2 ವರ್ಷಗಳ ಪಶುಸಂಗೋಪನಾ ಡಿಪ್ಲೊಮಾಗೆ ಅರ್ಜಿ ಆಹ್ವಾನ

Posted By:

ಬೀದರಿನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2017-18ನೇ ಶೈಕ್ಷಣಿಕ ಸಾಲಿಗೆ ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 3 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ/ತತ್ಸಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ಕಡ್ಡಾಯವಾಗಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ಪಶುಸಂಗೋಪನಾ ಡಿಪ್ಲೊಮಾಗೆ ಅರ್ಜಿ ಆಹ್ವಾನ

ಕಾಲೇಜುಗಳು

 • ಪಶುಸಂಗೋಪನಾ ಪಾಲಿಟೆಕ್ನಿಕ್, ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರ, ಕೊನೆಹಳ್ಳಿ ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ. ಲಭ್ಯವಿರುವ ಸೀಟುಗಳು 50
 • ಪಶುಸಂಗೋಪನಾ ಪಾಲಿಟೆಕ್ನಿಕ್, ಹಳೆಕೋರ್ಟ್ ಸಂಕೀರ್ಣ, ಶಿಗ್ಗಾಂವ್, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜಿಲ್ಲೆ. ಲಭ್ಯವಿರುವ ಸೀಟುಗಳು: 50
 • ಪಶುಸಂಗೋಪನಾ ಪಾಲಿಟೆಕ್ನಿಕ್, ಕೋರಮಂಗಲ ಕ್ರಾಸ್, ಹಾಸನ ಜಿಲ್ಲೆ. ಲಭ್ಯವಿರುವ ಸೀಟುಗಳು: 50
 • ಪಶುಸಂಗೋಪನಾ ಪಾಲಿಟೆಕ್ನಿಕ್, ಬರ್ಗಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ. ಲಭ್ಯವಿರುವ ಸೀಟುಗಳು: 50
 • ಪಶುಸಂಗೋಪನಾ ಪಾಲಿಟೆಕ್ನಿಕ್, ಡೋರ್ನಳ್ಳಿ, ಶಾಹಪುರ ತಾಲ್ಲೂಕು,ಯಾದಗಿರಿ ಜಿಲ್ಲೆ ಲಭ್ಯವಿರುವ ಸೀಟುಗಳು: 25

ಕೋರ್ಸ್ ವಿವರ

2 ವರ್ಷದ ಈ ಡಿಪ್ಲೊಮಾದಲ್ಲಿ ತರಗತಿಗಳನ್ನು ಕನ್ನಡದಲ್ಲಿ ನಡೆಸಲಾಗುವುದು. ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/- ಮಾಸಿಕ ಶಿಷ್ಯವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.

ಅರ್ಜಿ ಸಲ್ಲಿಕೆ

 • ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪಡೆಯಬೇಕು.
 • ಅರ್ಜಿಯೊಂದಿಗೆ ಡಿಡಿಯನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.
 • ಸೂಕ್ತ ಪ್ರಮಾಣ ಪತ್ರಗಳನ್ನು ಲಗತ್ತಿಸುವುದು.

ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:03-08-2017 ರೊಳಗೆ ಕಛೇರಿ ವಿಳಾಸಕ್ಕೆ ತಲುಪಿಸಬೇಕು.

ಡಿಡಿ ಮಾಹಿತಿ

 • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.300/-
 • ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ ರೂ.150/-

ಡಿಡಿಯನ್ನು ಹಣಕಾಸು ನಿಯಂತ್ರಣಾಧಿಕಾರಿಗಳು, ಕ.ಪ.ಪ.ಮೀ.ವಿ.ವಿ ಬೀದರ್. ಇವರಿಗೆ ಸಂದಾಯವಾಗುವಂತೆ ಪಾವತಿಸುವುದು.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು

 • ಎಸ್ ಎಸ್ ಎಲ್ ಸಿ ಅಂಕಪಟ್ಟಿ
 • ಒಂದರಿಂದ ಹತ್ತನೇ ತರಗತಿಯವರೆಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
 • ಜಾತಿ ಪ್ರಮಾಣ ಪತ್ರ
 • ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಾಗಿದ್ದರೆ ಸೂಕ್ತವಾದ ಪ್ರಮಾಣ ಪತ್ರ

ಅರ್ಜಿ ಸಲ್ಲಿಸಬೇಕಾದ ವಿಳಾಸ

ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು-560024 ಇವರಿಗೆ ಅಂಚೆ ಮೂಲಕ ತಲುಪಿಸುವುದು.

ಆಯ್ಕೆ ವಿಧಾನ

ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನ ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿ ಅಳವಡಿಸಿ ನೇರ ಮೌಖಿಕ ಸಂದರ್ಶನವನ್ನು ದಿನಾಂಕ: 28-08-2017 ರಂದು ಬೆಳಗ್ಗೆ 10.00 ಗಂಟೆಗೆ ಬೆಂಗಳೂರಿನಲ್ಲಿ ನಡೆಸಲಾಗುವುದು.

ಮೌಖಿಕ ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ 18-08-2017 ರಂದು ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.kvafsu.kar.nic.in ಗಮನಿಸಿ

English summary
Karnataka Veterinary, Animal and Fisheries Sciences University Bidar invites applications from sslc passed rural candidates to 2 year diploma course in veterinary.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia