ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶ ಪ್ರಕಟ

Posted By:

ಗುಲ್ಬರ್ಗಾ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ ಬೀದರ್, ರಾಯಚೂರು, ಬಸವಕಲ್ಯಾಣ ಹಾಗೂ ಸಂಲಗ್ನತೆ ಹೊಂದಿರುವ ಸರ್ಕಾರಿ ಹಾಗೂ ಪದವಿ ಮಹಾವಿದ್ಯಾಲಯಗಳಲ್ಲಿ 2017-18ನೇ ಸಾಲಿಗಾಗಿ ವಿವಿಧ ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಪ್ರವೇಶಾತಿ ನಡೆಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಲಭ್ಯವಿರುವ ಸ್ನಾತಕೋತ್ತರ ಕೋರ್ಸುಗಳು

ಎಂ.ಎ

ಕನ್ನಡ, ಕನ್ನಡ ಮತ್ತು ಜಾನಪದ (ಶರಣ ಸಾಹಿತ್ಯ), ಇಂಗ್ಲಿಷ್, ಹಿಂದಿ, ಅರ್ಥಶಾಸ್ತ್ರ, ಇತಿಹಾಸ, ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ರಾಜ್ಯಶಾಸ್ತ್ರ, ಸಮಾಜಕಾರ್ಯ, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ.

ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರವೇಶಾತಿ  ಪ್ರಾರಂಭ

ಎಂ.ಎಸ್ಸಿ

ಅನ್ವಯಿಕ ವಿದ್ಯುದ್ವಿಜ್ಞಾನ, ಜೈವಿಕ ತಂತ್ರಜ್ಞಾನ, ಜೀವರಸಾಯನಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ, ಗಣಕವಿಜ್ಞಾನ ಗಣಿತ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ.

ಎಂ.ಕಾಂ: ಮಾಸ್ಟರ್ ಆಫ್ ಕಾಮರ್ಸ್, ಮಾಸ್ಟರ್ ಆಫ್ ಕಾಮರ್ಸ್ (ಫೈನಾನ್ಸಿಯಲ್)

ಎಂ.ಎಡ್: ಶಿಕ್ಷಣ

ಎಂ.ಪಿ.ಎಡ್: ದೈಹಿಕ ಶಿಕ್ಷಣ,

ಬಿ.ಪಿಎಡ್: ದೈಹಿಕ ಶಿಕ್ಷಣ

ಸಾಮಾನ್ಯ ಪ್ರವೇಶ ಪರೀಕ್ಷೆ ರಹಿತ ಪ್ರವೇಶಾತಿಗಾಗಿ ಲಭ್ಯವಿರುವ ಸ್ನಾತಕೋತ್ತರ ಮತ್ರು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು

ಎಂ.ಎ: ಮರಾಠಿ, ಸಂಸ್ಕೃತ, ಉರ್ದು, ಪರ್ಶಿಯನ್, ವಿಜ್ಯುವಲ್ ಆರ್ಟ್ (ಪೇಂಟಿಂಗ್) (ಸ್ಕಲ್ಪಚರ್), ಸಂಗೀತ ಫೈನ್ ಆರ್ಟ್, ಮನೋವಿಜ್ಞಾನ
ಎಂ.ಎಲ್.ಎಂ: ಕಮರ್ಷಿಯಲ್ ಲಾ, ಭಾರತೀಯ ನ್ಯಾಯದರ್ಶನ ಮತ್ತು ರಾಜಧರ್ಮ
ಎಂ.ಟಿ.ಎ: ಟೂರಿಸಂ ಅಡ್ಮಿನಿಸ್ಟ್ರೇಷನ್
ಪಿ.ಜಿ.ಡಿಪ್ಲೊಮಾ: ಪಿಜಿ ಡಿಪ್ಲೊಮಾ ಕೋರ್ಸುಗಳು

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು.
ಅರ್ಜಿ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಗಳ ಪ್ರಿಂಟ್ ಪಡೆದು ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಗೆ ನಿಗದಿತ ದಿನಾಂಕದೊಳಗೆ ತಲುಪಿಸತಕ್ಕದ್ದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

  • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2017
  • ಅನ್-ಲೈನ್ ಮೂಲಕ ಅರ್ಜಿ ಶುಲ್ಕವನ್ನು ಬ್ಯಾಂಕಿನಲ್ಲಿ ಪಾವತಿಸಲು ಕೊನೆಯ ದಿನಾಂಕ: 01-07-2017
  • ಆನ್-ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸುವ ಕೊನೆಯ ದಿನಾಂಕ: 03-07-2017
  • ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯುವ ದಿನಾಂಕ: 11-07-2017 ರಿಂದ 17-07-2017

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ gug.ac.in ಗಮನಿಸಿ

English summary
Applications are invited for the following p.G./p.G. Diploma courses offered by gulbarga Univelsity, kalaburagi in its Main Campus, for the academic year 2017-l8.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia