ಸಾಣೇಹಳ್ಳಿ ಡಿಪ್ಲೊಮಾ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

Posted By:

ಸಾಣೇಹಳ್ಳಿಯ ಶ್ರೀ ಶಿವಕೂಮಾರ ರಂಗಪ್ರಯೋಗಶಾಲೆಯಲ್ಲಿ ದಿನಾಂಕ ಜೂನ್ 27,28 ರಂದು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಗೆ ಸಂದರ್ಶನ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಪಡೆಯಬಹುದಾಗಿದೆ.

ಈ ರಂಗಪ್ರಯೋಗಶಾಲೆಯು 2008 ರಲ್ಲಿ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಶಾಸ್ತ್ರೀಯವಾಗಿ ಮತ್ತು ಪ್ರಾಯೋಗಿಕವಾಗಿ ರಂಗಭೂಮಿಯನ್ನು ಕಲಿಸುವ ಉದ್ದೇಶವನ್ನು ಹೊಂದಿದೆ.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ರಂಗಶಾಲೆಯ ವೆಬ್ಸೈಟ್ ವಿಳಾಸದ ಮೂಲಕ ಅರ್ಜಿಗಳನ್ನು ಪಡೆಯಬಹುದು ಅಥವಾ ನೇರವಾಗಿ ಶಾಲೆಯಲ್ಲಿಯೇ ಪಡೆಯಬಹುದಾಗಿದೆ.

ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಣೇಹಳ್ಳಿ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು

  • ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಜೆರಾಕ್ಸ್ ಪತ್ರಿ
  • ಪರಿಶಿಷ್ಟ ವರ್ಗ/ಪಂಗಡ/ಜಾತಿ ಸೇರಿದ್ದರೆ ಅದರ ವಿವರ
  • ವಿಶೇಷ ಆಸಕ್ತಿ, ಹವ್ಯಾಸಗಳಿದ್ದರೆ ಬರೆದು ಅರ್ಜಿಯೊಂದಿಗೆ ಲಗತ್ತಿಸಬೇಕು
  • ಶಾಲಾ ವರ್ಗಾವಣೆ ಪತ್ರದ ನಕಲು
  • ಇತ್ತೀಚಿನ ಮೂರು ಭಾವ ಚಿತ್ರಗಳು

ಸಂದರ್ಶನಕ್ಕೆ ಬರುವಾಗ ತರಬೇಕಾದ ವಿವರಗಳು

  • ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಮೂಲ ಪ್ರತಿ
  • ಇತರೆ ಪ್ರಶಸ್ತಿ ಪ್ರಮಾಣ ಪತ್ರಗಳು
  • ಪತ್ರಿಕಾ ಲೇಖನಗಳಿದ್ದರೆ ಅವುಗಳ ವಿವರ

ಸಂದರ್ಶನ ನಡೆಯುವ ದಿನಾಂಕ ಜೂನ್ 27,28

ಈ ರಂಗಶಾಲೆಯು ಅಭಿನಯವನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ಕಲಿಸುವ ಶಾಲೆಯಾಗಿ ರೂಪುಗೊಳ್ಳುತ್ತಿದೆ. ನಟ ಪರಂಪರೆ ಬೆಳೆಯಬೇಕೆಂಬುದೇ ಈ ಶಾಲೆಯ ಆಶಯವಾಗಿದ್ದು, ಅದಕ್ಕಾಗಿ ದೇಶದ ಹಲವು ಮೂಲರೂಪದ, ಅಪರೂಪದ ಪ್ರದರ್ಶಕ ಕಲೆಗಳನ್ನು ನೇರವಾಗಿ ಅದನ್ನೇ ಅಭ್ಯಾಸ ಮಾಡುತ್ತಿರುವವರ ಮೂಲಕ ಕಲಿಸಲಾಗುತ್ತಿದೆ.

ಈ ರಂಗಶಾಲೆಯಲ್ಲಿನ ಪಾಠ-ಪ್ರವಚನಗಳಿಗೆ ಬಹುಪಾಲು ರಾಜ್ಯ ಹಾಗೂ ರಾಜ್ಯದ ಅತಿಥಿ ಅಧ್ಯಾಪಕರುಗಳನ್ನು ಆಶ್ರಯಿಸಿದೆ. ವರ್ಷವರ್ಷವೂ ಅತಿಥಿ ಉಪನ್ಯಾಸಕರನ್ನು ಬದಲಾಯಿಸುವ ಮೂಲಕ ರಂಗ ಶಿಕ್ಷಣಕ್ಕೆ ವೈವಿಧ್ಯತೆಯನ್ನು ನೀಡಲಾಗಿದೆ.

ಶಾಲೆಯು ಆರಂಭವಾದಗಿನಿಂದ ಅನೇಕ ನಾಟಕಗಳನ್ನು ಹಾಗೂ ಅಭ್ಯಾಸ ಪ್ರಯೋಗಗಳನ್ನು ನಡೆಸಿದೆ. ಪ್ರತಿ ವರ್ಷ ಯಕ್ಷಗಾನ ದೊಡ್ಡಾಟ, ಸಣ್ಣಕತೆ, ಕಾವ್ಯಗಳ ಮೇಲಿನ ಆಶುವಿಸ್ತರಗಳು ನಡೆದಿವೆ.

ಹೆಚ್ಚಿನ ವಿವರಗಳಿಗಾಗಿ theatreschoolsanehalli.org ಗಮನಿಸಿ

English summary
Applications are invited from interested young boys and girls for one year theatre diploma at Sanehalli. candidates can download application from website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia