ಬ್ಯಾಂಕ್ ಆಫ್ ಬರೋಡ-ಬ್ಯಾಂಕಿಂಗ್ ಸ್ಕೂಲ್ ಪ್ರವೇಶಾತಿ

Posted By:

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ಸುವರ್ಣಾವಕಾಶ ಕಲ್ಪಿಸಿದೆ. 400 ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 9 ತಿಂಗಳುಗಳ ತರಬೇತಿ ಜೊತೆಗೆ ಪ್ರಬೇಷನರಿ ಆಫೀಸರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು.

ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು ಮೇ 01, 2017 ರ ಒಳಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಬರೋಡ ಮಣೀಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಲ್ಲಿ 9 ತಿಂಗಳುಗಳ ಪೋಸ್ಟ್ ಗ್ರಾಜ್ಯುಯೇಟ್ ಸರ್ಟಿಫಿಕೇಟ್ ಇನ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ ಶಿಕ್ಷಣ ನೀಡಿ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ.

ಬ್ಯಾಂಕಿಂಗ್ ಸ್ಕೂಲ್ ಪ್ರವೇಶಾತಿ

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.55 (ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಶೇ.50) ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಕನಿಷ್ಠ 20 ರಿಂದ ಗರಿಷ್ಠ 28 ವರ್ಷ ಅಂದರೆ 1989 ರ ಏಪ್ರಿಲ್ 2 ರಿಂದ 1997 ರ ಏಪ್ರಿಲ್ 1 ರ ನಡುವೆ ಜನಿಸಿದವರಾಗಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್.ಸಿ/ಎಸ್.ಟಿ/ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ನೇಮಕಾತಿ ವಿಧಾನ

  • ಆನ್-ಲೈನ್ ಪರೀಕ್ಷೆ/ಗುಂಪುಚರ್ಚೆ (ಸಂವಹನ ಪರೀಕ್ಷೆ)/ ಸಂದರ್ಶನ/ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
  • ನೇಮಕಾತಿಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ಅನ್ವಯವಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿಯೊಂದಿಗೆ 9 ತಿಂಗಳುಗಳ ತರಬೇತಿ ಇರುತ್ತದೆ. ಇದರ ನಡುವೆ ತಿಂಗಳಿಗೆ ರೂ.2.500/- ಸ್ಟೈಫಂಡ್ ಕೂಡ ನೀಡುತ್ತಿದ್ದು, ವಿದ್ಯಾರ್ಥಿಗಳ ಕೋರ್ಸ್ ಫೀಸ್ ಅನ್ನು ಕೆಲಸಕ್ಕೆ ನೇಮಕವಾದ ನಂತರ ಮರುಪಾವತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಬ್ಯಾಂಕ್ ಆಫ್ ಬರೋಡ ವೆಬ್ಸೈಟ್ ನಲ್ಲಿ ನೀಡಿರುವ ಲಿಂಕ್ ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-05-2017
ಸ್ಪರ್ಧಾತ್ಮಕ ಪರೀಕ್ಷೆಗೆ ಕರೆ ಪತ್ರ ಪಡೆದುಕೊಳ್ಳುವ ದಿನಾಂಕ: 12-05-2017
ಪರೀಕ್ಷಾ ದಿನಾಂಕ : 27-05-2017

ಹೆಚ್ಚಿನ ವಿವರಗಳಿಗಾಗಿ www.bankofbaroda.co.in ವೆಬ್ಸೈಟ್ ಗಮನಿಸಿ

ವಿಳಾಸ

ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್
ಮಣೀಪಾಲ್ ಕೌಂಟಿ, ನಂ.65, ಸಿಂಗಸಂದ್ರ
ಹೊಸೂರ್ ರಸ್ತೆ, ಬೇಗೂರು,
ಬೆಂಗಳೂರು-560068

ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ಸಾಹಿ ಯುವಕರನ್ನು ನೇಮಕ ಮಾಡಲು ಬ್ಯಾಂಕ್ ಅಫ್ ಬರೋಡ ಈ ಶಾಲೆಯನ್ನು ಆರಂಭಿಸಿದೆ. ಪ್ರತಿ ವರ್ಷ ಮೂರು ಬ್ಯಾಚ್ ಗಳಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣ ತರಬೇತಿ ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿದೆ.

English summary
The course consists of -9- months on campus program, on completion of which the candidate would be awarded a Post Graduate Certificate in Banking & Finance and will be offered appointment in the Bank as Probationary Officer in Junior Management Grade / Scale-I.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia