ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Posted By:

2017-18ನೇ ಸಾಲಿನಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಜ್ಞಾನ ಸಾಗರ ಆವರಣ ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ 5 ವರ್ಷಗಳ ಸಂಯೋಜಿತ ಎಂ.ಬಿ.ಎ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರವೇಶಾತಿಯನ್ನು ವಿಶ್ವವಿದ್ಯಾಲಯ ನಡೆಸುವ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಿಕೊಳ್ಳಲಾಗುವುದು. ಆಸಕ್ತ  ಅಭ್ಯರ್ಥಿಗಳು ಜೂನ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಕಾಲೇಜು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.

ಸಂಯೋಜಿತ ಎಂ.ಬಿ.ಎ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-06-2017
ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ:05-07-2017 (ಬೆಳಗ್ಗೆ 11.00 ರಿಂದ 12.00 ರವರೆಗೆ)
ವೈಯಕ್ತಿಕ ಸಂದರ್ಶನದ ದಿನಾಂಕ: 05-07-2017 (ಮಧ್ಯಾಹ್ನ 02.00 ರಿಂದ 4.00 ರವರೆಗೆ)
ಫಲಿತಾಂಶ ಪ್ರಕಟಿಸುವ ದಿನಾಂಕ:06-07-2017
ಕೌನ್ಸಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ:07-07-2017

ಅರ್ಹತೆ

ಪ್ರವೇಶ ಪರೀಕ್ಷೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಹರಿರುತ್ತಾರೆ.

ಅರ್ಜಿ ಮತ್ತು ಪ್ರವೇಶ ಪರೀಕ್ಷೆಗಳನ್ನೊಳಗೊಂಡ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.200/-
  • ಪ.ಜಾ/ಪ.ಪಂ/ಪ್ರ-1 ವರ್ಗದವರಿಗೆ ರೂ.100/-
  • ಶುಲ್ಕವನ್ನು ಅರ್ಜಿಯ ಜೊತೆಗೆ ಚಲನ್ ಹಣಕಾಸು ಅಧಿಕಾರಿಗಳು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರ ಹೆಸರಿಗೆ ಡಿ.ಡಿ ಪಡೆದು ಲಗತ್ತಿಸಬೇಕು

ಸೂಚನೆ

  • ಅರ್ಜಿಯ ಜೊತೆಗೆ ವಿದ್ಯಾರ್ಥಿಯ ಶೈಕ್ಷಣಿಕ ಸಂಬಂಧಪಟ್ಟ ಎಲ್ಲಾ ಅಂಕಪಟ್ಟಿಗಳು ಮತ್ತು ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು
  • ಪ್ರವೇಶಾತಿಯನ್ನು ಮೆರಿಟ್ ಕಂ ರೋಸ್ಟರ್ ಅನುಗುಣವಾಗಿ ಹಾಗೂ ಸರ್ಕಾರ ಮೀಸಲಾತಿಯನ್ವಯ ನಡೆಸಲಾಗುವುದು.
  • ಪ್ರವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶದ ಶುಲ್ಕವನ್ನು ಕೌನ್ಸಲಿಂಗ್ ದಿನದಂದು ಸ್ಥಳದಲ್ಲಿಯೇ ಕಡ್ಡಾಯವಾಗಿ ತುಂಬಬೇಕು

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ vskub.ac.in ನೋಡುವುದು.

English summary
Online applications are invited for five years integrated mba course in vijayanagara sri krishnadevaraya university.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia