Karnataka Adarsha Vidyalaya Entrance Exam 2021: ಆದರ್ಶ ವಿಶ್ವವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿ ಪರೀಕ್ಷೆಗೆ ಅರ್ಜಿ ಆಹ್ವಾನ

ಆದರ್ಶ ವಿದ್ಯಾಲಯ 2021-22 ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಪ್ರಸ್ತುತ (2020-21 ನೇ ಸಾಲಿನಲ್ಲಿ) 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಆನ್ಲೈನ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 1/2/2021 ರಿಂದ 20/2/2021ರವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಪಾಲಕರು/ಪೋಷಕರು ಕೆಳಗೆ ನಮೂದಿಸಿರುವ ದಾಖಲಾತಿಯೊಂದಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

* ಎಸ್.ಟಿ.ಎಸ್.ನಂಬರ್ (SATS Number)
* ಮಗುವಿನ ಭಾವಚಿತ್ರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಕಲು
* ಆಧಾರ್ ಕಾರ್ಡ್

ಆದರ್ಶ ವಿದ್ಯಾಲಯ:

ಕರ್ನಾಟಕ ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗಗುತ್ತಿದೆ. ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಸಮಗ್ರ ಹಾಗೂ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಆದರ್ಶ ವಿದ್ಯಾಲಯಗಳ ಗುರಿಯಾಗಿದೆ.

2021-22ನೇ ಸಾಲಿನಲ್ಲಿ 6ನೇ ತರಗತಿಯ ಮಕ್ಕಳ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುವುದು. ಪ್ರವೇಶ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮಕ್ಕಳು ಯಾವುದೇ ಶುಲ್ಕ ಪಾವತಿಸಬೇಕಾಗಿರುವುದಿಲ್ಲ.

ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: ಏಪ್ರಿಲ್ 25,2021 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯವರೆಗೆ
ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಏಪ್ರಿಲ್ 5,2021 ರಿಂದ ಪಡೆಯಬಹುದು.
ಅರ್ಜಿ ಸಲ್ಲಿಸುವ ದಿನಾಂಕ: ದಿನಾಂಕ: 1/2/2021 ರಿಂದ 20/2/2021ರವರೆಗೆ

 

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ http://www.schooleducation.kar.nic.in/ ಗೆ ಭೇಟಿ ನೀಡಿ.

For Quick Alerts
ALLOW NOTIFICATIONS  
For Daily Alerts

English summary
Adarsha vidyalaya 2021-22 admission notification has been released. Candidates can apply through online before February 20.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X