ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಪ್ರವೇಶ ಪ್ರಕಟಣೆ

Posted By:

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಯುನಿವರ್ಸಿಟಿ ಪಬ್ಲಿಕ್ ಶಾಲೆಯ 2017 -18 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆ ಮತ್ತು ವರದಾ ವಸತಿ ನಿಲಯದ ಪ್ರವೇಶ ಅವಕಾಶ ಇರುತ್ತದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನದೇ ಆದ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಹೊಂದಿದ್ದು ಇದು 1964 ರಿಂದ ಶಾಲಾ ಶಿಕ್ಷಣ ಕಲ್ಪಿಸುತ್ತಿದೆ.

ಧಾರವಾಡ ವಿಶ್ವವಿದ್ಯಾಲಯದ ಪಬ್ಲಿಕ್ ಶಾಲೆಯಲ್ಲಿ 5 ರಿಂದ 10 ನೇ ತರಗತಿಯವರೆಗೆ ಪ್ರವೇಶವಿರುತ್ತದೆ. ಅಲ್ಲದೇ 8 ನೇ ತರಗತಿಯಿಂದ ಆಂಗ್ಲ ಮಾಧ್ಯಮವಿರುತ್ತದೆ. ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕೂಡ ನೀಡಲಾಗಿದೆ.

ಪಬ್ಲಿಕ್ ಸ್ಕೂಲ್ ಪ್ರವೇಶ ಪ್ರಕಟಣೆ

ಪ್ರವೇಶ ಪ್ರಕ್ರಿಯೆ

5 ಮತ್ತು 8 ನೇ ತರಗತಿಗಳಿಗೆ ಮಾತ್ರ 2017 -18 ನೇ ಶೈಕ್ಷಣಿಕ ವರ್ಷದಲ್ಲಿ ವಸತಿ ನಿಲಯಕ್ಕೆ ಪ್ರವೇಶ ಇರುತ್ತದೆ. ಪ್ರವೇಶ ಬಯಸುವವರಿಗೆ ಧಾರವಾಡ ಪಬ್ಲಿಕ್ ಶಾಲೆಯ ವತಿಯಿಂದ ಪ್ರವೇಶ ಪರೀಕ್ಷೆಯು ನಡೆಸಲಾಗುವುದು. ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಶಾಲೆ ಮತ್ತು ಹಾಸ್ಟೆಲ್ ಗಳ ಅವಕಾಶ ಕಲ್ಪಿಸಲಾಗುವುದು.

ಪ್ರಮುಖ ದಿನಾಂಕಗಳು

 • ಪ್ರವೇಶ ಅರ್ಜಿ ಫಾರ್ಮ್ ಗಳನ್ನು ದಿನಾಂಕ: 01-04-2017 ರಿಂದ ನೀಡಲಾಗುವುದು
 • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 10-05-2017 ಮಧ್ಯಾಹ್ನ 4 :00 ಗಂಟೆ ಒಳಗೆ
 • 5 ಮತ್ತು 8 ನೇ ತರಗತಿಗಳಿಗೆ ವಸತಿ ನಿಲಯದ ಪ್ರವೇಶ ಪಡೆಯುವ ಲಿಖಿತ ಪರೀಕ್ಷೆ ದಿನಾಂಕ 18-05-2017
 • ವರದಾ ವಸತಿ ನಿಲಯದ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 23-05-2017 ರಂದು ಪ್ರಕಟಿಸಲಗುವುದು
 • ವರದಾ ವಸತಿ ನಿಲಯದ ಲಿಖಿತ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಕೊನೆಯ ದಿನಾಂಕ 31-05-2017

ಅರ್ಜಿ ಶುಲ್ಕ

ಶಾಲಾ ಪ್ರವೇಶಕ್ಕೆ ರೂ.50 /- ಹಾಗೂ ವಸತಿ ನಿಲಯದ ಪ್ರವೇಶಕ್ಕೆ ರೂ.100 /- ಗಳನ್ನು ಚಲನ್ ಮುಖಾಂತರ ತುಂಬಿ ಅರ್ಜಿಯನ್ನು ಪಡೆಯಬಹುದು.

ಪ್ರವೇಶಕ್ಕೆ ಅವಶ್ಯಕವಾಗಿ ಲಗತ್ತಿಸಬೇಕಾದ ಪ್ರಮಾಣ ಪತ್ರಗಳು

 • ಹಿಂದಿನ ತರಗತಿಗಳ ಅಂಕಪಟ್ಟಿ
 • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
 • ವರ್ಗಾವಣೆ ಪ್ರಮಾಣ ಪತ್ರ
 • 2 ಇತ್ತೀಚಿನ ಸ್ಟ್ಯಾಂಪ್ ಸೈಜ್ ಭಾವಚಿತ್ರ
 • ವಾಸಸ್ಥಳದ ದಾಖಲಾತಿ ಪ್ರತಿ (ಆಧಾರ್ ಕಾರ್ಡ್/ರೇಶನ್ ಕಾರ್ಡ್/ಮತದಾರನ ಗುರುತಿನ ಚೀಟಿ)
 • ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಪ್ರತಿ

ವಿಶೇಷ ಸೂಚನೆ

ಪ್ರವೇಶದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಶಾಲೆಯ ಕಾರ್ಯಾಲಯದಲ್ಲಿ ವಿಚಾರಿಸಬಹುದು. ಮುಂದುವರೆದು ಮೇಲ್ಕಾಣಿಸಿದ ವಿಷಯದಲ್ಲಿ ಯಾವುದೇ ಬದಲಾವಣೆಯನ್ನು ಜಾರಿಗೆ ತರುವ ಹಕ್ಕನ್ನು ವಿಶ್ವವಿದ್ಯಾಲಯವು ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 0836 -2442373

English summary
admissions open for the academic year 2017-18 Dharwad University Public School

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia