ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ನವೋದಯ ವಿದ್ಯಾಲಯ ಸಮಿತಿ ವತಿಯಿಂದ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ನಡೆಯಲಿದ್ದು 2018ನೇ ಸಾಲಿಗೆ 6ನೇ ತರಗತಿಗೆ ಪ್ರತಿಭಾವಂತ ಬಾಲಕ ಬಾಲಕಿಯರ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರವೇಶ ಪರೀಕ್ಷೆ ಫೆ.10, 2018 ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು 25-11-2017 ಕೊನೆಯ ದಿನವಾಗಿರುತ್ತದೆ.
ಲಭ್ಯವಿರುವ ಸೌಲಭ್ಯಗಳು
ಬಾಲಕ ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಅನುಭವಿ ಮತ್ತು ನುರಿತ ಸಿಬ್ಬಂದಿ, ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನ, ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಸಹಪಠ್ಯ ಚಟುವಟಿಕೆ, ಕ್ರೀಡೆ ಮತ್ತು ಆಟೋಟ, ಯೋಗ ತರಬೇತಿಗೆ ವಿಶೇಷ ಪ್ರೋತ್ಸಾಹ, ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ ಮತ್ತು ಲೇಖನ ಸಾಮಾಗ್ರಿ ಇತ್ಯಾದಿ, ಅಂತರ್ಜಾಲ, ವಿಸ್ಯಾಟ್, ಎಜುಸ್ಯಾಟ್ ಸೌಲಭ್ಯ.
ಸೈನಿಕ ಶಾಲೆ ಕೊಡಗು: 6 ಮತ್ತು 9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಅರ್ಹತೆ
ಅರ್ಜಿ ತುಂಬುವ ವಿದ್ಯಾರ್ಥಿಗಳು 2017-18 ನೇ ಸಾಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿರಬೇಕು. ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 3,4 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿರಬೇಕು.
ಪ್ರವೇಶ ಪಡೆಯುವ ಅಭ್ಯರ್ಥಿಯುನ01-05-2005 ಕ್ಕಿಂತ ಮೊದಲು ಮತ್ತು 30-04-2009 ರ ನಂತರ ಜನಿಸಿರಬಾರದು
ಯಾವುದೇ ಕಾರಣಕ್ಕೂ ಎರಡನೇ ಸಲ ಆಯ್ಕೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.
ಬೆಂಗಳೂರು ವಿಶ್ವವಿದ್ಯಾಲಯ ದೂರಶಿಕ್ಷಣದ ವಿವಿಧ ಕೋರ್ಸುಗಳ ದಾಖಲಾತಿ
ಮೀಸಲಾತಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಮತ್ತು ನಗರದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಕನಿಷ್ಠ ಶೇ.15 ರಷ್ಟು ಪ.ಜಾ ಮತ್ತು ಶೇ.7.5 ರಷ್ಟು ಪ.ಪಂ ಮತ್ತು ಶೇ 3 ರಷ್ಟು ವಿಕಲ ಚೇತನ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಶೇ.33 ರಷ್ಟು ಸ್ಥಾನಗಳನ್ನು ಬಾಲಕಿಯರಿಗೆ ಕಾಯ್ದಿರಸಲಾಗಿದೆ.
ಆಯ್ಕೆ ಪರೀಕ್ಷೆಯ ಸ್ವರೂಪ
ಪರೀಕ್ಷೆಯು ವಸ್ತಿನಿಷ್ಠ ಮಾದರಿಯ 2 ಗಂಟೆಯ 100 ಅಂಕಗಳನ್ನು ಒಳಗೊಂಡ ಪತ್ರಿಕೆಯಿರುತ್ತದೆ. ಇದರಲ್ಲಿ 50 ಪ್ರತಿಶತ ಮಾನಸಿಕ ಸಾಮರ್ಥ್ಯ, 25 ಪ್ರತಿಶತ ಗಣಿತ ಮತ್ತು 25 ಪ್ರತಿಶತ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ.
ಈ ಪರೀಕ್ಷೆಯ ಮಾಧ್ಯಮವು ವಿದ್ಯಾರ್ಥಿಯು ಓದುತ್ತಿರುವ 5ನೇ ತರಗತಿಯ ಭಾಷಾ ಮಾಧ್ಯಮವಾಗಿರುತ್ತದೆ.
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಅರ್ಜಿಯನ್ನೊಳಗೊಂಡ ಮಾಹಿತಿ ಪುಸ್ತಿಕೆಯನ್ನು ಉಚಿತವಾಗಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಅಥವಾ nvshq.org ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಡೌನ್ಲೋಡ್ ಮಾಡಿಕೊಂಡ ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡಿ ವಿದ್ಯಾಲಯವಿರುವ ಆಯಾ ಜಿಲ್ಲೆಯ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 25-11-2017 ರೊಳಗೆ ಸಲ್ಲಿಸತಕ್ಕದ್ದು.