎಸ್ಸಿ ಕಾಲೇಜುಗಳ ಬಗ್ಗೆ ಮಾಹಿತಿ ನೀಡಲಿದೆ. ಈ ಲೇಖನವನ್ನು ಆಯಾ ಕಾಲೇಜಿನ ಫೀಸ್, ಅಲ್ಲಿನ ಶಿಕ್ಷಕ ವೃಂದ, ಮತ್ತು ಆಯ್ಕೆಯ ವಿಧಾನ, ಲ್ಯಾಬೋರೆಟರಿಗಳ ಸೌಲಭ್ಯ ಇತ್ಯಾದಿಗಳನ್ನು ಪರಿಗಣಿಸಿ ಲಿಸ್ಟ್ ತಯಾರಿಸಲಾಗಿದೆ. ನಿಮ್ಮಲ್ಲಿ ಯಾರಾದ್ರೂ ಬಿಎಸ್ಸಿ ಮಾಡುವವರಿದ್ದಲ್ಲಿ ಖಂಡಿತ ಈ ಲೇಖನವನ್ನು ಓದಲೇಬೇಕು

ಸೈಂಟ್ ಸ್ಟೀಫನ್ಸ್ ಕಾಲೇಜು, ನವದೆಹಲಿ

ಸೈಂಟ್ ಸ್ಟೀಫನ್ಸ್ ಕಾಲೇಜು, ನವದೆಹಲಿ

ನಮ್ಮ ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಸೈಂಟ್ ಸ್ಟೀಫನ್ಸ್ ಕಾಲೇಜು ಕೂಡ ಒಂದು. 1881 ರಲ್ಲೇ ಆರಂಭಗೊಂಡಿರುವ ಈ ಕಾಲೇಜು ಇವತ್ತಿಗೂ ತನ್ನ ಶ್ರೇಷ್ಟ ಗುಣಮಟ್ಟದ ಶಿಕ್ಷಣದಿಂದಾಗಿ ಟಾಪ್ ಮೋಸ್ಟ್ ಅನ್ನಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಹಲವು ವಿಧದ ಕೋರ್ಸ್ ಗಳನ್ನೂ ಕೂಡ ಇಲ್ಲಿ ಪ್ರಾರಂಭಿಸಲಾಗಿದ್ದು, ಅವು ಸದ್ಯದ ಜಗತ್ತಿನ ಅವಶ್ಯಕತೆಗಳಿಗೆ ಪೂರಕವಾಗುವಂತಿವೆ. 2016-2017 ನೇ ಸಾಲಿನಲ್ಲಿ ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 8 ಲಕ್ಷ ಸಂಬಳ ಬರುವಂತ ಕೆಲಸ ಸಿಕ್ಕಿದೆ ಅಂದರೆ ನೀವು ನಂಬಲೇಬೇಕು.

Visit Us At: St. Stephen's College, New Delhi

ಲೋಯಲಾ ಕಾಲೇಜು , ಚೆನೈ

ಲೋಯಲಾ ಕಾಲೇಜು , ಚೆನೈ

ಎಲ್ಲಾ ಶಿಸ್ತಿನ ವಿಚಾರಗಳಿಂದಾಗಿ ಮದ್ರಾಸ್ ಯುನಿವರ್ಸಿಟಿಯ ಈ ಕಾಲೇಜು ಟಾಪ್ ಕಾಲೇಜುಗಳಲ್ಲಿ ಒಂದೆನಿಸಿದೆ. ಇಲ್ಲಿನ ಕಾಲೇಜು ಶುಲ್ಕ ಅತೀ ಹೆಚ್ಚು ಅಲ್ಲ ಅತೀ ಕಡಿಮೆಯೂ ಅಲ್ಲ. ಎರಡು ವರ್ಷದ ಎಂಎಸ್ಸಿ ಕೋರ್ಸಿಗೆ ಅಂದಾಜು ಶುಲ್ಕ 50ಕೆ ತಗುಲಲಿದೆ. ಆದರೆ ಈ ಕಾಲೇಜು ನೀವು ಪಾವತಿ ಮಾಡಿರುವ ಹಣಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸಿಕೊಡಲಿದೆ ಅನ್ನುವುದರಲ್ಲಿ ಅನುಮಾನ ಬೇಡ. ಪ್ಲೇಸ್ ಮೆಂಟ್ ಟ್ರೈನಿಂಗ್ ಗಾಗಿ ಈ ಕಾಲೇಜು ಪ್ರತಿವರ್ಷ ಹೆಚ್ಚು ಹಣವನ್ನು ವ್ಯಯಿಸುತ್ತೆ ಅದರಿಂದಾಗಿ ಶೇಕಡಾ 100ರಷ್ಟು ಫಲಿತಾಂಶ ಪಡೆಯುವ ಉದ್ದೇಶ ಕಾಲೇಜಿಗಿದೆ

Visit Us At: Loyola College (Autonomous)

ಸೈಂಟ್ ಕ್ಸೇವಿಯರ್ಸ್ ಕಾಲೇಜು, ಕೋಲ್ಕತ್ತಾ
 

ಸೈಂಟ್ ಕ್ಸೇವಿಯರ್ಸ್ ಕಾಲೇಜು, ಕೋಲ್ಕತ್ತಾ

ನಿಜ ಹೇಳಬೇಕು ಅಂದ್ರೆ ಈ ಕಾಲೇಜು ಕಾಮರ್ಸ್ ವಿಭಾಗಕ್ಕೆ ಹೆಚ್ಚು ಪ್ರಚಲಿತಗೊಂಡಿದೆ. ಆದ್ರೆ ಇತ್ತೀಚೆಗೆ ವಿಜ್ಞಾನ ವ್ಯಾಸಂಗಕ್ಕೂ ಹೆಚ್ಚು ಒತ್ತು ನೀಡುತ್ತಿರುವ ಕಾಲೇಜು ಈ ದೇಶದ ಪ್ರಮುಖ ಅಧ್ಬುತ ಕಾಲೇಜುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.ಅತ್ಯಂತ ಕಡಿಮೆ ಶುಲ್ಕ ಉತ್ತಮ ವಿದ್ಯಾಭ್ಯಾಸವನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಇಲ್ಲಿನ ಬಹುತೇಕ ಮಂದಿಗೆ ವಿಶ್ವದ ಬೆಸ್ಟ್ ಕಂಪೆನಿಗಳಲ್ಲಿ ಕೆಲಸ ಸಿಕ್ಕಿದೆ.

Visit Us At: St. Xavier's College, Kolkata

ಕ್ರೈಸ್ಟ್ ಕಾಲೇಜು, ಬೆಂಗಳೂರು

ಕ್ರೈಸ್ಟ್ ಕಾಲೇಜು, ಬೆಂಗಳೂರು

1969 ರಲ್ಲಿ ಆರಂಭಗೊಂಡಿರುವ ಕ್ರೈಸ್ಟ್ ಕಾಲೇಜು 2008 ರಲ್ಲಿ ಅಟೋನೋಮಸ್ ಆಗಿದೆ. ನಾವು ಲಿಸ್ಟ್ ನೀಡುತ್ತಿರುವುದರಲ್ಲೇ ಅತ್ಯಂತ ಹೆಚ್ಚು ಶುಲ್ಕವನ್ನು ನೀವು ಈ ಕಾಲೇಜಿನಲ್ಲಿ ಪಾವತಿಸಬೇಕಾಗುತ್ತೆ. ನಾಲ್ಕು ಲಕ್ಷ| ರೂಪಾಯಿಯ ಸೈನ್ಸ್ ಕೋರ್ಸ್ ಗಳು ಇಲ್ಲಿ ಲಭ್ಯ. ಕಳೆದ ವರ್ಷ| ಸುಮಾರು 700 ಮಂದಿ ವಿದ್ಯಾರ್ಥಿಗಳು ಇಲ್ಲಿಂದ ಆಯ್ಕೆಗೊಂಡು ಬೇರೆಬೇರೆ ಕಂಪೆನಿಯ ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಕಾಲೇಜಿನ ಲಾಭವೇನೆಂದರೆ ಇಲ್ಲಿ ಅತ್ಯದ್ಭುತವಾದ ಲ್ಯಾಬೋರೆಟರಿಗಳಿವೆ.

Visit Us At: Christ College, Bengaluru

ರಾಮ್ ಜಾಸ್ ಕಾಲೇಜು ದೆಹಲಿ..

ರಾಮ್ ಜಾಸ್ ಕಾಲೇಜು ದೆಹಲಿ..

ದೆಹಲಿ ಯುನಿವರ್ಸಿಟಿಗಿಂತಲೂ ಹಳೆಯದಾದ ದೆಹಲಿಯ ಕಾಲೇಜುಗಳಲ್ಲಿ ರಾಮ್ಜಾಸ್ ಕಾಲೇಜು ಕೂಡ ಒಂದು.ವಿದೇಶಿ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದಲು ಅವಕಾಶ ನೀಡುವ ಎಕ್ಸ್ ಚೇಂಜ್ ಎಜುಕೇಷನ್ ಪ್ರೊಗ್ರಾಂಗಳಿಗೆ ಈ ಕಾಲೇಜು ಪ್ರಸಿದ್ಧಿ.ರಿಸೆಷನ್ ಸಮಯದಲ್ಲೂ ಕೂಡ ಇಲ್ಲಿನ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿತ್ತು. ಕಾಲೇಜಿನ ಶುಲ್ಕ ಕೂಡ ತೀರಾ ದುಬಾರಿಯಾಗಿರದೆ ಎಲ್ಲಾ ವರ್ಗದವರಿಗೂ ಕೈಗೆಟುವಂತಿದೆ ಎಂದು ಕಾಲೇಜು ಮೂಲಗಳಿಂದ ತಿಳಿಯುತ್ತೆ

Visit Us At: Ramjas College, Delhi

ಮಿರಾಂಡಾ ಹೌಸ್, ದೆಹಲಿ

ಮಿರಾಂಡಾ ಹೌಸ್, ದೆಹಲಿ

ಶಿಕ್ಷಣ ಅನ್ನೋದು ಪುರುಷ ಪ್ರಧಾನವಾಗಿದ್ದ ದೇಶದಲ್ಲಿ ಮಹಿಳೆಯರಿಗೂ ಶಿಕ್ಷಣದ ಪ್ರಾಧಾನ್ಯತೆ ಕೊಡುತ್ತಿರುವ ಕಾಲೇಜುಗಳಲ್ಲಿ ಮಿರಾಂಡಾ ಹೌಸ್ ಕೂಡ ಒಂದು. ಸ್ವಾತಂತ್ರ್ಯಾ ನಂತರದ 7 ದಶಕಗಳಿಂದಲೂ ತನ್ನ ಛಾಪನ್ನು ಮೂಡಿಸಿಕೊಂಡು ಬಂದಿದ್ದು, ಇಂದಿಗೂ ಟಾಪ್ ಕಾಲೇಜು ಎನಿಸಿಕೊಂಡಿದ್ದು ಉತ್ತಮ ವಿದ್ಯಾರ್ಥಿಗಳನ್ನು ದೇಶಕ್ಕೆ ನೀಡಿದೆ. ಬೇರೆ ಕಾಲೇಜುಗಳಂತೆಯೆ ಈ ಕಾಲೇಜಿನಲ್ಲಿಯೂ ಬೇರೆಬೇರೆ ಸೈನ್ಸ್ ಕೋರ್ಸ್ಗಳು ಲಭ್ಯವಿದ್ದು, ಅತ್ಯುತ್ತಮ ಲ್ಯಾಬೋರೆಟರಿಗಳನ್ನು ಒಳಗೊಂಡಿದೆ.15ಕೆ ಶುಲ್ಕದ ಸೈನ್ಸ್ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.ಇಲ್ಲಿ ಪದವಿ ಪಡೆದ ಶೇಕಡಾ 80ರಷ್ಟು ವಿದ್ಯಾರ್ಥಿಗಳಿಗೆ ಪ್ಲೇಸ್ ಮೆಂಟ್ ಪಕ್ಕಾ.

Visit Us At: Miranda House, Delhi

ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನೈ

ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಚೆನೈ

ಬಹಳ ಮಹತ್ವ ಪಡೆದಿರುವ ಕಾಲೇಜುಗಳಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಒಂದು. ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಪ್ರಕಾಶ್ ಕಾರಟ್, ಇಂದ್ರಾ ನೂಯಿ ಇಲ್ಲಿನ ವಿದ್ಯಾರ್ಥಿಗಳು. ಇಂತಹ ಉತ್ತಮ ಪ್ರತಿಭೆಗಳ ಲಿಸ್ಟ್ ಬೆಳೆಯುತ್ತಲೇ ಸಾಗುತ್ತೆ. ಈ ಕಾಲೇಜಿನಲ್ಲಿ ಸೆಮಿಸ್ಟರ್ ಪ್ರಕಾರ ಫೀಸ್ ಕಟ್ಟಿಸಿಕೊಳ್ಳಲಾಗುತ್ತೆ. ಹಾಗಾಗಿ ವರ್ಷಕ್ಕೆ ಒಮ್ಮೆಲೆ ದುಬಾರಿ ಹಣ ತೆತ್ತುವ ಒತ್ತಡವಿರುವುದಿಲ್ಲ.ಕಳೆದ ವರ್ಷ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ವರ್ಷಕ್ಕೆ 3 ಲಕ್ಷ ಸಂಬಳದ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ.

