ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಬಿ.ಟೆಕ್ ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By:

ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಸೇಲಂ ಇವರು 2017 -18 ನೇ ಸಾಲಿನ ಶೈಕ್ಷಣಿಕ ವರ್ಷದ ಬಿ.ಟೆಕ್ (ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ) ಶಿಕ್ಷಣ ಕಾರ್ಯಕ್ರಮಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದಾರೆ.

ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಪುದುಚೆರಿ ಮತ್ತು ಗೋವಾ ಅಭ್ಯರ್ಥಿಗಳಿಂದ ಮೊದಲನೇ ವರ್ಷ ಮತ್ತು ಲ್ಯಾಟರಲ್ ಎಂಟ್ರಿ (ನೇರ 2ನೇ ವರ್ಷ) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಬಿ.ಟೆಕ್-4 ವರ್ಷಗಳ ಪದವಿ ಕಾರ್ಯಕ್ರಮದ ಮೊದಲನೇ ವರ್ಷಕ್ಕೆ ಪ್ರವೇಶ

ಅರ್ಹತೆ

ಹೆಚ್ಎಸ್ಸಿ (ಅಕಾಡಿಮಿಕ್) ಉತ್ತೀರ್ಣ ಅಥವಾ ತತ್ಸಮಾನ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳು ಸೇರಿದಂತೆ ಸರಾಸರಿ ಒಟ್ಟು ಕನಿಷ್ಠ 50% ಅಂಕಗಳನ್ನು ಪಡೆದಿರತಕ್ಕದ್ದು.

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಬಿ.ಟೆಕ್

ಸೀಟ್ ಹಂಚಿಕೆ

ಕರ್ನಾಟಕ 10, ಆಂಧ್ರಪ್ರದೇಶ 07, ಕೇರಳ 10, ಪುದುಚೆರಿ 02, ಗೋವಾ 01

ಆಯ್ಕೆ ಪ್ರಕ್ರಿಯೆ

ಅರ್ಹತಾ ಪರೀಕ್ಷೆಯಲ್ಲಿನ ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ

ಗರಿಷ್ಠ ವಯೋಮಿತಿ 25 ವರ್ಷಗಳು

4 ವರ್ಷಗಳ ಬಿ.ಟೆಕ್ (ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ) ಲ್ಯಾಟೆರಲ್ ಎಂಟ್ರಿ (ನೇರ 2ನೇ ವರ್ಷ) ಪ್ರವೇಶ

ಅರ್ಹತೆ

ಕೈಮಗ್ಗ ತಂತ್ರಜ್ಞಾನ ಡಿಪ್ಲೊಮಾ/ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ/ಜವಳಿ ತಂತ್ರಜ್ಞಾನ/ಬಿ.ಎಸ್ಸಿಉತ್ತೀರ್ಣರಾಗಿರುವ ಅಭ್ಯರ್ಥಿಗಳು ಜೊತೆಗೆ ಬಿ.ಎಸ್ಸಿ ಹಂತದಲ್ಲಿ ಪೂರಕ ವಿಷಯವನ್ನಾಗಿ ಅಥವಾ +2 ಹಂತದಲ್ಲಿ ಗಣಿತ ವಿಷಯವನ್ನು ಓದಿರಬೇಕು ಅಥವಾ ತಮಿಳುನಾಡು ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ನಿಗದಿಪಡಿಸಿದ ಯಾವುದೇ ತತ್ಸಮಾನ ಡಿಪ್ಲೊಮಾ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕನಿಷ್ಠ ಅರ್ಹತಾ ಅಂಕಗಳು

ಡಿಪ್ಲೊಮಾ/ಡಿಗ್ರಿಯಲ್ಲಿ ಕನಿಷ್ಠ 55% ಸರಾಸರಿ ಅಂಗಳನ್ನು ಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಸೀಟು ಹಂಚಿಕೆ

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಗೋವಾ ಮತ್ತು ಪುದುಚೆರಿ ರಾಜ್ಯಗಳಾದ್ಯಂತ ಒಟ್ಟು 29 ಸೀಟುಗಳು ಲಭ್ಯವಿರುತ್ತವೆ.

ಆಯ್ಕೆ ಪ್ರಕ್ರಿಯೆ

ಡಿಪ್ಲೊಮಾ/ಡಿಗ್ರಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ 20-06-2017 ರೊಳಗೆ ಕಛೇರಿಯ ವಿಳಾಸಕ್ಕೆ ತಲುಪಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-06-2017

ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು,
ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ
ಚೌಕಘಾಟ್, ವಾರಣಾಸಿ-221002
ಅಥವಾ
ನಿರ್ದೇಶಕರು,
ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ
ಫೋಕ್ಸ್ ಕಾಂಪೌಂಡ್, ತಿಲ್ಲೈ ನಗರ
ಸೇಲಂ -636001
ಹೆಚ್ಚಿನ ಮಾಹಿತಿಗಾಗಿ: handlooms.nic.in ಗಮನಿಸಿ

English summary
Admission Notice for Post Diploma in Textile Processing by Indian Institute of Handloom Technology,

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia