ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ನಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಪ್ರವೇಶಾತಿ

Posted By:

ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮ ಅಂಡ್ ಆರ್ಥೋಪೆಡಿಕ್ಸ್ ನಲ್ಲಿ ಬಿಎಸ್.ಸಿ ನರ್ಸಿಂಗ್ ಮತ್ತು ಬಿ.ಎಸ್.ಸಿ ಪ್ಯಾರಾ ಮೆಡಿಕಲ್ಸ್ ಕೋರ್ಸಿಗೆ ಪ್ರವೇಶಾತಿ ಪ್ರಾರಂಭವಾಗಿದೆ.

2017-18ನೇ ಸಾಲಿನ ಬಿಎಸ್.ಸಿ ನರ್ಸಿಂಗ್ ಮತ್ತು ಬಿ.ಎಸ್.ಸಿ ಪ್ಯಾರಾ ಮೆಡಿಕಲ್ಸ್ ಕೋರ್ಸಿಗೆ ಪ್ರವೇಶ ನೀಡಲು ದ್ವಿತೀಯ ಪಿಯುಸಿ ಪೂರೈಸಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಪ್ರವೇಶಾತಿ

ವಿದ್ಯಾರ್ಹತೆ

 • ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯವನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ ಪೂರೈಸಿರಬೇಕು (ಪಿ ಸಿ ಎಂ ಬಿ).
 • ಎಸ್.ಸಿ/ಎಸ್.ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಶೇ.40

ವಯೋಮಿತಿ: ಕನಿಷ್ಠ 17 ವರ್ಷ

ಕೋರ್ಸ್ ವಿವರ

ಕೋರ್ಸ್ ಹೆಸರುಲಭ್ಯವಿರುವ ಸೀಟುಗಳು
ಬಿ.ಎಸ್ಸಿ ನರ್ಸಿಂಗ್48
ಬಿ.ಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ15
ಬಿ.ಎಸ್ಸಿ ಆಪರೇಷನ್ ಥಿಯೇಟರ್ ಟೆಕ್ನಾಲಜಿ10
ಬಿ.ಎಸ್ಸಿ. ಅನಸ್ಥೇಷಿಯಾ ಟಿಕ್ನಾಲಜಿ10
ಬಿ.ಎಸ್ಸಿ. ಮೆಡಿಕಲ್ ಲ್ಯಾಬರೇಟರಿ ಟೆಕ್ನಾಲಜಿ10

ಅರ್ಜಿ ಸಲ್ಲಿಕೆ

 • ಅರ್ಜಿಗಳನ್ನು ವಿಭಾಗದ ಮೂಲಕ ಪಡೆಯಬಹುದು ಅಥವಾ ಸಂಜಯ್ ಗಾಂಧಿ ಶಿಕ್ಷಣದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
 • ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
 • ಅರ್ಜಿಗಳನ್ನು ಸಂಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ವಿಭಾಗದ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿ ಶುಲ್ಕ

 • ಬಿಎಸ್.ಸಿ ನರ್ಸಿಂಗ್ ಶುಲ್ಕ ರೂ.500/-
 • ಬಿಎಸ್.ಸಿ ಪ್ಯಾರಾ ಮೆಡಿಕಲ್ಸ್ ಶುಲ್ಕ ರೂ.100/-
 • ಶುಲ್ಕವನ್ನು ನಗದು ಮೂಲಕ ಇಲ್ಲವೇ ಡಿ.ಡಿ ಮೂಲಕ ಸಲ್ಲಿಸಬಹುದಾಗಿದೆ.
 • ಡಿ.ಡಿ ಮೂಲಕ ಸಲ್ಲಿಸುವವರು The Director, SGITO, Bengaluru. ಇವರ ಹೆಸರಿಗೆ ಸಂದಾಯವಾಗುವಂತೆ ಸಲ್ಲಿಸುವುದು.

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-06-2017
 • ದಾಖಲಾತಿ ಮಾಡಿಕೊಳ್ಳುವ ದಿನಾಂಕ: 19-06-2017

ದಾಖಲಾತಿ ವೇಳೆ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆಗಳು

 • ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
 • ಪಿಯುಸಿ ಪ್ರಮಾಣ ಪತ್ರ
 • ಶಾಲಾ ವರ್ಗಾವಣೆ ಪತ್ರ
 • ವಲಸೆ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು,
ಸಂಜಯ್ ಗಾಂಧಿ ಕಾಲೇಜ್ ಆಫ್ ನರ್ಸಿಂಗ್
ಭೈರಸಂದ್ರ, ಬೆಂಗಳೂರು-560011

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.sgito.org ಗಮನಿಸಿ

English summary
Sanjay Gandhi College of Nursing invited applications to admissions for B.Sc.Nursing and B.Sc Paramedical courses
Please Wait while comments are loading...