Visit Us At: Madras Christian College

ಹಂಸರಾಜ್ ಕಾಲೇಜ್ , ದೆಹಲಿ

ಹಂಸರಾಜ್ ಕಾಲೇಜ್ , ದೆಹಲಿ

ಈಗಾಗಲೇ ನಾವು ಚರ್ಚಿಸಿರುವ ಕಾಲೇಜುಗಳಲ್ಲಿ ಹೊಸ ಕಾಲೇಜು ಅಂದ್ರೆ ಹಂಸರಾಜ್ ಕಾಲೇಜ್. ಇಲ್ಲಿನ ವಿಜ್ಞಾನ ವಿಭಾಗಕ್ಕೆ ಸರಾಸರಿ ಶುಲ್ಕ 70ಕೆ ಇದೆ. ನೀವು ಕಟ್ಟಿರುವ ಹಣ ನಿಮ್ಗೆ ಖಂಡಿತ ಪದವಿ ಪಡೆದ ನಂತ್ರ ವಾಪಾಸ್ ಸಿಗಲಿದೆ.ಯಾಕಂದ್ರೆ ಇಲ್ಲಿ ಓದಿದವರಿಗೆ ಕೆಲಸ ಗ್ಯಾರೆಂಟಿ, ಉತ್ತಮ ಸಂಬಳವೂ ಖಚಿತ. ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳು ಇಲ್ಲಿ ಅತ್ಯುತ್ತಮವಾಗಿದ್ದು ನಿಮ್ಮ ಪದವಿ ಕಲಿಕೆಗೆ ಹೇಳಿ ಮಾಡಿಸಿದ ಜಾಗವೆಂದೇ ಹೇಳಬಹುದು.

Visit Us At: Hansraj College

ಫರ್ಗ್ಯೂಸನ್ ಕಾಲೇಜು, ಪುಣೆ

ಫರ್ಗ್ಯೂಸನ್ ಕಾಲೇಜು, ಪುಣೆ

ಇಲ್ಲಿನ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಇದೂ ಒಂದು. ಹಳೆಯ ಸಾಂಪ್ರದಾಯಿಕ ಕಟ್ಟಡಗಳನ್ನು ನೀವಿಲ್ಲಿ ಕಾಣಬಹುದು. ಬಹುಶ್ಯ ಇದೇ ಕಾರಣಕ್ಕೆ ಇಲ್ಲಿನ ಶುಲ್ಕ ಕೂಡ ಹಲವು ವರ್ಷಗಳಿಂದ ಅತೀ ಕಡಿಮೆ ದರದಲ್ಲಿದೆ.ಶೇಕಡಾ 70 ರಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ಕೆಲಸ ಸಿಕ್ಕಿದೆ. ಬೇರೆಬೇರೆ ಕೋರ್ಸ್ಗ್ ಗಳು ಇಲ್ಲಿ ಲಭ್ಯವಿದ್ದು ನಿಮಗೆ ಹೇಳಿಮಾಡಿಸಿದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

Visit Us At: Fergusson College, Pune

ಹಿಂದೂ ಕಾಲೇಜು ದೆಹಲಿ

ಹಿಂದೂ ಕಾಲೇಜು ದೆಹಲಿ

ದೆಹಲಿಯಲ್ಲೇ ಇರುವ ಮತ್ತೊಂದು ಹಳೆಯ ಕಾಲೇಜುಗಳಲ್ಲಿ ಹಿಂದೂ ಕಾಲೇಜು ಕೂಡ ಒಂದು.ವಿಜ್ಞಾನ ವಿಭಾಗಕ್ಕೆ ಇಲ್ಲಿ ವರ್ಷಕ್ಕೆ 50ಕೆ ಗಿಂತ ಕಡಿಮೆ ಶುಲ್ಕ ತೆಗೆದುಕೊಳ್ಳಲಾಗುತ್ತೆ. ನ್ಯಾಷನಲ್ ಕಂಪೆನಿಗಳಲ್ಲಿ ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ದೊರೆಯುವಂತೆ ನೋಡಿಕೊಳ್ಳಲಾಗುತ್ತೆ.

Visit Us At: Hindu College, Delhi

For Quick Alerts
ALLOW NOTIFICATIONS  
For Daily Alerts

English summary
Following the class 10 board exams, the first question that any student is bombarded with is which stream they will opt for while pursuing higher studies. Let us explore one possible option. With tremendous potential in the field of scientific research and development, more and more students are looking towards a career in pure and applied sciences. Government initiatives like Make in India and Digital India encourage the same. This, in the recent years, has led to a number of students taking up a bachelor's degree in science.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X