ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆ ಪ್ರವೇಶಾತಿ

Posted By:

2017 -18 ಸಾಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು

ಕರ್ನಾಟಕದ ಬಳ್ಳಾರಿ, ಬಾಗಲಕೋಟೆ, ಭದ್ರಾವತಿ, ಗುಲ್ಬರ್ಗಾ,ಮಂಗಳುರು, ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳಿವೆ.

ತಾಂತ್ರಿಕ ಶಿಕ್ಷಣ ಶಾಲೆ ಪ್ರವೇಶಾತಿ

ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳ ವೈಶಿಷ್ಟ್ಯಗಳು

ಪ್ರೌಢಶಾಲೆಗಳಲ್ಲಿ ಬೋಧಿಸಲಾಗುವ ವಿಷಯಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ ಬೋಧಿಸಲಾಗುತ್ತದೆ.

  • ತಾಂತ್ರಿಕ ವಿಷಯಗಳು
  • ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
  • ಇಂಜಿನಿಯರಿಂಗ್ ಡ್ರಾಯಿಂಗ್
  • ಕಾರ್ಪೆಂಟ್ರಿ, ಫಿಟ್ಟಿಂಗ್ ಅಂಡ್ ಮೆಷಿನ್ ಶಾಪ್
  • ಎಲೆಕ್ಟ್ರಿಕಲ್ ವೈರಿಂಗ್ ಅಂಡ್ ಫಿಟ್ಟಿಂಗ್

ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳಿಗಾಗಿಯೇ ಡಿಪ್ಲೊಮಾ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೀಸಲಾತಿ ದೊರೆಯಲಿದೆ. ಈ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗಕ್ಕೂ ಅರ್ಹರಾಗಿರುತ್ತಾರೆ.

ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ

ಸಾಮಾನ್ಯ ವಿಷಯಗಳನ್ನು ಕನ್ನಡದಲ್ಲೂ ಹಾಗೂ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಬೋಧಿಸಲಾಗುವುದು.

ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.50/- ರಂತೆ ವ್ಯಾಸಂಗ ವೇತನ ನೀಡಲಾಗುವುದು.

ಪ್ರವೇಶಕ್ಕಾಗಿ ಶಿಕ್ಷಣಾರ್ಹತೆ

ಅಭ್ಯರ್ಥಿಯು ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ, ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಪ್ರವೇಶಕ್ಕಾಗಿ ಇತರೆ ಅರ್ಹತೆಗಳು

  • ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
  • ಅರ್ಜಿ ಸ್ವೀಕರಿಸುವ ಹಿಂದಿನ ದಿನಾಂಕಕ್ಕೆ ಅಭ್ಯರ್ಥಿಯು ಕರ್ನಾಟಕದ ಯಾವುದೇ ಅಂಗೀಕೃತ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನಿಷ್ಠ 5 ವರ್ಷಗಳ ವ್ಯಾಸಂಗ ಮಾಡಿರಬೇಕು.

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಯನ್ನು ದಿನಾಂಕ 17-04-2017 ರಿಂದ ದಿನಾಂಕ 18-05-2017 ರವರೆಗೆ ಆಯಾ ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಯ ಪ್ರಿನ್ಸಿಪಾಲರಿಂದ ಪಡೆಯಬಹುದಾಗಿದೆ.

ಅರ್ಜಿ ಮತ್ತು ನೋಂದಣಿ ಶುಲ್ಕ

  • ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.5/-
  • ಎಸ್.ಸಿ/ಎಸ್.ಟಿ ಮತ್ತು ವರ್ಗ-1ರ ಅಭ್ಯರ್ಥಿಗಳಿಗೆ ರೂ.1/-
  • ಸಂಬಂಧಿಸಿದ ಶುಲ್ಕವನ್ನು ನಗದಾಗಿ ಪಾವತಿ ಮಾಡಿ ಅಥವಾ ಪ್ರಿನ್ಸಿಪಾಲರ ಹೆಸರಿಗೆ ಬರೆದ ಐಪಿಓ ಸಲ್ಲಿಸಿ ಅರ್ಜಿಗಳನ್ನು ಪಡೆಯಬಹುದು. ಅಂಚೆ ಮೂಲಕ ಅರ್ಜಿ ಬೇಕಾದಲ್ಲಿ ನಿಗಧಿತ ಶುಲ್ಕವನ್ನು ಐಪಿಓ 30 ಕ್ಷ 23 ಸೆ.ಮೀ ಅಳತೆಯ ಸ್ವ-ವಿಳಾಸವಿರುವ ಕವರನ್ನು ಕಳುಹಿಸಬೇಕು ಹಾಗೂ ಕವರಿನ ಮೇಲೆ ಅವಶ್ಯಕವಾದ ಸ್ಟ್ಯಾಂಪ್ ಲಗತ್ತಿಸಬೇಕು.

ಪೂರ್ತಿಯಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ಅವಶ್ಯಕ ಪ್ರಮಾಣ ಪತ್ರಗಳೊಂದಿಗೆ ಸಂಬಂಧಪಟ್ಟ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರಿಗೆ ದಿನಾಂಕ 18-05-2017 ಸಂಜೆ 5:30 ರ ಒಳಗಾಗಿ ತಲುಪಿಸತಕ್ಕದ್ದು.

ಹೆಚ್ಚಿನ ವಿವಿರಗಳನ್ನು ಸಂಬಂಧಿಸಿದ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಯ ಪ್ರಿನ್ಸಿಪಾಲರಿಂದ ಪಡೆಯತಕ್ಕದ್ದು.

English summary
admissions open for class VIII in government JTU, candidates can apply before 18th may

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia