ಅಲೈಯನ್ಸ್ ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ಪದವಿ ಕೋರ್ಸುಗಳಿಗೆ ಪ್ರವೇಶ

2017 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಲೈಯನ್ಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಡಿಸೈನ್ ಸಂಸ್ಥೆಯು ಬಿ.ಟೆಕ್ ಪ್ರವೇಶಾತಿಯನ್ನು ತನ್ನ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಪ್ರಕಟಿಸಿದೆ.

ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಏರೋಸ್ಪೇಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಅಂಡ್ ಇನ್ಫೋರ್ಮೇಷನ್ ಟೆಕ್ನೋಲಜಿ ಬಿ-ಟೆಕ್ ಕೋರ್ಸುಗಳಿಗೆ ಪ್ರವೇಶಾತಿಯನ್ನು ಆರಂಭಿಸಲಾಗಿದೆ. ಮೂರು ವರ್ಷಗಳ ಬಿ-ಟೆಕ್ ಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕವೂ ಪ್ರವೇಶ ಪಡೆಯಬಹುದಾಗಿದೆ.

ಬಿ-ಟೆಕ್ ಕೋರ್ಸುಗಳಿಗೆ ಪ್ರವೇಶ

2017 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಲೈಯನ್ಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಡಿಸೈನ್ ಸಂಸ್ಥೆಯು ಪ್ರವೇಶಾತಿಯನ್ನು ತನ್ನ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಪ್ರಕಟಿಸಿದೆ.

ಅರ್ಹತೆ

  • ಅಭ್ಯರ್ಥಿಯು ಹನ್ನೆರಡನೇ ತರಗತಿ ಉತ್ತೀರ್ಣರಾಗಿರಬೇಕು, ಕಡ್ಡಾಯವಾಗಿ ಫಿಸಿಕ್ಸ್ ಮತ್ತು ಮ್ಯಾಥೆಮ್ಯಾಟಿಕ್ಸ್ ಜೊತೆ ಕೆಮಿಸ್ಟ್ರಿ/ಬಯೋಟೆಕ್ನಾಲಜಿ/ಬಯಾಲಜಿ ವಿಷಯಗಳನ್ನು ಅಧ್ಯಯನ ಮಾಡಿರಬೇಕು.
  • ಮೇಲೆ ತಿಳಿಸಿರುವ ವಿಷಯಗಳಲ್ಲಿ ಅಭ್ಯರ್ಥಿಯು ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು (ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಶೇ.40)

ಲ್ಯಾಟರಲ್ ಎಂಟ್ರಿ ಬಯಸುವವರು

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಡಿಪ್ಲೋಮ ಅಥವಾ ತತ್ಸಮಾನ ಪದವಿ ಹೊಂದಿದ್ದು ಅಂತಿಮ ವರ್ಷ/ ಸೆಮಿಸ್ಟರ್ ನ ಪರೀಕ್ಷೆಯನ್ನು ಶೇ.45(ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಶೇ.40)ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
  • ಜೆ ಇ ಇ (ಮೇನ್), ಜೆ ಇ ಇ (ಪ್ರೌಢ), ಕೆ-ಸಿಇಟಿ, ಕಾಮೆಡ್-ಕೆ, ಅಲೈಯನ್ಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಎಂಟ್ರೆನ್ಸ್ ಟೆಸ್ಟ್ (ಎಯುಇಇಟಿ) ಅಥವಾ ಇನ್ನಿತರ ಯಾವುದೇ ರಾಜ್ಯ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿರಬೇಕು.

ಅಲೈಯನ್ಸ್ ವಿಶ್ವವಿದ್ಯಾಲಯ

ಬೆಂಗಳೂರಿನ ಆನೇಕಲ್ ಬಳಿ ಸ್ಥಾಪಿರವಾಗಿರುವ ಅಲೈಯನ್ಸ್ ವಿಶ್ವವಿದ್ಯಾಲಯವು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ. 2010 ರಲ್ಲಿ ಯುಜಿಸಿಯಿಂದ ಮಾನ್ಯತೆ ಪಡೆದ ಅಲೈಯನ್ಸ್ ವಿಶ್ವವಿದ್ಯಾನಿಲಯವು ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಉತ್ತಮ ಸೇವೆ ಒದಗಿಸುತ್ತ ಬಂದಿದೆ.

ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್,ಡಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಶಿಕ್ಷಣ ನೀಡುತ್ತಿದೆ. ಬೆಂಗಳೂರಿನ ಈ ಶಿಕ್ಷಣ ಸಂಸ್ಥೆಯು ವಿಶಾಲ ಕ್ಯಾಂಪಸ್ ಹೊಂದಿದ್ದು ವಿದ್ಯಾರ್ಥಿಗಳಿಗೆ ಓದಲು ಬೇಕಾದ ಸಕಲ ಸೌಲಭ್ಯಗಳನ್ನು ನೀಡುವುದರ ಜೊತೆಗೆ ನುರಿತ ಅಧ್ಯಾಪಕ ಬಳಗವನ್ನು ಹೊಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹೊಸತನವನ್ನು ನೀಡುವ ಉದ್ದೇಶ ಹೊಂದಿರುವ ಅಲೈಯನ್ಸ್ ಯುನಿವೆರ್ಸಿಟಿ 2025 ರ ವೇಳೆಗೆ ವಿಶ್ವದ ಅಗ್ರ ವಿಶ್ವವಿದ್ಯಾಲಗಳ ಪಟ್ಟಿಯಲ್ಲಿ ಗುರುತಿಸುವ ಆಶಯ ಹೊಂದಿದೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಈ ವಿಶ್ವವಿದ್ಯಾಲಯವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ http://ced.alliance.edu.in/php/admissions-btech.php

For Quick Alerts
ALLOW NOTIFICATIONS  
For Daily Alerts

English summary
Alliance University Opens Admissions for BTech Courses
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X