ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By:

ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ಅಭ್ಯರ್ಥಿಗಳು ಮೇ 28 ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರಥಮ ಪಿಯುಸಿ ಸಂಯೋಜನೆಗಳಾದ ಪಿಸಿಎಂಬಿ- ಪಿಸಿಎಂಸಿಗಳಿಗೆ ತಲಾ 40 ಸೀಟುಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸದರಿ ಕಾಲೇಜಿನಲ್ಲಿ ಉಚಿತವಾಗಿ ಊಟ, ವಸತಿ, ಪುಸ್ತಕ, ಸಮವಸ್ತ್ರ ಹಾಗೂ ಇತರ ಸಾಮಾಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಲಾಗುತ್ತದೆ.

ಆದಾಯ ಮಿತಿ

 • ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1 ರ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ₹ 2.5 ಲಕ್ಷ
 • ಇತರೆ ಹಿಂದುಳಿದ ವರ್ಗದ ಆದಾಯದ ಮಿತಿ ₹ 1 ಲಕ್ಷದ ಒಳಗಿರಬೇಕು.

ಪಿಯು ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ

  ವಿದ್ಯಾರ್ಥಿಗಳ ಆಯ್ಕೆ

  ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ವರ್ಗವಾರು, ಲಿಂಗವಾರು ಮತ್ತು ಸಂಯೋಜನೆವಾರು ಮೆರಿಟ್ ರ್ಯಾಂಕಿಂಗ್ ಪಟ್ಟಿಯನ್ನು ತಯಾರಿಸಿ ಆಯ್ಕೆ ಮಾಡಲಾಗುವುದು.

  ಸೂಚನೆ

  • ಪ್ರಥಮ ಪಿಯು ಪಿಸಿಎಂಬಿ ವಿಷಯ ಸಂಯೋಜನೆಗೆ 40 ಸೀಟುಗಳು ಹಾಗೂ ಪಿಸಿಎಂಸಿ ವಿಷಯ ಸಂಯೋಜನೆಗೆ 40 ಸೀಟುಗಳು ಲಭ್ಯವಿರುತ್ತವೆ.
  • ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇರುತ್ತದೆ.

  ಅರ್ಜಿ ಸಲ್ಲಿಕೆ

  ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಉಪನಿರ್ದೇಶಕರಕಛೇರಿ ಸಮಾಜಕಲ್ಯಾಣ ಇಲಾಖೆ, ಮೊರಾರ್ಜಿದೇಸಾಯಿ ಪದವಿಪೂರ್ವ ವಸತಿ ವಿಜ್ಞಾನಕಾಲೇಜು ಇವರಿಂದ ಪಡೆದು. ಭರ್ತಿ ಮಾಡಿದ ಅರ್ಜಿಗಳನ್ನು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡ ಒಂದು ವಾರದ ಒಳಗಾಗಿ, ಮೊರಾರ್ಜಿದೇಸಾಯಿ ಪದವಿಪೂರ್ವ ವಸತಿ ವಿಜ್ಞಾನಕಾಲೇಜಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆಯ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರನ್ನು ಸಂಪರ್ಕಿಸಲು ಕೋರಲಾಗಿದೆ.

  ಕಾಲೇಜಿನಲ್ಲಿ ನೊಂದಣಿ ಮಾಡಿಕೊಳ್ಳುವಾಗ ವಿದ್ಯಾರ್ಥಿಯು 10 ನೇ ತರಗತಿಯಲ್ಲಿ ತೇರ್ಗಡೆಯಾದ ಬಗ್ಗೆ ಮೂಲ ಅಂಕಪಟ್ಟಿ ಮತ್ತು ಮೂಲ ವರ್ಗಾವಣೆ ಪತ್ರವನ್ನು ಕಾಲೇಜಿನ ಪ್ರವೇಶಕ್ಕೆ ಹಾಜರಾಗುವಾಗ ಪ್ರಾಂಶುಪಾಲರಿಗೆ ತಪ್ಪದೇ ಸಲ್ಲಿಸಬೇಕು. ಇದರ ಜೊತೆಗೆ 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ದಾಖಲಾತಿ ವೇಳೆ ಕಾಲೇಜಿನಲ್ಲಿ ಸಲ್ಲಿಸಬೇಕು.

  ಆಯ್ಕೆಯಾದ ವಿದ್ಯಾರ್ಥಿಗಳು ದಿನಾಂಕ 01-06-2017 ರಿಂದ 07-06-2018 ರ ದಿನಾಂಕಗಳಲ್ಲಿ ಕಾಲೇಜುಗಳಲ್ಲಿ ನೊಂದಣಿ ಮಾಡಿಕೊಳ್ಳಲು ತಿಳಿಸಬೇಕು.

  ಕೊನೆಯ ದಿನಾಂಕ

  ಪ್ರವೇಶ ಬಯಸುವ ವಿದ್ಯಾರ್ಥಿಗಳು ಮೇ 28ರೊಳಗೆ ಆಯಾ ಜಿಲ್ಲಾ ಕಾಲೇಜುಗಳಲ್ಲಿ ಸಲ್ಲಿಸಬೇಕು.

  ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಇವರನ್ನು ಸಂಪರ್ಕಿಸಿ ಅಥವಾ ಇಲಾಖೆ ವೆಬ್ಸೈಟ್ ಗಮನಿಸಿ

  English summary
  Applications have been invited for admission to first year PUC at Morarji Desai residential pu college

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia