ಆಯುಷ್ ಸ್ನಾತಕೋತ್ತರ ಕೋರ್ಸ್‌: ಎರಡನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ

Posted By:

ಆಯುಷ್ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ಎರಡನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಮೊದಲ ಸುತ್ತಿನಲ್ಲಿ ಹಂಚಿಕೆಯಾಗದ, ಹೊಸದಾಗಿ ಸೇರ್ಪಡೆಯಾದ, ರದ್ದುಗೊಳಿಸಿದ, ಚಾಯ್ಸ್ 3 ಮತ್ತು 4 ರ ಮೊದಲೆರೆಡು ಚಾಯ್ಸ್ ಗಳಲ್ಲಿ ಶುಲ್ಕ ಪಾವತಿಸದ ಖಾಲಿ ಉಳಿದ ಸೀಟುಗಳು ಲಭ್ಯವಿರಲಿದೆ.

ಎರಡನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ

ಈ ಸೀಟುಗಳನ್ನು ಚಾಯ್ಸ್ 2 ರಲ್ಲಿ ಶುಲ್ಕ ಪಾವತಿಸಿ ಮೂಲ ದಾಖಲಾತಿ ಸಲ್ಲಿಸಿದ, ಚಾಯ್ಸ್ 3 ರಲ್ಲಿ ದಾಖಲಾತಿ ಸಲ್ಲಿಸಿದ, ದಾಖಲಾತಿ ಸಲ್ಲಿಸಿದರು ಸೀಟು ಸಿಗದ, ಸೀಟು ಹಂಚಿಕೆಯ ಆರ್ಡರ್ ಪಡೆಯದ ಅಭ್ಯರ್ಥಿಗಳು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದಾಗಿದೆ. ಮೂಲ ದಾಖಲಾತಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗಷ್ಟೇ ಎರಡನೇ ಸುತ್ತಿನಲ್ಲಿ ಸೀಟುಗಳ ರಿ-ಆರೆಂಜ್ಮೆಂಟ್ ಗೆ ಅವಕಾಶ ಇರಲಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಗುರುವಾರ ಮಧ್ಯಾಹ್ನ 3ರೊಳಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಆಯ್ಕೆ ದಾಖಲು ಪರಿಷ್ಕರಿಸಲು ಅಂದು ಸಂಜೆ 6ರಿಂದ ಇದೇ 28ರ ಸಂಜೆ 4ರವರೆಗೆ ಅವಕಾಶ ನೀಡಲಾಗಿದ್ದು, ಅಕ್ಟೊಬರ್ 28ರ ರಾತ್ರಿ 9ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ವೇಳಾಪಟ್ಟಿ

  • ರಿ-ಆರೆಂಜ್ಮೆಂಟ್ ಆಯ್ಕೆ:26-10-2017 ರ ಸಂಜೆ 6.00 ರಿಂದ 28-10-2017 ರ ಸಂಜೆ 4.00 ರವರೆಗೆ
  • ಎರಡನೇ ಸುತ್ತಿನ ಫಲಿತಾಂಶ ಪ್ರಕಟಣೆ: 28-10-2017 ರಂದು ಬೆಳಗ್ಗೆ 9.00 ರ ನಂತರ
  • ಶುಲ್ಕ ಪಾವತಿ ಮತ್ತು ಹಂಚಿಕೆ ಪಾತ್ರ ಪಡೆಯುವುದು: 30-10-2017 ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ರವರೆಗೆ
  • ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ: 31-10-2017 ರಂದು ಸಂಜೆ 4.00 ರೊಳಗೆ

ಸೀಟು ಪಡೆದ ವಿದ್ಯಾರ್ಥಿಗಳು ಅ.31ರಂದು ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ವಿವರಗಳಿಗೆ ವೆಬ್‌ಸೈಟ್  kea.kar.nic.in ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

English summary
For PG-Ayush courses, eligible candidates can log on to website and priorities their options for second round seat allotment as per the schedule.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia