ಜರ್ಮನ್ ಚಾನ್ಸೆಲರ್ ಫೆಲೋಶಿಪ್ಸ್ ಗೆ ಅರ್ಜಿ ಆಹ್ವಾನ

Written By: Nishmitha B

ದಿ ಅಲೆಕ್ಸಂಡರ್ ವೊನ್ ಹಂಬೋಲ್ಡ್ಟ್ ಫೌಂಡೇಶನ್, ಜರ್ಮನ್ ಚ್ಯಾನ್ಸೆಲರ್ ಫೆಲೋಶಿಪ್ ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಬ್ರೆಜಿಲ್, ಚೀನಾ, ಭಾರತ, ರಷ್ಯಾ ಮತ್ತು ಯುಎಸ್‌ಎ ಯ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ನೀವು ಸೆಲೆಕ್ಟ್ ಆದ್ರೆ ನಿಮಗೆ ಜರ್ಮನ್‌ನಲ್ಲಿ ಕೆರಿಯರ್ ಮುಂದುವರಿಸಲು ಅವಕಾಶ ಸಿಗುವುದು

ಅಭ್ಯರ್ಥಿಗಳು ಅವರ ಫೀಲ್ಡ್‌ ವರ್ಕ್‌ ಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಅಭ್ಯರ್ಥಿಗಳು ಏನು ಮಾಡಬೇಕು ಅಂದ್ರೆ ಅವರ ಪ್ರೊಜೆಕ್ಟ್ ಐಡಿಯಾ ಡೆವಲೆಪ್ ಮಾಡಿ, ಹೋಸ್ಟ್ ಅವರನ್ನ ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಿ. ಹೋಸ್ಟ್‌ ಅವರಿಂದ ಕಂಫರ್ಮೇಶನ್ ಸಿಕ್ಕರೆ ಮಾತ್ರ ಅಪ್ಲೈ ಮಾಡಬಹುದು

ಜರ್ಮನ್ ಚಾನ್ಸೆಲರ್ ಫೆಲೋಶಿಪ್ಸ್ ಗೆ ಅರ್ಜಿ ಆಹ್ವಾನ

ಈ ಮೊದಲೇ ಈ ಫೌಂಡೇಶನ್‌ನ ಸ್ಪಾನ್ಸರ್ ಆಗಿದ್ದರೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ ಹಾಗೆಯೇ ಜರ್ಮನ್‌ನಲ್ಲಿ ಕಳೆದ 6 ತಿಂಗಳುಗಳಿಂದ ಇಲ್ಲ ಅದಕ್ಕಿಂತ ಹೆಚ್ಚು ದಿನದಿಂದ ಜರ್ಮನ್‌ನಲ್ಲಿ ನೆಲಸಿದ್ದರೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 15, 2018

ನಿಯಮಗಳು:

 • ಕೇವಲ ಬ್ರೆಜಿಲ್, ಚೀನಾ, ಭಾರತ, ರಷ್ಯಾ ಹಾಗೂ ಯುಎಸ್‌ಎ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
 • ಪದವೀಧರರಾಗಿದ್ದು, ಅಧಿಕೃತ ವಿಶ್ವವಿದ್ಯಾನಿಲಯದಿಂದ ಡಿಗ್ರಿ ಪಡೆದು 12 ವರ್ಷ ಮೀರಿರಬಾರದು
 • ಜರ್ಮನ್ ಹಾಗೂ ಇಂಗ್ಲೀಷ್ ಭಾಷೆಯ ಕೌಶಲ್ಯ ಹೊಂದಿರಬೇಕು. ಅಷ್ಟೇ ಅಲ್ಲ ತಮ್ಮದೇ ರಿಸರ್ಚ್ ಆಕ್ಟಿವಿಟಿಸ್ ನಲ್ಲಿಲೀಡರ್ ಶಿಪ್ ಆಗಿ ಕೆಲಸ ಮಾಡಿರುವ ಅನುಭವವಿರಬೇಕು
 • ಸುಮಾರು 2 ಪೇಜ್‌ನ ಪೇರಣಾ ಪತ್ರ ಸಲ್ಲಿಸಬೇಕು
 • ೩ ಪೇಜ್‌ನ ಪ್ರೊಜೆಕ್ಟ್ ಪ್ಲ್ಯಾನ್ ಪತ್ರದ ಜತೆ, ಅರ್ಜಿ ಸಲ್ಲಿಕೆ ಮುನ್ನ ಹೋಸ್ಟ್ ಜತೆ ಚರ್ಚಿಸಿ
 • ಜರ್ಮನ್ ಹೋಸ್ಟ್‌ ಅವರ ಕಂರ್ಫಮೇಶನ್ ಮಾಡಿರುವ ಡೀಟೆಲ್ಡ್ ಸ್ಟೇಟ್‌ಮೆಂಟ್ ಅರ್ಜಿ ಜತೆಗಿರಿಸಿ
 • ಅಭ್ಯರ್ಥಿಯ ವೃತ್ತಿ, ವೈಯಕ್ತಿಕ ಹಾಗೂ ಶೈಕ್ಷಣಿಕ ಜೀವನಕ್ಕೆ ಸಂಬಂಧಪಟ್ಟಂತೆ ೨ ರೆಫರೆನ್ಸ್ ಬೇಕು

ಜರ್ಮನ್ ಚಾನ್ಸೆಲರ್ ಫೆಲೋಶಿಪ್ಸ್ ಗೆ ಅರ್ಜಿ ಆಹ್ವಾನ

ಲಾಭಗಳು:

 • ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳಿಗೆ €2,150, €2,450 or €2,750 ಫೆಲೋಶಿಪ್ ಸಿಗುವುದು
 • ಟ್ರಾವೆಲ್ ಖರ್ಚು ಹಾಗೂ ಜರ್ಮನ್ ಭಾಷೆ ಕೋರ್ಸ್ ಗಳಿಗೆ ಆರ್ಥಿಕ ಬೆಂಬಲ ಸಿಗುತ್ತದೆ
 • ಸ್ಟಡಿ ಟೂರ್ ಮೂಲಕ ಜರ್ಮನ್‌ನ ಪ್ರತಿಷ್ಟಿತ ಕಂಪನಿಗಳ ಜತೆ ಕೆಲಸ ಮಾಡಲು ವೇದಿಕೆ ಸಿಗುತ್ತದೆ
 • ಅಷ್ಟೇ ಅಲ್ಲ ಇನ್ನೂ ಅನೇಕ ರೀತಿಯ ಬೆಂಬಲ ಸಿಗುತ್ತದೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮುನ್ನ  ಅಫೀಶಿಯಲ್ ವೆಬ್‌ಸೈಟ್‌ ಗೆ ಭೇಟಿ ನೀಡಿ. ಬಳಿಕ ಅರ್ಜಿ ಸಲ್ಲಿಕೆ ವಿಧಾನ ಓದಿಕೊಳ್ಳಿ. ಅಭ್ಯರ್ಥಿಯ ಆಯ್ಕೆ 2 ವಿಧಗಳಲ್ಲಿ ನಡೆಯುತ್ತದೆ. ಡಾಕ್ಯುಮೆಂಟ್ಸ್ ಸಲ್ಲಿಸಿದ ಬಳಿಕ ಅಭ್ಯರ್ಥಿಗಳ ಅರ್ಜಿಯನ್ನ ಶಾರ್ಟ್ ಲಿಸ್ಟ್‌ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್‌ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಸೆಪ್ಟೆಂರ್ 15, 2018

English summary
In order to create the future leaders, the Alexander von Humboldt Foundation, has started inviting the online applications for the German Chancellor Fellowships

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia