ಬನಾರಸ್ ಹಿಂದೂ ವಿಶ್ವವಿದ್ಯಾಲಯವು 2017 -18 ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By: Vinaykumar
BrahMos missile to go hypersonic in 10 years | Oneindia News

ಬನಾರಸ್ ಹಿಂದೂ ವಿಶ್ವವಿದ್ಯಾಲಯವು 2017 -18 ನೇ ಸಾಲಿನ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಇನ್ನಿತರ ಕೋರ್ಸ್ ಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿಶ್ವವಿದ್ಯಾಲಯ ಪ್ರವೇಶ ಬಯಸುವ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ದಾಖಲು ಮಾಡಿಕೊಳ್ಳಲಾಗುವುದು.

ಆನ್ಲೈನ್ ಮೂಲಕ ಅರ್ಜಿ

ಬನಾರಸ್ ಹಿಂದು ವಿಶ್ವವಿದ್ಯಾಲಯದ ಪರಿಚಯ

ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬನಾರಸ್ ವಿಶ್ವವಿದ್ಯಾಲಯವು ಶಿಕ್ಷಣ ಕಾಶಿ ಎಂದೇ ಗುರುರುತಿಸಿಕೊಂಡಿದೆ. ಇದು ಕೇಂದ್ರೀಯ ವಿಶ್ವವಿದ್ಯಾಲವಾಗಿದ್ದು ಅತಿ ದೊಡ್ಡ ಕ್ಯಾಂಪಸ್ ಹೊಂದಿದೆ. ವಾರಣಾಸಿಯಲ್ಲಿರುವ ಈ ವಿ ವಿ ಯು ತನ್ನ ಕ್ಯಾಂಪಸ್‌ನಲ್ಲಿ ಸುಮಾರು 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವುದರೊಂದಿಗೆ ಏಷಿಯಾದಲ್ಲಿಯೇ ಅತಿ ದೊಡ್ಡ ವಸತಿ ವಿಶ್ವವಿದ್ಯಾನಿಲಯವಾಗಿದೆ.

ಬನಾರಸ್ ವಿಶ್ವವಿದ್ಯಾಲಯವು 1916 ರಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯಾರಿಂದ ಸ್ಥಾಪಿತವಾಯಿತು. ಬನಾರಸ್ ವಿಶ್ವವಿದ್ಯಾಲಯವು ಅತಿ ದೊಡ್ಡ ಕ್ಯಾಂಪಸ್ ಹೊಂದಿದ್ದು ಮುಖ್ಯ ಕ್ಯಾಂಪಸ್ ವಾರಣಾಸಿಯಲ್ಲಿದೆ. ಸುಮಾರು 1300 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಮಿರ್ಜಾಪುರ್ ನಗರದ ಹತ್ತಿರದ ಬರ್ಕಾಚಾದಲ್ಲಿ 2760 ಎಕರೆಯ ದೊಡ್ಡ ಕೃಷಿ ವಿಜ್ಞಾನ ಕೇಂದ್ರ ಹೊಂದಿದೆ. ಇದು 6 ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದ್ದು 140 ಬೋಧಕ ವಿಭಾಗಗಳನ್ನು ಹಾಗೂ 75 ಕ್ಕೂ ಹೆಚ್ಚು ಯುವಕ ಹಾಗೂ ಯುವತಿಯರಿಗಾಗಿ ಹಾಸ್ಟೆಲ್‌ಗಳನ್ನು ಹೊಂದಿದೆ. ದೇಶ ವಿದೇಶಗಳ ಎಲ್ಲ ವಿದ್ಯಾರ್ಥಿಗಳನ್ನು ಸೇರಿ ವಿಶ್ವವಿದ್ಯಾನಿಲಯದ ಒಟ್ಟು ದಾಖಲಾತಿಯ ಸಂಖ್ಯೆ ಸುಮಾರು 30000 ಕ್ಕಿಂತಲೂ ಹೆಚ್ಚಾಗಿದೆ.

ಇಂಜಿನಿಯರಿಂಗ್ (ಐಟಿ-ಬಿಎಚ್‌ಯು), ವಿಜ್ಞಾನ, ಭಾಷಾಧ್ಯಯನ, ಪತ್ರಿಕೋದ್ಯಮ & ಸಮೂಹ ಸಂವಹನ, ಕಾನೂನೂ ಮತ್ತು ವೈದ್ಯಕೀಯ (ಐಎಮ್‌ಎಸ್-ಬಿಎಚ್‌ಯು), ವ್ಯವಸ್ಥಾಪನೆ ಅಧ್ಯಯನದ ಬೋಧಕವರ್ಗ, ಇವುಗಳು ಭಾರತದಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿವೆ. ಇದರಲ್ಲಿ ಐಟಿ-ಬಿಎಚ್‍ಯು ಭಾರತದಲ್ಲಿ ಉತ್ತಮ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವೆಲ್ಲವುಗಳ ಜೊತೆಯಲ್ಲಿ ಈ ವಿಶ್ವವಿದ್ಯಾನಿಲಯದ ಫ್ರೆಂಚ್ ಅಧ್ಯಯನ ವಿಭಾಗವು ಚಿರಪರಿಚಿತವಾಗಿದೆ, ಮತ್ತು ಭಾರತದುದ್ದಕ್ಕೂ ವಿದ್ಯಾರ್ಥಿಗಳನ್ನು ಅದರ ಡಿಪ್ಲೊಮಾ ಕೋರ್ಸುಗಳಿಂದ ಆಕರ್ಷಿಸುತ್ತಿದೆ.

ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳು

ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸೈನ್ಸ್
ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಅಂಡ್ sustainable ಡೆವಲಪ್ಮೆಂಟ್
ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್

ಸೌಲಭ್ಯಗಳು

೧೬ ಉಪನ್ಯಾಸಕ ಸಮೂಹ
೧೪೦ ಬೋಧಕ ವಿಭಾಗಗಳು
ಮಹಿಳಾ ಮಹಾವಿದ್ಯಾಲಯ
೨ ಇಂಟೆರ್ ಡಿಸಿಪ್ಲಿನರಿ ಶಾಲೆಗಳು

ಅರ್ಜಿ ಸಲ್ಲಿಸುವ ದಿನಾಂಕ

ಫೆಬ್ರವರಿ 02 , 2017 ರಿಂದ ಮಾರ್ಚ್ 04 , 2017

ಅರ್ಜಿ ಸಲ್ಲಿಸುವ ವಿಧಾನ

1. ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ವಿಳಾಸ bhuonline.in ಗೆ ಭೇಟಿ ನೀಡಿ.
2. ವೆಬ್ ಸೈಟ್ ಮೇಲ್ಭಾಗದಲ್ಲಿ ಕಾಣುವ "Apply for admission" ಎಂಬಲ್ಲಿ ಕ್ಲಿಕ್ ಮಾಡಿ.
3. ನೀವು ಬಯಸುವ ಕೋರ್ಸ್ ಆಯ್ಕೆ ಮಾಡಿ ನಂತರ "Online application" ಬಟನ್ ಕ್ಲಿಕ್ ಮಾಡಿ.
4. ವೆಬ್ ಸೈಟ್ ನಲ್ಲಿ ಕೇಳಿರುವ ಮಾಹಿತಿಯನ್ನು ಪೂರ್ಣವಾಗಿ ಓದಿ ನೋಂದಾಯಿಸಿದ ನಂತರ ಅರ್ಜಿ ಭರ್ತಿ ಮಾಡಿ "submit" ಮಾಡಿ
5. ಅರ್ಜಿಯನ್ನು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

English summary
The online application process for Banaras Hindu University (BHU) has started

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia