ಆದರ್ಶ ವಿದ್ಯಾಲಯ: 2018-19ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ

Posted By:

ಆದರ್ಶ ವಿದ್ಯಾಲಯ 2018-19 ನೇ ಸಾಲಿನ 6 ನೇ (ವಸತಿ ರಹಿತ ಆಂಗ್ಲ ಮಾದ್ಯಮ-ರಾಜ್ಯ ಪಠ್ಯಕ್ರಮ) ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಕೆಯುಐಡಿಎಫ್‌ಸಿ: ಮಾಹಿತಿ ತಂತ್ರಜ್ಞಾನ ತಜ್ಞರ ನೇಮಕಾತಿ

ಪ್ರಸ್ತುತ (2017-18 ನೇ ಸಾಲಿನಲ್ಲಿ) 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಆನ್ಲೈನ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ:27/1/2018 ರಿಂದ 17/2/2018ರವರೆಗೆ ಅರ್ಜಿ ಸಲ್ಲಿಸಬಹುದು.
ಕೆಪಿಎಸ್ಸಿ: ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ ಅರ್ಜಿ ಆಹ್ವಾನ

ಆದರ್ಶ ವಿದ್ಯಾಲಯ ಪ್ರವೇಶಾತಿ

ಅಭ್ಯರ್ಥಿಗಳು ತಮ್ಮ ಪಾಲಕರು/ಪೋಷಕರು ಕೆಳಗೆ ನಮೂದಿಸಿರುವ ದಾಖಲಾತಿಯೊಂದಿಗೆ ಆನ್ಲೈನ್ ಕೇಂದ್ರಕ್ಕೆ ಹೋಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

  • ಎಸ್.ಟಿ.ಎಸ್.ನಂಬರ್ (SATS Number)
  • ಮಗುವಿನ ಭಾವಚಿತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಕಲು
  • ಆಧಾರ್ ಕಾರ್ಡ್

ಆದರ್ಶ ವಿದ್ಯಾ­ಲಯ

ಕನ್ನಡ ಮಾಧ್ಯಮ ವಿದ್ಯಾ­ರ್ಥಿ­ಗಳಿಗೆ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುವ ಉದ್ದೇಶದಿಂದ 2010-11ನೇ ಸಾಲಿನಲ್ಲಿ ರಾಜ್ಯದಾದ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಆದರ್ಶ ವಿದ್ಯಾ­ಲಯಗಳನ್ನು ಆರಂಭಿಸಲಾಗಿದೆ. ಈ ಶಾಲೆ­ಗಳಲ್ಲಿ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ನೀಡ­ಲಾಗುತ್ತಿದೆ. 6, 7, 8, 9 ಮತ್ತು 10ನೇ ತರಗತಿಗಳಿಗೆ ಪ್ರತಿ ವರ್ಗದಲ್ಲಿ 10 ವಿಭಾಗಗಳು ಇರಲಿವೆ.

ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ 74 ತಾಲ್ಲೂಕುಗಳಲ್ಲಿ, ತಾಲ್ಲೂಕಿಗೆ ಒಂದರಂತೆ ಆದರ್ಶ ವಿದ್ಯಾಲಯಗಳು ನಡೆಯುತ್ತಿವೆ. ಈ ಶಾಲೆಗಳು 6 ರಿಂದ 10 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಒಂದೊಂದು ಶಾಲೆಯಲ್ಲಿ 80 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬೇಕು. ಒಂದು ವೇಳೆ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದಲ್ಲಿ ಮತ್ತೊಂದು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

2018-19ನೇ ಸಾಲಿನಲ್ಲಿ 6ನೇ ತರಗತಿಯ ಮಕ್ಕಳ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುವುದು.

ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 11-03-2018

ಅರ್ಜಿ ಸಲ್ಲಿಸುವ ದಿನಾಂಕ: ದಿನಾಂಕ:27/1/2018 ರಿಂದ 17/2/2018ರವರೆಗೂ

ಪ್ರವೇಶ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮಕ್ಕಳು ಯಾವುದೇ ಶುಲ್ಕ ಪಾವತಿಸಬೇಕಾಗಿರುವುದಿಲ್ಲ.

ಪ್ರವೇಶ ಅರ್ಜಿಗಳನ್ನು ಆದರ್ಶ ವಿದ್ಯಾಲಯಗಳಲ್ಲಿ ಮತ್ತು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ, ಡಯಟ್ ಹಾಗೂ ಉಪ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.

ಎಸ್.ಸಿ/ಎಸ್.ಟಿ/ಒ.ಬಿ.ಸಿ/ಪ್ರವರ್ಗ-1 ರಲ್ಲಿ ಮೀಸಲಾತಿ ಬಯಸುವವರು ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಅರ್ಜಿಯ ಜೊತೆಯಲ್ಲಿ ಸಲ್ಲಿಸುವುದು.

ಅರ್ಜಿ ನಮೂನೆಗಳು schooleducation.kar.nic.in ವೆಬ್ಸೈಟ್ನಲ್ಲಿಯೂ ಸಹ ಲಭ್ಯವಿರುತ್ತದೆ.

English summary
Application is invited online for Adarsha Vidyalaya admission to class 6(non-residential English medium-state syllabus) for the year 2018-19.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia