ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ಪ್ರಾರಂಭ

Posted By: Vinaykumar

ದೂರ ಶಿಕ್ಷಣ ನಿರ್ದೇಶನಾಲಯ , ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯವು ಮುಂಬರುವು ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದೆ.
ಎಂ ಬಿ ಬಿ ಎಸ್, ಎಂ ಡಿ/ ಎಂ ಎಸ್, ಎಂ ಟೆಕ್, ಬಿ ಟೆಕ್ , ಎಂ ಬಿ ಎ, ಎಂ ಸಿ ಎ, ಬಿ ಬಿ ಎ . ಬಿ ಸಿ ಎ ಸೇರಿದಂತೆ ಹಲವು ಕೋರ್ಸ್ಗಳಿಗೆ ದಾಖಲಾತಿ ಪ್ರಾರಂಭಿಸಿದೆ.

ದೂರ ಶಿಕ್ಷಣ ಪ್ರವೇಶ ಪ್ರಕ್ರಿಯೆ

ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ

ಐಎಸ್‍ಓ 9001:2000 ಮಾನ್ಯತೆ ಪಡೆದಿರುವ ಸಿಕ್ಕಿಂನ ಎಸ್‍ಎಂಯು-ಡಿಇ ವಿಶ್ವವಿದ್ಯಾಲಯವು ಅನೇಕ ವಿಭಾಗಗಳಲ್ಲಿ ದೂರಶಿಕ್ಷಣ ವ್ಯವಸ್ಥೆ ಕಲ್ಪಿಸಿದೆ.
ಸಿಕ್ಕಿಂ ಸರ್ಕಾರ ಮತ್ತು ಮಣಿಪಾಲ್ ಶಿಕ್ಷಣದ ಸಹಯೋಗದಲ್ಲಿ ಈ ವಿಶ್ವವಿದ್ಯಾಲಯವು ನಿರ್ಮಾಣವಾಗಿದ್ದು ಸಿಕ್ಕಿಂ ಮಣಿಪಾಲ್ ದೂರಶಿಕ್ಷಣದಲ್ಲಿ ದೊರೆಯುವ ಎಲ್ಲಾ ಕೋರ್ಸ್‍ಗಳು ಡಿ.ಇ.ಸಿ ಇಂದ ಗುರುತಿಸಲ್ಪಟ್ಟಿದೆ.

ಶಿಕ್ಷಣ ವಲಯದಲ್ಲಿ ಪ್ರಗತಿ ಸಾಧಿಸಲು, ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ಪ್ರೋತ್ಸಾಹಿಸಲು, ಸಮುದಾಯ ಸೇವೆಯನ್ನು ಉತ್ತಮಗೊಳಿಸಿ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಹಾಗೂ ವಿಶ್ವವಿದ್ಯಾಲಯದ ಸ್ಥಿರವಾದ ಬೆಳವಣಿಗೆ ಕಾಪಾಡಿಕೊಳ್ಳುವ ಉದ್ದೇಶವನ್ನು ಸಿಕ್ಕಿಂ ಮಣಿಪಾಲ್ ವಿ ವಿ ಯು ಹೊಂದಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ತನ್ನ ಕೇಂದ್ರವನ್ನು ಹೊಂದಿರುವ ಸಿಕ್ಕಿಂ ಮಣಿಪಾಲ್ ವಿವಿಯು ಲಕ್ಷಾಂತರ ವಿದ್ಯಾರ್ಥಿಗಳಿಗೆ ದೂರಶಿಕ್ಷಣದ ಮೂಲಕ ವಿದ್ಯೆಯನ್ನು ನೀಡುತ್ತಿದೆ. ಸಿಕ್ಕಿಂ ಮಣಿಪಾಲ್ ವಿವಿಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ.

ಪ್ರವೇಶ ಪಡೆಯಲು ಬೇಕಾದ ಅರ್ಹತೆ

ಅಭ್ಯರ್ಥಿಯು 10 +2 ಅಥವಾ ಅದಕ್ಕೆ ಸಮಾನವಾದ/ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಹೊಂದಿರುವ ಡಿಪ್ಲೋಮಾ ಪದವಿ ಇದ್ದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯಕ್ಕೆ ನೋಂದಾಯಿಸಿಕೊಂಡ ಶಿಕ್ಷಣ ಸಂಸ್ಥೆಗಳ ಮೂಲಕ ಪ್ರವೇಶ ಪಡೆಯಬಹುದಾಗಿದೆ.
ಅರ್ಜಿ ಶುಲ್ಕ ರೂ.600 ಪಾವತಿಸಿ ನಂತರ ಅಭ್ಯರ್ಥಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ನಂಬರ್ ಮತ್ತು ಪಾಸ್ವರ್ಡ್ ನೀಡಲಾಗುವುದು.
ಅಪ್ಲಿಕೇಶನ್ ನಂಬರ್ ಮತ್ತು ಪಾಸ್ವರ್ಡ್ ಬಳಸಿ ಅಭ್ಯರ್ಥಿಯು ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ನಲ್ಲಿ ಪ್ರವೇಶ ಪಡೆಯಬಹುದಾಗಿದೆ.
ವಿಶ್ವವಿದ್ಯಾಲಯದಿಂದ ಅರ್ಜಿಯನ್ನು ಪರಿಶೀಲಿಸಿದ ನಂತರವಷ್ಟೇ ಅಭ್ಯರ್ಥಿಗಳಿಗೆ ಮುಂದಿನ ಪ್ರಕ್ರಿಯೆಯ ಮಾಹಿತಿ ನೀಡಲಾಗುವುದು.
ವಿಶೇಷ ಸೂಚನೆ

ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ದಿನದ 24 ಗಂಟೆಯು ಸಾಧ್ಯವಿದೆ. ಶಿಕ್ಷಣ ಶುಲ್ಕ ಮತ್ತು ಪರೀಕ್ಷಾ ಶುಲ್ಕವು ಆಯಾ ಕೋರ್ಸ್ಗೆ ಸಂಬಂಧ ಪಟ್ಟಂತಿರುತ್ತದೆ. ಶುಲ್ಕವನ್ನು ಆನ್ಲೈನ್ ಮೂಲಕವೂ ಪಾವತಿಸಬಹುದಾಗಿದೆ. ಕೇಳಲಾದ ಸೂಕ್ತ ದಾಖಲೆಗಳು , ಸ್ಕ್ಯಾನ್ ಮಾಡಿದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು.

English summary
Sikkim Manipal University, Directorate of Distance Education has opened admissions for the upcoming academic year

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia