ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೋರ್ಸುಗಳಿಗೆ ಪ್ರವೇಶಾತಿ

Posted By:

ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದ ಕಾರ್ಯಕ್ರಮಗಳಡಿ ಮನೆಯಲ್ಲಿದ್ದುಕೊಂಡು/ ವೃತ್ತಿನಿರತರಾಗಿದ್ದುಕೊಂಡು ಖಾಸಗಿಯಾಗಿ ವಿದ್ಯಾಭ್ಯಾಸ ಮಾಡಲು ಅವಕಾಶವುಳ್ಳ ಈ ಕೆಳಗಿನ ಕೋರ್ಸುಗಳಿಗೆ 2017-18ರ ಸಾಲಿನ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ದೂರುಶಿಕ್ಷಣದ ಕೇಂದ್ರಗಳಿಂದ ಅಥವಾ ಅಂಚೆ ಮೂಲಕ ಅರ್ಜಿಗಳನ್ನು ಪಡೆದು ಸೆಪ್ಟೆಂಬರ್ 30 ರೊಳಗೆ ಕಛೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.

ಕೋರ್ಸುಗಳ ವಿವರ

ಪದವಿ ಮಟ್ಟದ ಕೋರ್ಸುಗಳು ಸ್ನಾತಕೋತ್ತರ ಕೋರ್ಸುಗಳು

(1) ಬಿ.ಎ.
(2) ಬಿ.ಕಾಂ.
(3) ಬಿ.ಬಿ.ಎ.

(1) ಎಂ.ಎ. (ಅರ್ಥಶಾಸ್ತ್ರ)
(2) ಎಂ.ಎ. (ಇತಿಹಾಸ)
(3) ಎಂ.ಎ. (ರಾಜ್ಯಶಾಸ್ತ್ರ)
(4) ಎಂ.ಎ. (ಸಮಾಜಶಾಸ್ತ್ರ)
(5) ಎಂ.ಎ. (ಇಂಗ್ಲೀಷ್)
(6) ಎಂ.ಎ. (ಕನ್ನಡ)
(7) ಎಂ.ಕಾಂ.

ಅರ್ಜಿ ಪಡೆಯವ ವಿಧಾನ

ನಿಗದಿಪಡಿಸಿಲಾದ ಯಾವುದೇ ಬ್ಯಾಂಕಿನಲ್ಲಿ ಶುಲ್ಕ ರೂ.200.00ನ್ನು ಮಂಗಳೂರು ವಿಶ್ವವಿದ್ಯಾನಿಲಯದ ಖಾತೆಗೆ ಚಲನ್ ಮುಖಾಂತರ ಪಾವತಿಸಿ ಈ ಕೆಳಕಂಡವರ ಕಛೇರಿಗಳಿಂದ ವಿವರಣಾ ಪುಸ್ತಕ ಮತ್ತು ಅರ್ಜಿ ನಮೂನೆಗಳನ್ನು ಖುದ್ದಾಗಿ ಪಡೆಯಬಹುದು.

  1.  ಸಂಯೋಜಕರು, ದೂರಶಿಕ್ಷಣ ಕೇಂದ್ರ, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟಾ, ಮಂಗಳೂರು-575 001. [ದೂರವಾಣಿ: 0824-2422633]
  2. ಸಂಯೋಜಕರು, ದೂರಶಿಕ್ಷಣ ಕೇಂದ್ರ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ - 577201. [ದೂರವಾಣಿ: 08272- 221201]
  3. ಸಂಯೋಜಕರು, ದೂರಶಿಕ್ಷಣ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, ಉಡುಪಿ -576101. [ದೂರವಾಣಿ: 0820-2583604.]
  4. ನಿರ್ದೇಶಕರು, ದೂರಶಿಕ್ಷಣ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ವಾಣಿಜ್ಯ ಸಂಕೀರ್ಣ, ಮಂಗಳಗಂಗೋತ್ರಿ -574 199. [ದೂರವಾಣಿ : 0824-2287824, 2287281.]

ಮಂಗಳೂರು ವಿವಿ ದೂರ ಶಿಕ್ಷಣ

ಅಂಚೆ ಮೂಲಕ ಅರ್ಜಿ ಪಡೆಯುವ ವಿಧಾನ

ರೂ.240 ಶುಲ್ಕವನ್ನು ವಿವರಣಾ ಪುಸ್ತಕದಲ್ಲಿ ನಮೂದಿಸಿದ ಬ್ಯಾಂಕ್‍ನಲ್ಲಿ ಮಾತ್ರ ಪಾವತಿಸಿದ ಬಗ್ಗೆ ಚಲನ್/ಡಿಮಾಂಡ್ ಡ್ರಾಫ್ಟ್‍ನ್ನು ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಮೇಲಿನ ವಿಳಾಸದಲ್ಲಿರುವ ನಿರ್ದೇಶಕರು/ಸಂಯೋಜಕರಿಗೆ ಕಳುಹಿಸಿ ವಿವರಣಾ ಪುಸ್ತಕ ಮತ್ತು ಅರ್ಜಿ ನಮೂನೆಗಳನ್ನು ಅಂಚೆ ಮುಖಾಂತರ ಪಡೆಯಬಹುದು.

ಅರ್ಜಿ ಸಲ್ಲಿಕೆ

ಭರ್ತಿಗೊಳಿಸಿದ ಅರ್ಜಿಗಳನ್ನು ನಿಗದಿತ ಪ್ರವೇಶಾತಿ ಶುಲ್ಕದೊಂದಿಗೆ ಸಂಬಂಧಪಟ್ಟ ಮೂಲ ಅಂಕಪಟ್ಟಿ (ಎಸ್ ಎಸ್ ಎಲ್ ಸಿ/ ಪಿಯುಸಿ/ ಡಿಗ್ರಿ), 05 ಸಂಖ್ಯೆಯ ಪಾಸ್‍ಪೋರ್ಟ್ ಸೈಜ್ ಫೋಟೊದೊಂದಿಗೆ ಮೇಲಿನ ಆಯ್ಕೆ ಮಾಡಿದ ಯಾವುದಾದರೊಂದು ಕೇಂದ್ರಕ್ಕೆ ದಿನಾಂಕ 30.09.2017 ರೊಳಗೆ ತಲುಪುವಂತೆ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಹೊರತುಪಡಿಸಿ ಇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರವೇಶಾತಿ ಬಯಸಿದಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ ಇವರಿಂದ ಅರ್ಹತಾ ಪ್ರಮಾಣ ಪತ್ರ(Eligibility Certificate)ವನ್ನು ಸಲ್ಲಿಸತಕ್ಕದು

ಸೂಚನೆ: ಹೆಚ್ಚಿನ ವಿವರಗಳಿಗೆ ಮಾಹಿತಿಪುಸ್ತಕವನ್ನು ಪರಿಶೀಲಿಸುವುದು.

ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.mangaloreuniversity.ac.in

English summary
Applications are invited in the prescribed form for admission to the following courses under the Distance Education Programmes of Mangalore University for the academic year 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia